ಇನ್ನು ಕಾಯೋಕೆ ಅಗಲ್ಲ ಎಂದ ವೈಷ್ಣವಿ ಗೌಡ.. ಸಿಹಿ ಸುದ್ದಿ ಕೊಡುವ ತವಕದಲ್ಲಿ ಅಗ್ನಿಸಾಕ್ಷಿ ಸೀರಿಯಲ್ ನಟಿ!

author-image
Veena Gangani
Updated On
ಇನ್ನು ಕಾಯೋಕೆ ಅಗಲ್ಲ ಎಂದ ವೈಷ್ಣವಿ ಗೌಡ.. ಸಿಹಿ ಸುದ್ದಿ ಕೊಡುವ ತವಕದಲ್ಲಿ ಅಗ್ನಿಸಾಕ್ಷಿ ಸೀರಿಯಲ್ ನಟಿ!
Advertisment
  • ಅಗ್ನಿಸಾಕ್ಷಿ ಸೀರಿಯಲ್​ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡ ನಟಿ
  • ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಅಮ್ಮನ ಪಾತ್ರದಲ್ಲಿ ನಟಿಸುತ್ತಿರೋ ವೈಷ್ಣವಿ
  • ನಟಿ ವೈಷ್ಣವಿ ಗೌಡಗೆ ಖುಷಿಯೇ ಖುಷಿ.. ಕಾಯಲು ಆಗುತ್ತಿಲ್ಲವೆಂದ ಕ್ಯೂಟ್​ ನಟಿ

ಅಗ್ನಿಸಾಕ್ಷಿ ಸೀರಿಯಲ್​ ಮೂಲಕ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡ ನಟಿ ಎಂದರೆ ಅದು ವೈಷ್ಣವಿ ಗೌಡ. ಹೊಸ ಹೊಸ ಫೋಟೋಶೂಟ್​ಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಜೊತೆಗೆ ಕಿರುತೆರೆ ಅಂಗಳದಲ್ಲೇ ಮೋಸ್ಟ್ ಅವೈಟೆಡ್ ಮೂಮೆಂಟ್ ಅಂದರೆ ಸೀತಾ ರಾಮ ಧಾರಾವಾಹಿ. ಇದೇ ಧಾರಾವಾಹಿಯಲ್ಲಿ ನಟಿಯ ಅಭಿನಯಕ್ಕೆ ಫ್ಯಾನ್ಸ್​ ಫಿದಾ ಆಗಿಬಿಟ್ಟಿದ್ದಾರೆ.

publive-image

ಇನ್ನು, ನಟಿ ವೈಷ್ಣವಿ ಗೌಡ ಕುಟುಂಬಸ್ಥರು ಸದ್ಯ ಸಂಭ್ರಮದಲ್ಲಿದ್ದಾರೆ. ಕೆಲವೇ ದಿನಗಳಲ್ಲಿ ನಟಿಯ ಮನೆಗೆ ಹೊಸ ಅತಿಥಿಯ ಆಗಮನ ಆಗಲಿದೆ. ವರ್ಷಗಳ ಹಿಂದೆ ಹೊಸ ಮನೆಗೆ ಕಾಲಿಟ್ದಿದ್ದ ವೈಷ್ಣವಿ ಗೌಡ ಅವರು ಈಗ ಅತ್ತೆ ಆಗುವ ತವಕದಲ್ಲಿದ್ದಾರೆ. ವೈಷ್ಣವಿ ಅವರ ಅಣ್ಣ-ಅತ್ತಿ ಮೊದಲ ಮಗುವಿನ ನಿರೀಕ್ಷಯಲ್ಲಿದ್ದಾರೆ.

ಇದನ್ನೂ ಓದಿ:ಕಿರುತೆರೆ ನಟಿಗೆ ಕಿಡಿಗೇಡಿಗಳಿಂದ ಕಾಟ​; ವೈಷ್ಣವಿ ಗೌಡ ಫೋಟೋ ನೋಡಿ ನೆಟ್ಟಿಗರು ಶಾಕ್

publive-image

2021ರಲ್ಲಿ ವೈಷ್ಣವಿ ಗೌಡ ಅಣ್ಣ ಸುನೀಲ್ ಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ಈ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ವೈಷ್ಣವಿ ಗೌಡ ಕುಟುಂಬಸ್ಥರು ಸೊಸೆಯ ಅದ್ಧೂರಿಯಾಗಿ ಸೀಮಂತ ಶಾಸ್ತ್ರವನ್ನು ಮಾಡಿದ್ದಾರೆ. ಇದೇ ಸೀಮಂತ ಶಾಸ್ತ್ರದ ಫೋಟೋಗಳನ್ನು ನಟಿ ವೈಷ್ಣವಿ ಗೌಡ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಕಾಯಲು ಆಗುತ್ತಿಲ್ಲ ಅಂತ ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment