ಹುಟ್ಟು ಹಬ್ಬದ ಸಂಭ್ರಮದಲ್ಲಿ ಅಣ್ಣಯ್ಯ ಸೀರಿಯಲ್​ ಪಾರು.. ನಟಿ ನಿಶಾ ರವಿಕೃಷ್ಣನ್ ಫೋಟೋಸ್​ ನೋಡಿ!

author-image
Veena Gangani
Updated On
ಹುಟ್ಟು ಹಬ್ಬದ ಸಂಭ್ರಮದಲ್ಲಿ ಅಣ್ಣಯ್ಯ ಸೀರಿಯಲ್​ ಪಾರು.. ನಟಿ ನಿಶಾ ರವಿಕೃಷ್ಣನ್ ಫೋಟೋಸ್​ ನೋಡಿ!
Advertisment
  • ಬಾಲ ನಟಿಯಾಗಿ ಆ್ಯಕ್ಟಿಂಗ್​ ಜರ್ನಿ ಶುರುಮಾಡಿದ ನಟಿ ನಿಶಾ ರವಿಕೃಷ್ಣನ್
  • ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ ಕಿರುತೆರೆ ಸ್ಟಾರ್ ನಟಿ ನಿಶಾ ರವಿಕೃಷ್ಣನ್
  • ರೌಡಿ ಬೇಬಿಯಾಗಿ ಜನಪ್ರಿಯತೆ ಪಡೆದುಕೊಂಡ ನಟಿ ಪಾರು ಆಗಿ ಮಿಂಚಿಂಗ್

ಬಾಲ ನಟಿಯಾಗಿ ಆ್ಯಕ್ಟಿಂಗ್​ ಜರ್ನಿ ಶುರುಮಾಡಿದ ನಟಿ ನಿಶಾ ರವಿಕೃಷ್ಣನ್​. ಮೂಲತಃ ಮಲಯಾಳಿ ಕುಟುಂಬ ಇವ್ರದ್ದು. ಅಪ್ಪ-ಅಮ್ಮನಿಗೆ ಒಬ್ಬಳೆ ಮಗಳು. ಕನ್ನಡವನ್ನ ಅರಳು ಹುರಿದಂತೆ ಮಾತ್ನಾಡ್ತಿದ್ದ ಚಲುವೆ ನಟನೆ ಜೊತೆಗೆ ಚಿಂಟು ಟಿವಿಯಲ್ಲಿ ನಿರೂಪಕಿ ಆಗಿಯೂ ಕೆಲಸ ಮಾಡಿದ್ರು.

ಇದನ್ನೂ ಓದಿ: ಕ್ಯಾರೆಟ್‌ ಹಲ್ವಾ, ಮಾವಿನ ಹಣ್ಣು ಮತ್ತು ಅನ್ನ; ಶುಭಾಂಶು ಶುಕ್ಲಾ ಗಗನಯಾನಕ್ಕೆ ಅಂತಿಮ ತಯಾರಿ ಹೇಗಿದೆ?

publive-image

ನಂತರ ವಿದ್ಯಾಭ್ಯಾಸಕ್ಕೆ ಒತ್ತು ಕೊಟ್ಟ ನಿಶಾ ಕೆಲ ವರ್ಷಗಳ ನಂತರ ಕಾಣಿಸಿಕೊಂಡಿದ್ದು ಸ್ಟಾರ್​ ಸುವರ್ಣದಲ್ಲಿ ಪ್ರಸಾರವಾದ ಚಂದನ್​ ಗೌಡ ಹಾಗೂ ಐಶ್ವರ್ಯ ಪಿಸೆ ಮುಖ್ಯ ಭೂಮಿಕೆಯಲ್ಲಿ ಸರ್ವ ಮಂಗಳ ಮಾಂಗಲ್ಯೆ ಧಾರಾವಾಹಿಯಲ್ಲಿ ನಿತ್ಯಾ ಅನ್ನೋ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ರು. ನಂತರ ಅರಸಿ ಬಂದಿದ್ದೆ ಗಟ್ಟಿಮೇಳ. ಇಲ್ಲಿಂದ ನಾಯಕಿಯಾಗಿ ಲಾಂಚ್​ ಆದ್ರು.

publive-image

ರೌಡಿ ಬೇಬಿ ಆಗಿ ಜನಪ್ರಿಯತೆ ಪಡೆದುಕೊಂಡರು. ಈ ಪ್ರಸಿದ್ಧಿ ಪರಭಾಷೆಯಲ್ಲೂ ಮಿಂಚುವಂತೆ ಮಾಡ್ತು. ಸದ್ಯ ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಪಾತ್ರದ ಮೂಲಕ ಯಶಸ್ಸಿನ ಓಟ ಮುಂದುವರೆಸಿದ್ದಾರೆ. ಅಂದಿಗೂ ಇಂದಿಗೂ ಇವ್ರು ಟಿವಿನ ಬಿಟ್ಟಿಲ್ಲ. ಇವರನ್ನು ವೀಕ್ಷಕರು ಕೈಬಿಟ್ಟಿಲ್ಲ.

ಇತ್ತೀಚೆಗೆ ಸ್ವಂತ ಮನೆ ಕನಸು ಕೂಡ ಈಡೇರಿದೆ. ಅದ್ಧೂರಿಯಾಗಿ ಗೃಹಪ್ರವೇಶದ ಕಾರ್ಯಕ್ರಮ ಜರುಗಿತ್ತು. ಇಷ್ಟಲ್ಲೇ ಪ್ರಸ್ತಾಪಿಸೋಕೆ ಕಾರಣ ನಿಮ್ಮ ನೆಚ್ಚಿನ ನಟಿ ನಿಶಾ ಅವ್ರು 25ರ ವಸಂತಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ನಟಿ ನಿಶಾ ಅವರು ಅದ್ಧೂರಿಯಾಗಿ ಹುಟ್ಟು ಹಬ್ಬ​ ಆಚರಣೆ ಮಾಡಿಕೊಂಡಿದ್ದಾರೆ. ಇವರ ಹುಟ್ಟು ಹಬ್ಬಕ್ಕೆ ಸಹ ನಟ, ಸ್ನೇಹಿತ ವಿಕಾಶ್​ ಉತ್ತಯ್ಯ ಸರ್​ಪ್ರೈಸ್​ ಭೇಟಿ ನೀಡಿ ಗೆಳತಿಗೆ ಶುಭ ಕೋರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment