Advertisment

ಉದ್ಯಮಿ ಜೊತೆಗೆ ವೈಷ್ಣವಿ ಗೌಡ ನಿಶ್ಚಿತಾರ್ಥ; ಇಲ್ಲಿವೆ 10 ಗ್ರ್ಯಾಂಡ್​ ಫೋಟೋಸ್!

author-image
Veena Gangani
Updated On
ಉದ್ಯಮಿ ಜೊತೆಗೆ ವೈಷ್ಣವಿ ಗೌಡ ನಿಶ್ಚಿತಾರ್ಥ; ಇಲ್ಲಿವೆ 10 ಗ್ರ್ಯಾಂಡ್​ ಫೋಟೋಸ್!
Advertisment
  • ಸಿಂಗಲ್​ ಆಗಿದ್ದ ವೈಷ್ಣವಿ ಗೌಡ ಕೊನೆಗೂ ಮಿಂಗಲ್
  • ಸ್ಟಾರ್​ ನಟಿ ವೈಷ್ಣವಿ ಗೌಡ ಮದುವೆ ಯಾವಾಗ ಗೊತ್ತಾ?
  • ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥ ಸ್ಟಾರ್​ ನಟಿಯರು ಭಾಗಿ

ಕನ್ನಡದ ಸ್ಟಾರ್​ ನಟಿ ವೈಷ್ಣವಿ ಗೌಡ ಸದ್ಯ ಖುಷಿಯಲ್ಲಿದ್ದಾರೆ. ಇಷ್ಟು ದಿನ ಸೀರಿಯಲ್​ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದ ನಟಿ ವೈಷ್ಣವಿ ಗೌಡ, ಈಗ ವೈಯಕ್ತಿಕ ಜೀವನಕ್ಕೆ ಸಮಯ ಕೊಡಲು ಮುಂದಾಗಿದ್ದಾರೆ.

Advertisment

ಇದನ್ನೂ ಓದಿ:ಈಕೆ ಕನ್ನಡ ಕಿರುತೆರೆಯ ಕ್ಯೂಟೆಸ್ಟ್ ನಟಿ.. ಯಾರಿರಬಹುದು ಗೇಸ್​ ಮಾಡಿ ನೋಡೋಣ

publive-image

ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಸಖತ್​ ಫೇಮಸ್​ ಆಗಿದ್ದರು ನಟಿ ವೈಷ್ಣವಿ ಗೌಡ. ತಮ್ಮ ಕ್ಯೂಟ್​ ನಟನೆ ಮೂಲಕವೇ ವೀಕ್ಷಕರ ಮನಸ್ಸಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡರು.

publive-image

ಈಗ ನಟಿ ವೈಷ್ಣವಿ ಗೌಡ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಸೀತಾ ರಾಮ ಸೀರಿಯಲ್​ನಲ್ಲಿ ಸೀತಾ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Advertisment

publive-image

ಇದೀಗ ನಟಿ ವೈಷ್ಣವಿ ಗೌಡ ಅಭಿಮಾನಿಗಳಿಗೆ ಗುಡ್​ನ್ಯೂಸ್​ವೊಂದನ್ನು ಕೊಟ್ಟಿದ್ದಾರೆ. ಸಿಂಗಲ್​ ಆಗಿದ್ದ ವೈಷ್ಣವಿ ಗೌಡ ಮಿಂಗಲ್​ ಆಗೋದಕ್ಕೆ ಸಜ್ಜಾಗಿದ್ದಾರೆ.

publive-image

ನಿನ್ನೆ, ಏಪ್ರಿಲ್ 14ರಂದು ನಟಿ ವೈಷ್ಣವಿ ಗೌಡ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಟಿ ವೈಷ್ಣವಿ ಗೌಡ ಉದ್ಯಮಿ ಜೊತೆಗೆ ಮದುವೆಗೆ ರೆಡಿಯಾಗಿದ್ದಾರೆ.

publive-image

ಉದ್ಯಮಿ ಅಕಾಯ್ ಹಾಗೂ ವೈಷ್ಣವಿ ಗೌಡ ಗುರು ಹಿರಿಯರ ಸಮ್ಮುಖದಲ್ಲಿ ಒಬ್ಬರೊಬ್ಬರು ಉಂಗುರ ಬದಲಾಯಿಸಿಕೊಂಡಿದ್ದಾರೆ.

Advertisment

publive-image

ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥ ಸಮಾರಂಭಕ್ಕೆ ಸ್ಯಾಂಡಲ್​​ವುಡ್​ ಸ್ಟಾರ್​ ನಟಿ ಅಮೂಲ್ಯ ಗೌಡ ದಂಪತಿ ಭಾಗಿಯಾಗಿದ್ದರು.

publive-image

ಅಲ್ಲದೇ ನಿರೂಪಕಿ ಚೈತ್ರಾ ವಾಸುದೇವನ್, ಪೂಜಾ ಲೋಕೇಶ್‌, ಜ್ಯೋತಿ ಕಿರಣ್‌, ರೀತು ಸಿಂಗ್‌, ಸೇರಿದಂತೆ ಅನೇಕರು ಭಾಗಿಯಾಗಿದ್ದರು.

publive-image

ಸಂಪ್ರದಾಯಿಕವಾಗಿ ಉದ್ಯಮಿ ಅಕಾಯ್ ಎನ್ನುವವರ ಜೊತೆ ನಟಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

Advertisment
publive-image

ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಸ್ ನೋಡಿದ ಅಭಿಮಾನಿಗಳು ಫುಲ್​ ಖುಷ್ ಆಗಿದ್ದಾರೆ.

publive-image
ಇನ್ನೂ, ನಟಿ ವೈಷ್ಣವಿ ಗೌಡ ಮದುವೆ ಯಾವಾಗ ಎಂದು ರಿವೀಲ್‌ ಮಾಡಿಲ್ಲ. ಮುಂದಿನ ದಿನಗಳಲ್ಲಿ ನಟಿ ಈ ಬಗ್ಗೆ ಮಾಹಿತಿ ಕೊಡಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment