ಮದ್ವೆ ಆಗುತ್ತಿರೋ ಹುಡುಗನ ಬಗ್ಗೆ ಗುಟ್ಟು ಬಿಚ್ಚಿಟ್ಟ ನಟಿ; ವೈಷ್ಣವಿ ಗೌಡ ಹೇಳಿದ್ದೇನು?

author-image
Veena Gangani
Updated On
ಮದ್ವೆ ಆಗುತ್ತಿರೋ ಹುಡುಗನ ಬಗ್ಗೆ ಗುಟ್ಟು ಬಿಚ್ಚಿಟ್ಟ ನಟಿ; ವೈಷ್ಣವಿ ಗೌಡ ಹೇಳಿದ್ದೇನು?
Advertisment
  • ಫ್ಯಾನ್ಸ್​ ಮುಂದೆ ಭಾವಿ ಪತಿಯನ್ನು ಪರಿಚಯಿಸಿದ ನಟಿ
  • ನಟಿ ವೈಷ್ಣವಿ ಗೌಡ ಭಾವಿ ಪತಿ ಮಾಡುತ್ತಿರೋ ಕೆಲಸವೇನು?
  • ನಟಿ ವೈಷ್ಣವಿ ಗೌಡ ಮನೆಯಲ್ಲಿ ಸಂಭ್ರಮವೋ ಸಂಭ್ರಮ

ಕನ್ನಡ ಕಿರುತೆರೆ ನಟಿ ವೈಷ್ಣವಿ ಗೌಡ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಅಗ್ನಿಸಾಕ್ಷಿ ಸೀರಿಯಲ್​ ಮೂಲಕ ಸಖತ್​ ಫೇಮಸ್​ ಆಗಿದ್ದ ನಟಿ ವೈಷ್ಣವಿ ಗೌಡ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

ಇದನ್ನೂ ಓದಿ:ಉದ್ಯಮಿ ಜೊತೆಗೆ ವೈಷ್ಣವಿ ಗೌಡ ನಿಶ್ಚಿತಾರ್ಥ; ಇಲ್ಲಿವೆ 10 ಗ್ರ್ಯಾಂಡ್​ ಫೋಟೋಸ್!

publive-image

ಈಗಾಗಲೇ ಸೀತಾರಾಮ ಧಾರಾವಾಹಿ ನಟಿ ವೈಷ್ಣವಿ ಗೌಡ ಅವರು ಅನುಕೂಲ್‌ ಮಿಶ್ರಾ ಎನ್ನುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಬಗ್ಗೆ ಖುದ್ದು ನಟಿ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

publive-image

ಅಲ್ಲದೇ ನಟಿ ವೈಷ್ಣವಿ ಗೌಡ ತಾವು ಮದುವೆಯಾಗುತ್ತಿರೋ ಹುಡುಗನ ಬಗ್ಗೆ ಯ್ಯೂಟೂಬ್ ಚಾನೆಲ್​ನಲ್ಲಿ ಹೇಳಿಕೊಂಡಿದ್ದಾರೆ. 8 ನಿಮಿಷದ ವಿಡಿಯೋದಲ್ಲಿ ನಟಿ ವೈಷ್ಣವಿ ಗೌಡ ಭಾವಿ ಪತಿಯನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಇನ್ನೂ, ನಟಿ ಭಾವಿ ಪತಿ ಅನುಕೂಲ್‌ ಅವರು ಬೇರೆ ರಾಜ್ಯದವರು. ಇಂಡಿಯನ್‌ ಏರ್‌ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಎಲ್ಲರಿಗೂ ಪರಿಚಯ ಮಾಡಿಕೊಟ್ಟಿದ್ದಾರೆ.

ಇನ್ನೂ, ನಟಿ ವೈಷ್ಣವಿ ಗೌಡ ನಾನು ಎಲ್ಲಿಗೆ ಹೋದರೂ ಮೊದಲು ಹೇಗಿದ್ದೀರಾ ಅಂತ ಯಾರೂ ಕೇಳ್ತಾ ಇರಲಿಲ್ಲ. ಮದುವೆ ಯಾವಾಗ ಅಂತಾನೇ ಕೇಳ್ತಾ ಇದ್ರಿ. ಆದ್ರೆ ಇಲ್ಲಿದೆ ನಿಮ್ಮ ಎಲ್ಲ ಪ್ರಶ್ನೆಗೆ ಉತ್ತರ ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment