PHOTOS: ಅದ್ಧೂರಿಯಾಗಿ 2ನೇ ಮದುವೆಯಾದ ನಟಿ ಮಾನಸಾ ಮನೋಹರ್​; ಇಲ್ಲಿವೆ ಬ್ಯೂಟಿಫುಲ್ ಫೋಟೋಸ್

author-image
Veena Gangani
Updated On
PHOTOS: ಅದ್ಧೂರಿಯಾಗಿ 2ನೇ ಮದುವೆಯಾದ ನಟಿ ಮಾನಸಾ ಮನೋಹರ್​; ಇಲ್ಲಿವೆ ಬ್ಯೂಟಿಫುಲ್ ಫೋಟೋಸ್
Advertisment
  • ಪ್ರೀತಂ ಚಂದ್ರ ಎಂಬುವವರ ಜೊತೆಗೆ ಮದುವೆಯಾದ ನಟಿ ಮಾನಸ
  • ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ನಟಿ ಮದುವೆ ಫೋಟೋಸ್
  • ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರೋ ನಟಿ ಇವರು​

ಇತ್ತೀಚೆಗಷ್ಟೇ ಜೊತೆ ಜೊತೆಯಲಿ, ಲಕ್ಷ್ಮೀ ನಿವಾಸ ಸೀರಿಯಲ್​ ನಟಿ ಮಾನಸಾ ಮನೋಹರ್​ ತಮ್ಮ ಅಭಿಮಾನಿಗೆ ಗುಡ್​ನ್ಯೂಸ್​ವೊಂದನ್ನು ಕೊಟ್ಟಿದ್ದರು. ನಟಿ ಮಾನಸಾ ಮನೋಹರ್​ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್​ ಆಗಿರೋ ನಟಿ. ಹೊಸ ಹೊಸ ಫೋಟೋಶೂಟ್​ ಮೂಲಕ ಸುದ್ದಿಯಲ್ಲಿ ಇರುತ್ತಾರೆ.

ಇದನ್ನೂ ಓದಿ: ವಿಶ್ವದ ಮೊಟ್ಟ ಮೊದಲ ಮರದ ಉಪಗ್ರಹ ಆಕಾಶಕ್ಕೆ ಜಿಗಿದಿದೆ.. ಇನ್ನೇನಿದ್ದರೂ..

publive-image

ಇದೀಗ ನಟಿ ಮಾನಸಾ ಮನೋಹರ್ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೊನ್ನೆಯಷ್ಟೇ ನಟಿ ಮಾನಸಾ ಮನೋಹರ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಪ್ರೀತಂ ಚಂದ್ರ ಎಂಬುವವರ ಜೊತೆಗೆ ನಟಿ ಎಂಗೇಜ್ಮೆಂಟ್ ಆಗಿದ್ದರು. ನಟಿ ಕೈ ಹಿಡಿದ ಹುಡುಗ ಪ್ರೀತಂ ಚಂದ್ರ ಅವರು ಫುಟ್ ಬಾಲ್ ಪ್ಲೇಯರ್ ಆಗಿದ್ದಾರೆ. ಜೊತೆಗೆ ಫುಟ್ ಬಾಲ್ ಅಕಾಡೆಮಿ ಕೂಡ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

publive-image

ನಟಿ ತಮ್ಮ ಮದುವೆ ಫೋಟೋಗಳನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಹಿಂದೆ ಅತಿ ಶೀಘ್ರದಲ್ಲೇ ನಾನು ಅವರು ಮದುವೆಯಾಗುತ್ತೇವೆ ಎಂದು ತಿಳಿಸಿದ್ದರು. ಹಾಗೇ ಇದು ಮಾನಸಾ ಅವರಿಗೆ ಎರಡನೇ ಮದುವೆಯಾಗಿದೆ. ಎಲ್ಲರ ಸಂದೇಹಗಳಿಗೆ ಉತ್ತರ ಇದೆ. ಇದು ನನ್ನ ಎರಡನೇ ಮದುವೆ. ಕೆಲವು ಬಾರಿ ದೈಹಿಕವಾಗಿ ಮದುವೆಯಾಗುತ್ತೇವೆ ಆದರೆ ಯಾವುದೇ ಭಾವನಾತ್ಮಕ ಸಂಬಂಧವನ್ನು ಹೊಂದಿರುವುದಿಲ್ಲ. ನಾವು ಎಲ್ಲರ ಒಳಿತಿಗಾಗಿ ಮುಂದುವರಿಯಬೇಕು. ನಾವು ಮದುವೆಯಾಗುತ್ತಿದ್ದೇವೆ. ನನಗೆ ಯಾವುದೇ ಅಪರಾಧ ಎನಿಸುತ್ತಿಲ್ಲ. ಆದರೆ ಕೃತಜ್ಞತೆ ಮಾತ್ರ ಇದೆ. ಆದ್ದರಿಂದ ಅದನ್ನು ವ್ಯಕ್ತಪಡಿಸುತ್ತಿದ್ದೇನೆ ಅಂತ ಹೇಳಿದ್ದರು.

publive-image

ಸದ್ಯ ಮದುವೆ ಫೋಟೋಗಳು​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿವೆ. ಜೊತೆಗೆ ಅಭಿಮಾನಿಗಳು ಕೂಡ ನೆಚ್ಚಿನ ನಟಿಗೆ ಶುಭ ಹಾರೈಸುತ್ತಿದ್ದಾರೆ. ಇನ್ನೂ ನಟಿ ಮಾನಸಾ ಅವರು ಲಕ್ಷ್ಮೀ ನಿವಾಸ ಸೀರಿಯಲ್​ನಲ್ಲಿ ಸಖತ್​ ಬ್ಯುಸಿಯಾಗಿದ್ದಾರೆ. ಬಹುದೊಡ್ಡ ತಾರಗಣ ಹೊಂದಿರೋ ಈ ಧಾರಾವಾಹಿಯಲ್ಲಿ ಸಿದ್ದೇಗೌಡ ಅತ್ತಿಗೆ ನೀಲು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೌಪರ್ಣಿಕಾ ಜೊತೆ ಸೇರಿ ಸಿದ್ದು ಕುಟುಂಬವನ್ನು ಛಿದ್ರ ಛಿದ್ರ ಮಾಡಬೇಕು ಎಂದು ಪ್ಲಾನ್​​ ​ಮಾಡುತ್ತಿರುತ್ತಾಳೆ ನೀಲಿ. ಎಲ್ಲರ ಮುಂದೆ ಒಳ್ಳೆಯವಳಾಗಿ ಇಂದುಕೊಂಡೇ ಅದೇ ಕುಟುಂಬದ ಹಿಂದೆ ಸಂಚು ರೂಪಿಸುವ ನೆಗೆಟಿವ್​ ಪಾತ್ರ ಇದಾಗಿದೆ.

publive-image

ಈ ಹಿಂದೆ ನಟಿ ಅಭಿನಯಿಸುತ್ತಿದ್ದ ಜೊತೆ ಜೊತೆಯಲ್ಲಿ ಧಾರಾವಾಹಿಯಲ್ಲಿ ಮೀರಾ ಪಾತ್ರ ವೀಕ್ಷಕರಿಗೆ ಅಚ್ಚುಮೆಚ್ಚು. ಅಲ್ಲದೇ ಅಶ್ವಿನಿ ನಕ್ಷತ್ರ, ಶುಭವಿವಾಹ ಧಾರಾವಾಹಿಯಲ್ಲಿ ಊರ್ಮಿಳಾ ಪಾತ್ರದಲ್ಲಿ ಕಾಣಿಸಿಕೊಂಡರು. ಕನ್ನಡ ಮಾತ್ರವಲ್ಲದೇ ಮಾನಸಾ ಮನೋಹರ್ ಅವರು ತೆಲುಗು ಧಾರಾವಾಹಿಗಳಲ್ಲೂ ನಟಿಸಿ ಸೈ ಎನಿಸಿಕೊಂಡು ಅಲ್ಲಿಯೂ ಕೂಡ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment