​ರಿಯಲ್ ಗಂಡನ ಜೊತೆ ನಟಿ ಐಶ್ವರ್ಯಾ ಸಾಲಿಮಠ ಮೋಜು ಮಸ್ತಿ; ದಂಪತಿ ಹೋಗಿದ್ದು ಎಲ್ಲಿಗೆ?

author-image
Veena Gangani
Updated On
​ರಿಯಲ್ ಗಂಡನ ಜೊತೆ ನಟಿ ಐಶ್ವರ್ಯಾ ಸಾಲಿಮಠ ಮೋಜು ಮಸ್ತಿ; ದಂಪತಿ ಹೋಗಿದ್ದು ಎಲ್ಲಿಗೆ?
Advertisment
  • ಅಗ್ನಿಸಾಕ್ಷಿ ಸೀರಿಯಲ್​ ಮೂಲಕ ಖ್ಯಾತಿ ಪಡೆದಿರೋ ನಟಿ ಐಶ್ವರ್ಯಾ
  • ಕಿರುತೆರೆ ನಟಿ ಐಶ್ವರ್ಯಾ ಸಾಲಿಮಠ ಅಭಿನಯಕ್ಕೆ ಫ್ಯಾನ್ಸ್​ ಫುಲ್ ಫಿದಾ
  • ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ ದಂಪತಿ ಫೋಟೋಸ್

ಕನ್ನಡ ಕಿರುತೆರೆ ನಟಿ ಅಗ್ನಿಸಾಕ್ಷಿ ಸೀರಿಯಲ್​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದಿರೋ ನಟಿ ಎಂದರೆ ಅದು ಐಶ್ವರ್ಯಾ ಸಾಲಿಮಠ. ನೆಗೆಟಿವ್ ಶೇಡ್​ನಲ್ಲಿ ಕಾಣಿಸಿಕೊಳ್ಳುವ ನಟಿ ಐಶ್ವರ್ಯಾ ಸಾಲಿಮಠ ಈಗ ಪತಿ ಜೊತೆಗೆ ಜಾಲಿ ಮೂಡ್​ನಲ್ಲಿದ್ದಾರೆ.

publive-image

ಹೌದು, ರಾಮಾಚಾರಿ ಧಾರಾವಾಹಿಯ ವಿಲನ್ ವೈಶಾಖ ಪಾತ್ರಧಾರಿ ಐಶ್ವರ್ಯ ವಿನಯ್ ಸದ್ಯ ಮಳೆ ನಡುವೆ ಗಂಡನ ಜೊತೆ ಟ್ರಿಪ್ ಮಾಡಿದ್ದಾರೆ. ಅಗ್ನಿಸಾಕ್ಷಿ ಸೀರಿಯಲ್​​​​ ಮೂಲಕ ಅಪಾರ ಅಭಿಮಾನಿಗಳ ಹೃದಯ ಗೆದ್ದ ನಟಿ ಐಶ್ವರ್ಯ ಸಾಲಿಮಠ ಇದೀಗ ಸೋಷಿಯಲ್​ ಮಿಡಿಯಾದಲ್ಲಿ ಯಾವಾಗಲೂ ಹಾಟ್​ ಟಾಪಿಕ್ ಆಗಿಯೇ ಇರುತ್ತಾರೆ.

ಇದನ್ನೂ ಓದಿ:ಪುಷ್ಪ-2 ಕ್ಲೈಮ್ಯಾಕ್ಸ್​​ ಲೀಕ್​.. ವೈರಲ್​ ವಿಡಿಯೋದಲ್ಲಿ ಅಲ್ಲು ಅರ್ಜುನ್​ ಲುಕ್​ ಹೇಗಿದೆ ಗೊತ್ತಾ?​

publive-image

ಸದ್ಯ ನಟಿ ಐಶ್ವರ್ಯಾ ಸಾಲಿಮಠ ಹಾಗೂ ವಿನಯ್ ದಂಪತಿ ಸೀರಿಯಲ್​​ನಿಂದ ಕೊಂಚ ಬ್ರೇಕ್​ ತೆಗೆದುಕೊಂಡು ಮಡಿಕೇರಿ ಪ್ರವಾಸ ಮಾಡುತ್ತಿದ್ದಾರೆ. ರಾಮಾಚಾರಿ ಸೀರಿಯಲ್​ನಲ್ಲಿ ನಾನು ಗರ್ಭಿಣಿ ಆಗಿದ್ದೆ. ಆದರೆ ಚಾರು ಯಡವಟ್ಟಿನಿಂದ ಗರ್ಭಪಾತ ಆಗಿದೆ ಅಂತ ಗಂಡ ಸೇರಿ ಮನೆಯವರಿಗೆಲ್ಲಾ ಮೋಸ ಮಾಡಿದ್ದಾರೆ ಅಂತ ವೈಶಾಖ ಹೇಳುತ್ತಿದ್ದಾರೆ.

ಆದರೆ ಇಲ್ಲಿ ಗಂಡನ ಜೊತೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇದೇ ಫೋಟೋಸ್​ಗಳನ್ನು ಅವರ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇದೇ ಫೋಟೋಸ್ ನೋಡಿದ ರಾಮಾಚಾರಿ ಖ್ಯಾತಿಯ ರಿತ್ವಿಕ್ ಕೃಪಾಕರ್ ಕ್ಯೂಟೀಸ್ ಎಂದು ಕಾಮೆಂಟ್ ಮಾಡಿದ್ರೆ, ಅಭಿಮಾನಿಗಳು ಮುದ್ದಾದ ಜೋಡಿ, ಇಬ್ಬರಿಗೂ ಯಾರ ದೃಷ್ಟಿಯೂ ಬೀಳದಿರಲಿ ಎಂದು ಕಾಮೆಂಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment