newsfirstkannada.com

ಸ್ಪೆಷಲ್ ದಿನದಂದೇ ಅದ್ಧೂರಿಯಾಗಿ ಬೇಬಿ ಶವರ್ ಪಾರ್ಟಿ ಮಾಡಿದ ನಟಿ ನೇಹಾ ಗೌಡ; ಯಾರೆಲ್ಲಾ ಬಂದಿದ್ರು?

Share :

Published August 24, 2024 at 8:36am

    ಕ್ಯೂಟ್​ ಆಗಿರೋ ವಿಡಿಯೋ ಕ್ಲಿಪ್​ಗೆ ಅಭಿಮಾನಿಗಳು ​ಏನಂದ್ರು?

    ಜೂ.1ರಂದು ಫ್ಯಾನ್ಸ್​ಗೆ ​ಗುಡ್​ನ್ಯೂಸ್ ಕೊಟ್ಟಿದ್ದ ಫೇಮಸ್ ಜೋಡಿ

    ಅದ್ಭುತ ನಟನೆಯ ಮೂಲಕವೇ ಫ್ಯಾನ್ಸ್​ ಗಳಿಸಿಕೊಂಡ ನಟಿ

ಕನ್ನಡ ಕಿರುತೆರೆಯಲ್ಲಿ ಗೊಂಬೆ, ಬಿಗ್​ಬಾಸ್​ ಬೆಡಗಿ ನೇಹಾ ಗೌಡ ಮನೆಯಲ್ಲಿ ಸಂತಸದ ಮನೆ ಮಾಡಿದೆ. ಲಕ್ಷ್ಮೀ ಬಾರಮ್ಮ ಸೀರಿಯಲ್​ ಮೂಲಕ ಕನ್ನಡಿಗರ ಮನಸ್ಸಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿರೋ ನೇಹಾ ಗೌಡ ದಂಪತಿ ಜೂನ್​ 1ರಂದು ಅಭಿಮಾನಿಗಳಿಗೆ ಗುಡ್​ ನ್ಯೂಸ್ ಕೊಟ್ಟಿದ್ದರು. ಸದ್ಯ ನೇಹಾ ಗೌಡ ದಂಪತಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ: ನೇಹಾ ಗೌಡ ಸೀಮಂತ ಶಾಸ್ತ್ರದಲ್ಲಿ ತಾರೆಯರ ಬಳಗ; ಯಾರೆಲ್ಲಾ ಬಂದಿದ್ರು? ಫೋಟೋಗಳು ಇಲ್ಲಿವೆ ನೋಡಿ!

ಹೌದು, ನಟಿ ನೇಹಾ ಗೌಡ ಅವರು ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ ಗೊಂಬೆ ಪಾತ್ರದಲ್ಲಿ ಅಭಿನಯಿಸಿದವರು. ಗೊಂಬೆ ಪಾತ್ರದ ಮೂಲಕವೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ನಟಿ ನೇಹಾ ಗೌಡ ಹಾಗೂ ಚಂದನ್​ ಗೌಡ ಫೆಬ್ರವರಿ 18, 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಚಂದನ್​ ಗೌಡ ಅವರು ಕಲರ್ಸ್​ ಕನ್ನಡದಲ್ಲಿ ಮೂಡಿ ಬರುತ್ತಿರೋ ಅಂತರಪಟ ಸೀರಿಯಲ್​ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ನೇಹಾ ಗೌಡ ಇತ್ತೀಚೆಗಷ್ಟೇ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ಮಾಡಿಕೊಂಡಿದ್ದರು. ಈ ಸೀಮಂತಕ್ಕೆ ಕಿರುತೆರೆಯ ಸೆಲೆಬ್ರಿಟಿಗಳು ಆಗಮಿಸಿದ್ದರು. ಇದಕ್ಕೂ ಮುನ್ನ ನಟಿಯೂ ಬಹಳ ಅದ್ಧೂರಿಯಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಇದನ್ನೂ ಓದಿ: ನಮಸ್ಕಾರ ದೇವ್ರು.. ಡಾಕ್ಟರ್​ ಬ್ರೋಗೆ ಇದೆಂಥಾ ವರ! ಇದೇ ನೋಡಿ ಅತಿ ಹೆಚ್ಚು ವೀಕ್ಷಣೆ ಕಂಡ ವಿಡಿಯೋ!

ಅಲ್ಲದೇ ಬರ್ತ್​ ಡೇ ದಿನವೇ ಬನಶಂಕರಿಯಲ್ಲಿರೋ ​ಟಾಪಿಕ್ ಬಾರ್ ಅಂಡ್​ ಕಿಚನ್​ ಹೋಟೆಲ್​ನಲ್ಲಿ ಸ್ನೇಹಿತರ ಜೊತೆಗೆ ಗ್ರ್ಯಾಂಡ್ ಆಗಿ ಬೇಬಿ ಶವರ್ ಆಚರಿಸಿಕೊಂಡಿದ್ದಾರೆ. ವಿಶೇಷ ಎಂದರೆ ಪರಭಾಷೆಯ ಕಲಾವಿದರು ಕೂಡ ಬೇಬಿ ಶವರ್‌ನಲ್ಲಿ ಭಾಗಿಯಾಗಿದ್ದರು. ಜೊತೆಗೆ ನೇಹಾ ಗೌಡ ಅವರ ಅಕ್ಕ ಸೋನು ಗೌಡ, ಆಪ್ತ ಸ್ನೇಹಿತೆ ಅನುಪಮಾ ಗೌಡ, ಪತಿ ಚಂದನ್​ ಗೌಡ ಸೇರಿದಂತೆ ಹಲವಾರು ಜನರು ಭಾಗಿಯಾಗಿದ್ದರು. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಪೆಷಲ್ ದಿನದಂದೇ ಅದ್ಧೂರಿಯಾಗಿ ಬೇಬಿ ಶವರ್ ಪಾರ್ಟಿ ಮಾಡಿದ ನಟಿ ನೇಹಾ ಗೌಡ; ಯಾರೆಲ್ಲಾ ಬಂದಿದ್ರು?

https://newsfirstlive.com/wp-content/uploads/2024/08/neha-gowda5.jpg

Load More