ಕನ್​ಫ್ಯೂಸ್ ಆಗ್ಬೇಡಿ.. ಈಕೆ ಬಾಲಿವುಡ್​ ಬೆಡಗಿಯಲ್ಲ, ಕನ್ನಡದ ಕ್ಯೂಟ್ ನಟಿ; ಯಾರಿದು?

author-image
Veena Gangani
Updated On
ಕನ್​ಫ್ಯೂಸ್ ಆಗ್ಬೇಡಿ.. ಈಕೆ ಬಾಲಿವುಡ್​ ಬೆಡಗಿಯಲ್ಲ, ಕನ್ನಡದ ಕ್ಯೂಟ್ ನಟಿ; ಯಾರಿದು?
Advertisment
  • ಅದ್ಭುತ ನಟನೆಯ ಮೂಲಕ ಫ್ಯಾನ್ಸ್​ ಮನಸ್ಸು ಗೆದ್ದ ನಟಿ ಅಭಿಜ್ಞಾ
  • ಕಿರುತೆರೆಯ ಕ್ವೀನ್ ಅಭಿಜ್ಞಾ ಭಟ್​ಗೆ ಅಭಿಮಾನಿಗಳಿಂದ ಮೆಚ್ಚುಗೆ
  • ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ಈ ಫೋಟೋಸ್

ಕಿರುತೆರೆಯ ಅಂದಗಾತಿ, ಚಂದಗಾತಿಯಾಗಿರೋ ನಟಿ ಅಭಿಜ್ಞಾ ಭಟ್ ಸದ್ಯ ಸ್ಮಾಲ್ ಸ್ಕ್ರೀನ್ ಧಾರಾವಾಹಿಗಳಲ್ಲಿ ಫುಲ್ ಬ್ಯುಸಿ ಆಗಿಬಿಟ್ಟಿದ್ದಾರೆ. ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ರಾಮಾಚಾರಿ ಸೀರಿಯಲ್​​ನಲ್ಲಿ ನಟಿಸಿದ್ದರು.

publive-image

ಅಲ್ಲದೇ ಗೌರಿ ಶಂಕರ ಧಾರಾವಾಹಿಯಲ್ಲಿ ಐಶೂ ಎಂಬ ಪಕ್ಕಾ ಹಳ್ಳಿ ಹುಡುಗಿಯ ವಿಭಿನ್ನ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಪಟಪಟ ಅಂತ ಅರಳು ಹುರಿದಂತೆ ಮಾತ್ನಾಡೋ ಸುಂದರಿ, ಸದಾ ನಗು ಮೊಗದ ಚಲುವೆ ಎಂದರೆ ಅಭಿಜ್ಞಾ ಭಟ್​​. ರಾಮಾಚಾರಿ, ಗೌರಿಶಂಕರ ಸೇರಿದಂತೆ ಹಲವು ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದಾರೆ ನಟಿ. ಸದ್ಯ ಭರ್ಜರಿ ಬ್ಯಾಚುಲರ್ಸ್​ ಶೋನಲ್ಲಿ ಮೋಡಿ ಮಾಡ್ತಿದ್ದಾರೆ.

ಇದನ್ನೂ ಓದಿ:ಕೋಲ್ಕತ್ತ ಹೋಟೆಲ್​​ನಲ್ಲಿ ಭೀಕರ ಬೆಂಕಿ ಅವಘಡ.. 14 ಮಂದಿ ಸಜೀವ ದಹನ

publive-image

ಇದರ ಜೊತೆಗೆ ಸ್ಟಾರ್​ ಸುವರ್ಣ ವಾಹಿನಿಯಲ್ಲಿ ಶೀಘ್ರದಲ್ಲಿ ಪ್ರಸಾರವಾಗಲಿರೋ ಸ್ನೇಹದ ಕಡಲಲ್ಲಿ ಧಾರಾವಾಹಿಯಲ್ಲಿ ಮುಖ್ಯವಾದ ಪಾತ್ರ ಮಾಡ್ತಿದ್ದಾರೆ. ಅಣ್ಣನ ಕಂಡ್ರೇ ಉರಿದುಬಿಳೋ ಜೋರು ತಂಗಿ ಪಾತ್ರ ಇದು.

publive-image

ಸದ್ಯ ಅಭಿಜ್ಞಾ ಹೊಸ ಫೋಟೋಶೂಟ್ ಮಾಡಿಸಿದ್ದು, ಅದರಲ್ಲಿ ಸಖತ್​ ಮುದ್ದಾಗಿ ಕ್ಯಾಮರಾಗೆ ಪೋಸ್​ಕೊಟ್ಟಿದ್ದಾರೆ. ಸೀರೆಯಲ್ಲೇ ಹೆಚ್ಚಾಗಿ ರೀಲ್ಸ್​, ಫೋಟೋಗಳನ್ನು ಕ್ಲಿಕ್ಕಿಸೋ ಚಲುವೇ ಇದೇ ಫಸ್ಟ್​ ಟೈಮ್ ವಿಭಿನ್ನವಾಗಿ ಫೋಟೋಶೂಟ್​ ಮಾಡಿಸಿದ್ದಾರೆ.

publive-image

ಶ್ವೇತ ವರ್ಣದ ವೆಸ್ಟರ್ನ್​ ಔಟ್​ಫಿಟ್​ ಧರಿಸಿರೋ ನಟಿ, ಕೈಯಲ್ಲಿ ಬುಕ್, ಪಕ್ಕದಲ್ಲಿ ಕುದುರೆ ಹಿಡಿದು ಕಿರುನಗೆ ಬೀರಿದ್ದಾರೆ. ಇನ್ನೂ ನಟಿ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಇದೇ ಫೋಟೋಸ್ ನೋಡಿದ ಅಭಿಮಾನಿಗಳು ಅಭಿಜ್ಞಾ ಅಂದಕ್ಕೆ ಫಿದಾ ಆಗಿದ್ದಾರೆ. ಫ್ಯಾನ್ಸ್ ಹಾಲಿವುಡ್​ ಹೀರೋಯಿನ್​ ಥರ ಕಾಣ್ತಿದ್ದೀರಾ ಮೇಡಮ್​ ಎಂದು ಕಾಮೆಂಟ್ಸ್​ ಕೂಡ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment