/newsfirstlive-kannada/media/post_attachments/wp-content/uploads/2025/06/kavya-gowda.jpg)
ಕನ್ನಡ ಕಿರುತೆರೆ ನಟಿ ಕಾವ್ಯಾ ಗೌಡ ಮಗಳ ಆರೈಕೆಯಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಜೊತೆಗೆ ಸಮಯ ಸಿಕ್ಕಾಗಲ್ಲೆಲ್ಲಾ ದೇಶ ವಿದೇಶ ಸುತ್ತುವುದರಲ್ಲಿ ಕಾಲ ಕಳೆಯುತ್ತಾರೆ.
ಇದನ್ನೂ ಓದಿ: RCB ಆಟಗಾರರಿಗೆ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮೇಲೆ ಸರ್ಕಾರದಿಂದ ಸನ್ಮಾನ.. ಅನುಮತಿ ಸಿಗುತ್ತಾ?
ಕನ್ನಡ ಕಿರುತೆರೆಯಲ್ಲಿ ಶುಭ ವಿವಾಹ, ಗಾಂಧಾರಿ, ರಾಧಾ ರಮಣ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು ನಟಿ ಕಾವ್ಯಾ ಗೌಡ. ಸದ್ಯ ಅಭಿನಯದಿಂದ ಬ್ರೇಕ್ ತಗೊಂಡಿರುವ ಕಾವ್ಯಾ ಗೌಡ ಫ್ಯಾಮಿಲಿ ಜೊತೆ ಸಂತಸದ ಸಮಯ ಕಳೆಯುತ್ತಿದ್ದಾರೆ.
ಕಳೆದ ಜನವರಿ 22ರಂದು ಮುದ್ದಾದ ಹೆಣ್ಣು ಮಗುವಿಗೆ ಕಾವ್ಯಾ ಗೌಡ ಜನ್ಮ ನೀಡಿದರು. ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ಪ್ರತಿಷ್ಠಾಪನೆ ದಿನವೇ ಮಗುವನ್ನು ವೆಲ್ಕಮ್ ಮಾಡಿ, ಮಗಳಿಗೆ ಪ್ರೀತಿಯಿಂದ ಸಿಯಾ ಎಂದು ಕರೆದಿದ್ದರು.
ಅಲ್ಲದೇ ಕಿರುತೆರೆ ನಟಿ ಕಾವ್ಯಾ ಗೌಡ ಆಗಾಗ ಮಗಳ ಜೊತೆಗೆ ಪ್ಯಾರಿಸ್ಗೆ ಹೋಗಿ ಬರುತ್ತಾ ಇರುತ್ತಾರೆ. ಇದೀಗ ನಟಿ ಕಾವ್ಯಾ ಗೌಡ ತಮ್ಮ ತಮ್ಮ ಸಹೋದರಿ ಭವ್ಯಾ ಗೌಡ ಫ್ಯಾಮಿಲಿ ಜೊತೆಗೆ ಸಿಂಗಾಪುರ್ ಪ್ರವಾಸ ಕೈಗೊಂಡಿದ್ದಾರೆ.
ಸಿಂಗಾಪುರ್‌ನಲ್ಲಿ ತಮ್ಮ ಕ್ಯೂಟ್ ಮಗಳು ಸಿಯಾ ಜೊತೆಗೆ ಸುಂದರ ಸಮಯ ಕಳೆದಿದ್ದಾರೆ. ಸಿಂಗಾಪುರ್‌ನಲ್ಲಿ ನಟಿ ಕಾವ್ಯಾ ಗೌಡ ಕ್ಲಿಕ್ಕಿಸಿಕೊಂಡ ಸುಂದರ ಫೋಟೋಗಳು ಹಾಗೂ ವಿಡಿಯೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇನ್ನೂ, 2021 ಡಿಸೆಂಬರ್ 1ರಂದು ನಟಿ ಕಾವ್ಯಾ ಗೌಡ ಅವರು ಉದ್ಯಮಿ ಸೋಮಶೇಖರ್ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಮದುವೆಯ ಬಳಿಕ ನಟನೆಯಿಂದ ಕಾವ್ಯಾ ಗೌಡ ದೂರ ಉಳಿದುಕೊಂಡಿದ್ದರು. ಈಗ ಮುದ್ದಾದ ಮಗಳ ಜೊತೆಗೆ ದೇಶ ವಿದೇಶ ಸುತ್ತುತ್ತಿದ್ದಾರೆ ಸ್ಟಾರ್ ನಟಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ