/newsfirstlive-kannada/media/post_attachments/wp-content/uploads/2025/04/Priyanka-R-Chincholi.jpg)
ಕನ್ನಡ ಕಿರುತೆರೆ ನಟಿ ಪ್ರಿಯಾಂಕಾ ಚಿಂಚೋಳಿ ಮನೆಯಲ್ಲಿ ಸಂಭ್ರಮದ ಮೈನವಿರೇಳಿಸಿದೆ. ಹೌದು, ಹರ, ಹರ ಮಹಾದೇವ, ಮನಸೆಲ್ಲಾ ನೀನೇ ಸೇರಿದಂತೆ ಹಲವು ಸೀರಿಯಲ್ಗಳ ಮೂಲಕ ಜನಪ್ರಿಯತೆ ಪಡೆದುಕೊಂಡ ನಟಿ ಪ್ರಿಯಾಂಕಾ ಚಿಂಚೋಳಿ ತಮ್ಮ ಚೊಚ್ಚಲ ಮಗುವನ್ನು ಬರಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ‘ಕರ್ಣ’ ಸೀರಿಯಲ್ನಲ್ಲಿ ಬಿಗ್ ಸ್ಟಾರ್ಸ್ ನಟಿಯರೇ ಏಕೆ? ತಂಡದ ಹಿಂದಿನ ಗುಟ್ಟೇನು ಗೊತ್ತಾ?
ನಟಿ ಪ್ರಿಯಾಂಕಾ ಚಿಂಚೋಳಿ ಅವರು ಫೆಬ್ರವರಿ 27ರಂದು ಲಂಡನ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಮಗುವಿನ ಪಾದಗಳ ಫೋಟೋವನ್ನು ದಂಪತಿ ಶೇರ್ ಮಾಡಿಕೊಂಡಿದೆ. ಈ ಪೋಸ್ಟ್ ನೋಡಿದ ಅನೇಕರು ನಟಿ ಪ್ರಿಯಾಂಕಾಗೆ ಶುಭ ಹಾರೈಸಿದ್ದಾರೆ.
ನಟಿ ಪ್ರಿಯಾಂಕಾ ಅವರು 2021ರಲ್ಲಿ ರಾಕೇಶ್ ಕುಮಾರ್ ಎಂಬುವವರ ಮದುವೆಯಾಗಿದ್ದರು. ಈ ಹಿಂದೆ ಅದ್ಧೂರಿಯಾಗಿ ಸೀಮಂತ ಕೂಡ ಮಾಡಿಕೊಂಡಿದ್ದರು. ನಟಿ ಶೋಭಿತಾ ಶಿವಣ್ಣ, ಸೂರಜ್ ಹೆಗಡೆ ಸೇರಿದಂತೆ ಕಿರುತೆರೆ ಗಣ್ಯರು ಈ ಸೀಮಂತಕ್ಕೆ ಆಗಮಿಸಿ, ಶುಭ ಹಾರೈಸಿದ್ದರು.
View this post on Instagram
ಇನ್ನೂ, ಮದುವೆ ಆದ ಬಳಿಕ ಪ್ರಿಯಾಂಕಾ ಅವರು ಸೀರಿಯಲ್ನಿಂದ ಕೊಂಚ ಗ್ಯಾಪ್ ತೆಗೆದುಕೊಂಡಿದ್ರು. ಕಲಬುರಗಿ ಮೂಲದ ನಟಿ ಪ್ರಿಯಾಂಕಾ ಅವರು ಮಾಡೆಲ್ ಆಗಿದ್ದರು. ಮಾಡೆಲ್ ಆಗಿ ಮಿಂಚುತ್ತಿದ್ದ ನಟಿಗೆ ಹರ ಹರ ಮಹಾದೇವ ಧಾರಾವಾಹಿ ಸತಿ ಪಾತ್ರ ದೊಡ್ಡ ಜನಪ್ರಿಯತೆ ತಂದುಕೊಟ್ಟಿತು. ಸದ್ಯ ನಟಿ ಪ್ರಿಯಾಂಕಾ ದಂಪತಿಗೆ ಮಗಳು ಬಂದ ಖುಷಿಯಲ್ಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ