/newsfirstlive-kannada/media/post_attachments/wp-content/uploads/2025/05/disha4.jpg)
ಕನ್ನಡ ಕಿರುತೆರೆ ನಟಿ, ಡಿಜಿಟಲ್ ಕ್ರಿಯೇಟರ್ ದಿಶಾ ಮದನ್ ಅವರು 78ನೇ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ: ಚೈತ್ರಾ ಕುಂದಾಪುರ, ರಂಜಿತ್ ಮದುವೆಗೆ ಗೌತಮಿ ಜಾಧವ್ ಹೋಗಲಿಲ್ಲವೇಕೆ? ಈ ಬಗ್ಗೆ ಏನಂದ್ರು?
ವಿಶೇಷ ಏನೆಂದರೆ 70 ವರ್ಷಗಳ ಹಿಂದಿನ ಅಮ್ಮನ ಕೆಂಪು ಬಣ್ಣದ ಸೀರೆಯನ್ನು ಗೌನ್ ಆಗಿ ಮಾಡಿಕೊಂಡು ರೆಡ್ ಕಾರ್ಪೆಟ್‌ನಲ್ಲಿ ನಟಿ ಹೆಜ್ಜೆ ಹಾಕಿದ್ದಾರೆ.
ಸದ್ಯ ನಟಿ ದಿಶಾ ಮದನ್ ಅವರು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಲಕ್ಷ್ಮೀ ನಿವಾಸ ಸೀರಿಯಲ್ನಲ್ಲಿ ಭಾವನಾ ಪ್ರಾತದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಶೂಟಿಂಗ್ ಬ್ಯುಸಿ ನಡುವೆಯೂ ಫ್ರಾನ್ಸ್‌ನಲ್ಲಿ ನಡೆಯುತ್ತಿರೋ ಅತೀ ದೊಡ್ಡ ಕಾನ್ ಫಿಲ್ಮ್ ಫೆಸ್ಟಿವಲ್‌ಗೆ ಕನ್ನಡದ ನಟಿ ಭಾಗಿಯಾಗಿದ್ದು ಹೆಮ್ಮೆಯ ವಿಚಾರ.
ಅದರಲ್ಲೂ ಈ ಕಾನ್ ಫಿಲ್ಮ್ ಫೆಸ್ಟಿವಲ್‌ಗೆ ದೇಶ ವಿದೇಶದಿಂದ ನಟ-ನಟಿಯರು ಭಾಗಿಯಾಗಿದ್ದಾರೆ. ಈ ಚಲನಚಿತ್ರೋತ್ಸವದಲ್ಲಿ ಕನ್ನಡ ಕಿರುತೆರೆ ನಟಿ ದಿಶಾ ಮದನ್ ಕೂಡ ಭಾಗಿಯಾಗಿದ್ದು, ರೆಡ್ ಕಾರ್ಪೆಟ್‌ನಲ್ಲಿ ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ.
ಅದರಲ್ಲೂ ಶಾರ್ಟ್ ಹೇರ್ನಲ್ಲಿ ಕೆಂಪು ಸೀರೆಯನ್ನು ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಲನಚಿತ್ರೋತ್ಸವ ಮೇ 13ರಿಂದ 24ರವರೆಗೆ ಇದು ನಡೆಯಲಿದೆ. ಸದ್ಯ ನಟಿ ದಿಶಾ ಅವರ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ