newsfirstkannada.com

ಅಂತರಪಟ ಸಿರಿಗೆ ಒಲಿದು ಬಂದ ಅದೃಷ್ಟ.. ತೆಲುಗಿನ ಹೊಸ ಸೀರಿಯಲ್​ನಲ್ಲಿ ಅಭಿನಯ

Share :

Published March 19, 2024 at 5:11pm

  ತೆಲುಗಿನ ಧಾರಾವಾಹಿಯಲ್ಲಿ ಪ್ರಮುಖ ನಾಯಕ ನಟಿಯಾಗಿ ಅಭಿನಯ

  ಮಾರ್ಚ್​​​ 25 ರಿಂದ ತೆಲುಗಿನ ಟಿವಿ ಚಾನೆಲ್​ನಲ್ಲಿ ಸೀರಿಯಲ್ ಪ್ರಸಾರ

  ಪಕ್ಕ ಹಳ್ಳಿ ಹುಡುಗಿಯಾಗಿ ಲಂಗ ದಾವಣಿ ತೊಟ್ಟು ಪ್ರತಿಮಾ ಮಿಂಚಿಂಗ್

ನಮ್ಮ ಕನ್ನಡದ ಯುವ ನಟಿಯರಿಗೆ ಪರಭಾಷೆಯ ಕಿರುತೆರೆ ಕೂಡ ಅವಕಾಶಗಳನ್ನ ನೀಡುತ್ತಿದೆ. ಇಂತಹ ಅದ್ಭುತ ಅವಕಾಶಗಳನ್ನ ಚನ್ನಾಗಿ ಬಳಸಿಕೊಂಡು ಅದೆಷ್ಟೋ ಕನ್ನಡದ ನಟ- ನಟಿಯರು ತಮ್ಮ ಜೀವನ ಕಟ್ಟಿಕೊಂಡಿದ್ದಾರೆ. ಈಗ ಇದೇ ಲಿಸ್ಟ್​ಗೆ ಕನ್ನಡ ಕಿರುತೆರೆಯ ಮತ್ತೊಬ್ಬ ನಟಿ ಸೇರ್ಪಡೆಯಾಗಿದ್ದಾರೆ.

ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗ್ತಿರೋ ಅಂತರಪಟ ಧಾರಾವಾಹಿಯ ನಟಿ ಪ್ರತಿಮಾ ನಾಯಕಿ ಪಾತ್ರಧಾರಿಯ ತಂಗಿ, ಸಿರಿ ಅನ್ನೋ ಪಾತ್ರದಲ್ಲಿ ನಟಿಸ್ತಿದ್ದಾರೆ. ಇಲ್ಲಿ ತಂಗಿ ಪಾತ್ರ ನಟಿಸ್ತಿರೋ ಪ್ರತಿಮಾ ಅವರಿಗೆ ತೆಲುಗಿನ ಸಿವಂಗಿ ಧಾರಾವಾಹಿಯಲ್ಲಿ ಪ್ರಮುಖ ನಾಯಕ ನಟಿಯ ಪಾತ್ರ ಮಾಡೋಕೆ ಅವಕಾಶ ಹುಡುಕುಕೊಂಡು ಬಂದಿದೆ. ಸನ್​ ನೆಟ್​ವರ್ಕ್ ಜೆಮಿನಿ ವಾಹಿನಿಯಲ್ಲಿ ಇದೇ ಮಾರ್ಚ್​ 25ರಂದು ಪ್ರತಿ ದಿನರಾತ್ರಿ 7.30ಕ್ಕೆ ಸಿವಂಗಿ ಸೀರಿಯಲ್ ಮೂಡಿ ಬರಲಿದೆ.

ಸಿವಂಗಿ ಕಥೆ ತುಂಬಾ ಭಿನ್ನವಾಗಿದ್ದು ಪ್ರತಿಮಾ ನಾಯಕಿಯಾಗಿ ಆನಂದಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆನಂದಿ ಪಕ್ಕ ಹಳ್ಳಿ ಹುಡುಗಿ, ಲಂಗ ದಾವಣಿ ತೊಟ್ಟು ಓಡಾಡ್ಕೊಂಡು ಕುಟುಂಬಕ್ಕೆ ಬೆನ್ನೆಲುಬಾಗಿ ನಿಲ್ಲೋ ಹುಡುಗಿ. ತಾನು ಖುಷಿ ಆಗಿರೋದಲ್ಲದೆ, ತನ್ನ ಸುತ್ತಮುತ್ತಲಿನವರನ್ನು ಖುಷಿ ಆಗಿಟ್ಟುಕೊಳ್ಳೋದೆ ಆನಂದಿಯ ಪ್ರಮುಖ ಉದ್ದೇಶ. ಕಷ್ಟ ಅನ್ನೋವರ ಪಾಲಿಗೆ ಆನಂದಿ ದೇವತೆಯಾಗಿ ಕಣ್ಮುಂದೆ ಬರ್ತಾಳೆ. ಇದೇ ಈಸೀರಿಯಲ್‌ನ ಒನ್‌ಲೈನ್ ಸ್ಟೋರಿ.

ಕನ್ನಡದ ಸೀರಿಯಲ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಪ್ರತಿಮಾ ಇನ್ಮುಂದೆ ತೆಲುಗಿನ ಸಿವಂಗಿ ಧಾರಾವಾಹಿಯಲ್ಲೂ ನಾಯಕಿಯಾಗಿ ಮಿಂಚಲಿದ್ದಾರೆ. ಅವರ ಕರಿಯರ್‌ಗೆ ನಿಜಕ್ಕೂ ದೊಡ್ಡ ತಿರುವು ಪಡೆದಿದ್ದು ಈ ಸೀರಿಯಲ್‌ನಿಂದ ಮತ್ತಷ್ಟು ಅವಕಾಶಗಳು ಅವರಿಗೆ ಅರಸಿ ಬರಲಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂತರಪಟ ಸಿರಿಗೆ ಒಲಿದು ಬಂದ ಅದೃಷ್ಟ.. ತೆಲುಗಿನ ಹೊಸ ಸೀರಿಯಲ್​ನಲ್ಲಿ ಅಭಿನಯ

https://newsfirstlive.com/wp-content/uploads/2024/03/PRATIMA.jpg

Load More