ಕನಸ್ಸಿನ ಮನೆಗೆ ಪ್ರವೇಶ ಮಾಡಿದ ಕಿರುತೆರೆ ನಟಿ ಅಕ್ಷತಾ ದೇಶಪಾಂಡೆ; ಫೋಟೋಸ್ ಇಲ್ಲಿವೆ!

author-image
Veena Gangani
Updated On
ಕನಸ್ಸಿನ ಮನೆಗೆ ಪ್ರವೇಶ ಮಾಡಿದ ಕಿರುತೆರೆ ನಟಿ ಅಕ್ಷತಾ ದೇಶಪಾಂಡೆ; ಫೋಟೋಸ್ ಇಲ್ಲಿವೆ!
Advertisment
  • ನಟಿ ಅಕ್ಷತಾ ದೇಶಪಾಂಡೆಗೆ ಫ್ಯಾನ್ಸ್​ಗಳಿಂದ ಶುಭ ಹಾರೈಕೆ
  • ಕಥೆಯೊಂದು ಶುರುವಾಗಿದೆ ಸೀರಿಯಲ್​ನಲ್ಲಿ ನಟಿ ಅಭಿನಯ
  • ನಟಿ ಅಕ್ಷತಾ ದೇಶಪಾಂಡೆ ನಿವಾಸದಲ್ಲಿ ಸಂಭ್ರಮ ಕಲೆಗಟ್ಟಿದೆ

ಕನ್ನಡ ಕಿರುತೆರೆಯಲ್ಲಿ ಮೂಡಿ ಬರುತ್ತಿದ್ದ ಕಥೆಯೊಂದು ಶುರುವಾಗಿದೆ ಸೀರಿಯಲ್​ ನಟಿ ಅಕ್ಷತಾ ದೇಶಪಾಂಡೆ ಮನೆಯಲ್ಲಿ ಸಂಭ್ರಮ ಮೈನವಿರೇಳಿಸಿದೆ.

publive-image

ಕಿರುತೆರೆ ನಟಿ ಅಕ್ಷತಾ ದೇಶಪಾಂಡೆ ಅವರು ಇದೀಗ ಹೊಸ ಮನೆಗೆ ಕಾಲಿಟ್ಟಿದ್ದಾರೆ. ತಮ್ಮ ಸುಂದರವಾದ ಮನೆಗೆ ಶಾರದಕೃಷ್ಣ ನಿಲಯ ಎಂದು ಹೆಸರಿಟ್ಟು ಗೃಹ ಪ್ರವೇಶ ಮಾಡಿದ್ದಾರೆ.

publive-image

ಗೃಹ ಪ್ರವೇಶ ಮಾಡಿದ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜನವರಿ 31ರಂದು ಹೊಸ ಮನೆಗೆ ನಟಿಯ ಕುಟುಂಬಸ್ಥರು ಪ್ರವೇಶ ಮಾಡಿದ್ದಾರೆ.

ಇದನ್ನೂ ಓದಿ:ಲಕ್ಷ್ಮೀ ಬಾರಮ್ಮ ಖ್ಯಾತಿಯ ರಶ್ಮಿ ಪ್ರಭಾಕರ್​ ಮನೆಗೆ ಹೊಸ ಅತಿಥಿ ಆಗಮನ; ಏನದು?

publive-image

ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡ ನಟಿ  ನನ್ನ ಜೀವನದ ಅವಿಸ್ಮರಣೀಯ ದಿನ. ಕಠಿಣ ಪರಿಶ್ರಮ ಯಾವಾಗಲೂ ಫಲ ನೀಡುತ್ತದೆ. ನನ್ನ ಶ್ರಮದ ಫಲವೇ ನನ್ನ ಮನೆ. ದೊಡ್ಡ ಕನಸು, ಕಷ್ಟಪಟ್ಟು ಕೆಲಸ ಮಾಡಿ ಎಂದು ಬರೆದುಕೊಂಡಿದ್ದಾರೆ.

publive-image

ಇದೇ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಇದೇ ಫೋಟೋಸ್ ನೋಡಿದ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

publive-image

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಚಂದು ಬಿ ಗೌಡ ಹಾಗೂ ಅಕ್ಷತಾ ದೇಶಪಾಂಡೆ ಅಭಿನಯದ ಕಥೆಯೊಂದು ಶುರುವಾಗಿದೆ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. ಇದೇ ಸೀರಿಯಲ್‌ನಲ್ಲಿ ಕೃತಿ ಪಾತ್ರದಲ್ಲಿ ಅಕ್ಷತಾ ಹಾಗೂ ಯುವರಾಜ್ ಪಾತ್ರದಲ್ಲಿ ಚಂದು ಬಿ ಗೌಡ ನಟಿಸಿದ್ದರು.

publive-image

ಈಗಾಗಲೇ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಅಕ್ಷತಾ ದೇಶಪಾಂಡೆ ತಮಿಳು, ತೆಲುಗು ಭಾಷೆಯ ಧಾರಾವಾಹಿಗಳಲ್ಲಿ ನಟಿಸಿದ್ದರು. ಇದಾದ ಬಳಿಕ ಚಿಕ್ಕೆಜಮಾನಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment