ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ.. ಹುಡುಗ ಯಾರು?

author-image
Veena Gangani
Updated On
ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ.. ಹುಡುಗ ಯಾರು?
Advertisment
  • ಕಿರುತೆರೆ ಸ್ಟಾರ್​ ನಟಿ ವೈಷ್ಣವಿ ಗೌಡ ಮನೆಯಲ್ಲಿ ಸಂಭ್ರಮ
  • ಅಗ್ನಿಸಾಕ್ಷಿ ಸೀರಿಯಲ್​ ಮೂಲಕ ಫೇಮಸ್​ ಆಗಿದ್ದ ನಟಿ
  • ಸದ್ಯ ಸೀತಾ ರಾಮ ಸೀರಿಯಲ್​ನಲ್ಲಿ ವೈಷ್ಣವಿ ಗೌಡ ನಟನೆ

ಅಗ್ನಿಸಾಕ್ಷಿ ಸೀರಿಯಲ್​ ಮೂಲಕ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡ ನಟಿ ವೈಷ್ಣವಿ ಗೌಡ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಇಷ್ಟು ದಿನ ಸಿಂಗಲ್​ ಆಗಿದ್ದ ವೈಷ್ಣವಿ ಗೌಡ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಇದನ್ನೂ ಓದಿ:ಈಕೆ ಕನ್ನಡ ಕಿರುತೆರೆಯ ಕ್ಯೂಟೆಸ್ಟ್ ನಟಿ.. ಯಾರಿರಬಹುದು ಗೇಸ್​ ಮಾಡಿ ನೋಡೋಣ

publive-image

ಹೌದು, ನಿನ್ನೆ ಅಂದರೆ ಏಪ್ರಿಲ್ 14ರಂದು ನಟಿ ವೈಷ್ಣವಿ ಗೌಡ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಟಿ ವೈಷ್ಣವಿ ಗೌಡ ಉದ್ಯಮಿ ಜೊತೆಗೆ ಮದುವೆಗೆ ರೆಡಿಯಾಗಿದ್ದಾರೆ. ಉದ್ಯಮಿ ಅಕಾಯ್ ಹಾಗೂ ವೈಷ್ಣವಿ ಗೌಡ ಗುರು ಹಿರಿಯರ ಸಮ್ಮುಖದಲ್ಲಿ ಒಬ್ಬರೊಬ್ಬರು ಉಂಗುರ ಬದಲಾಯಿಸಿಕೊಂಡಿದ್ದಾರೆ.

publive-image

ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥದ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗಿವೆ. ಅಲ್ಲದೇ ಅದ್ಧೂರಿಯಾಗಿ ನಿಶ್ಚಿತಾರ್ಥದಲ್ಲಿ ವೈಷ್ಣವಿ ಗೌಡ ಥೇಟ್​ ಅಪ್ಸರೆಯಂತೆ ಕಾಣಿಸಿಕೊಂಡಿದ್ದಾರೆ.

publive-image

ವೈಷ್ಣವಿ ಗೌಡ ನಿಶ್ಚಿತಾರ್ಥದ ಸಮಾರಂಭದಲ್ಲಿ ಸ್ಯಾಂಡಲ್​​ವುಡ್​ ಸ್ಟಾರ್​ ನಟಿ ಅಮೂಲ್ಯ ಗೌಡ ದಂಪತಿ ಭಾಗಿಯಾಗಿದ್ದರು. ಅಷ್ಟೇ ಅಲ್ಲದೇ ಕಿರುತೆರೆ ಸ್ಟಾರ್​ ನಟ ನಟಿಯರು ಭಾಗಿಯಾಗಿದ್ದು ಇನ್ನೂ ವಿಶೇಷವಾಗಿತ್ತು.

publive-image

ಸದ್ಯ ನಟಿ ಸೀತಾ ರಾಮ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಇದೇ ಸೀರಿಯಲ್​ನಲ್ಲಿ ನಟಿ ವೈಷ್ಣವಿ ಗೌಡ ಸೀತಾ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಲ್ಲದೇ ಅಭಿಮಾನಿಗಳು ವೈಷ್ಣವಿ ಗೌಡ ಅವರ ನಟನೆಗೆ ಫಿದಾ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment