newsfirstkannada.com

PHOTOS: ಸಿಹಿ ಸುದ್ದಿ ಹಂಚಿಕೊಂಡ ನಟಿ ಕಾವ್ಯಾ ಗೌಡ; ಅಭಿಮಾನಿಗಳಿಂದ ಶುಭಾಶಯ

Share :

Published December 5, 2023 at 5:51am

    ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಕಾವ್ಯ ಗೌಡ ಫೋಟೋಸ್​!

    ಮೊದಲ ಮಗುವಿನ ನಿರೀಕ್ಷೆಯಲ್ಲಿ ಶುಭ ವಿವಾಹ ಸೀರಿಯಲ್​ ನಟಿ ಕಾವ್ಯ ಗೌಡ

    ತಮ್ಮ ಅದ್ಭುತ ನಟನೆ ಮೂಲಕ ಸಾಕಷ್ಟು ಅಭಿಮಾನಿಗಳು ಗಳಿಸಿಕೊಂಡ ನಟಿ

ಕನ್ನಡ ಕಿರುತೆರೆ ನಟಿ ಕಾವ್ಯ ಗೌಡ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಶುಭ ವಿವಾಹ, ಗಾಂಧಾರಿ, ರಾಧಾ ರಮಣ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ ಕಾವ್ಯ ಗೌಡ ಅವರು ತಮ್ಮ ಮಗುವಿನ ಬರುವಿಕೆಗಾಗಿ ಕಾಯುತ್ತಿದ್ದಾರೆ.

2021 ಡಿಸೆಂಬರ್ 1 ರಂದು ನಟಿ ಕಾವ್ಯ ಗೌಡ ಅವರು ಉದ್ಯಮಿ ಸೋಮಶೇಖರ್ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನು, ಮದುವೆಯ ಬಳಿಕ ನಟನೆಯಿಂದ ಕಾವ್ಯ ಗೌಡ ದೂರ ಉಳಿದುಕೊಂಡಿದ್ದರು. ಇದೀಗ ನಟಿ ಕಾವ್ಯ ತಮ್ಮ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಬೇಬಿ ಬಂಪ್​ ಫೋಟೋಶೂಟ್​​ ಶೇರ್​ ಮಾಡಿಕೊಂಡಿದ್ದಾರೆ.

ಇದರ ಜೊತೆಗೆ ಪ್ರೀತಿಯ ಅಕ್ಕ ಭವ್ಯಾ ಗೌಡ ಜೊತೆ ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ಕಾವ್ಯ ಗೌಡ ಹಾಗೂ ಸೋಮಶೇಖರ್ ದಂಪತಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಮುಂದಿನ ವರ್ಷ ಅಂದ್ರೆ 2024ರಲ್ಲಿ ಮಗು ಜನನವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಟಿ ಕಾವ್ಯ ಗೌಡ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿವೆ. ಈ ಸುದ್ದಿ ಕೇಳಿದ ಅಭಿಮಾನಿಗಳು ನಟಿಗೆ ಶುಭಾಶಯ ತಿಳಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PHOTOS: ಸಿಹಿ ಸುದ್ದಿ ಹಂಚಿಕೊಂಡ ನಟಿ ಕಾವ್ಯಾ ಗೌಡ; ಅಭಿಮಾನಿಗಳಿಂದ ಶುಭಾಶಯ

https://newsfirstlive.com/wp-content/uploads/2023/12/kavya-3.jpg

Load More