ನಿರ್ದೇಶಕ ವಿನೋದ್ ದೋಂಡಾಲೆ ಸಾವಿಗೆ ಟಿ.ಎನ್ ಸೀತಾರಾಮ್ ಸಂತಾಪ; ಹೇಳಿದ್ದೇನು?

author-image
Bheemappa
Updated On
ನಿರ್ದೇಶಕ ವಿನೋದ್ ದೋಂಡಾಲೆ ಸಾವಿಗೆ ಟಿ.ಎನ್ ಸೀತಾರಾಮ್ ಸಂತಾಪ; ಹೇಳಿದ್ದೇನು?
Advertisment
  • ನನ್ನ ಮಗಳು 5 ಎಪಿಸೋಡ್​ಗಳನ್ನ ನಿರ್ದೇಶನ ಮಾಡಿದ್ರು
  • ವೀಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದ್ದ ಕರಿಮಣಿ
  • ವಿನೋದ್ ದೋಂಡಾಲೆ ಮರ್ಯಾದೆಗೆ ಅಂಜುವ ಮನುಷ್ಯ

ಬೆಂಗಳೂರು: ಕರಿಮಣಿ ಧಾರಾವಾಹಿ ಡೈರೆಕ್ಟರ್​ ವಿನೋದ್ ದೋಂಡಾಲೆ ಅವರು ನಾಗರಭಾವಿಯ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಈ ಸಂಬಂಧ ಕನ್ನಡದ ಖ್ಯಾತ ನಿರ್ದೇಶಕ ಟಿ.ಎನ್ ಸೀತಾರಾಮ್ ಅವರು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ:BREAKING: ಕರಿಮಣಿ ಸೀರಿಯಲ್‌ ನಿರ್ದೇಶಕ ವಿನೋದ್ ದೋಂಡಾಲೆ ಸಾವಿಗೆ ಶರಣು

ಡೈರೆಕ್ಟರ್​ ವಿನೋದ್ ದೋಂಡಾಲೆ ಅವರು ನನ್ನ ತಂಡದಲ್ಲಿ ಅನೇಕ ವರ್ಷಗಳ ಕಾಲ ನಿರ್ದೇಶನ ವಿಭಾಗ ದಲ್ಲಿ ಇದ್ದವರು. ಅತ್ಯಂತ ಪ್ರತಿಭಾವಂತ, ಸೌಜನ್ಯದ ಗಣಿ, ವಿನೋದ ದೋಂಡಾಲೆ ಇನ್ನಿಲ್ಲ ಎನ್ನುವುದು ನಂಬೋಕೆ ಆಗುತ್ತಿಲ್ಲ. ಅವರ ಎರಡು ಧಾರಾವಾಹಿಗಳಾದ ಕರಿಮಣಿ, ಗಂಗೆ- ಗೌರಿ ತುಂಬಾ ಜನಪ್ರಿಯವಾಗಿ ನಡೆಯುತ್ತಿವೆ. ಇನ್ನೊಂದು ಚಿತ್ರ ಅರ್ಧದಷ್ಟು ಮುಗಿದಿದೆ. ಮೊದಲ 5 ಎಪಿಸೋಡಿನ ತಾಂತ್ರಿಕ ನಿರ್ದೇಶನ ನನ್ನ ಮಗಳು ಮಾಡಿದ್ದರು. ಅಲ್ಲದೇ ಮುಕ್ತ, ಮುಕ್ತ ಧಾರಾವಾಹಿಗೆ ಅವನೇ ಎಪಿಸೋಡ್ ನಿರ್ದೇಶಕನಾಗಿದ್ದನು ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಮ್ಮ ನಡುವಿನ ಗಾಸಿಪ್​​ ನಿಜ.. ಒಟ್ಟಾಗಿ ಬದುಕಲು ಆಗಲಿಲ್ಲ- ನಟಾಶಾ ಬಗ್ಗೆ ಹಾರ್ದಿಕ್ ಏನಂದರು?

ವಿನೋದ್ ದೋಂಡಾಲೆ ಮರ್ಯಾದೆಗೆ ಅಂಜುವ ಮನುಷ್ಯ. ಯಾರಿಗೂ ಎಂದಿಗೂ ಜೋರಾಗಿ, ಕೋಪದಿಂದ ಮಾತನಾಡಿದವರು ಅಲ್ಲ. ಎಂದೂ ಗಾಸಿಪ್ ಮಾಡುವ ಜಾಯಮಾನ ಇರಲೇ ಇಲ್ಲ. ಒತ್ತಡ ಮಾಡಿಕೊಳ್ಳಬಾರದೆಂದು ನನಗೆ ಅನೇಕ ಬಾರಿ ಸಮಾಧಾನ ಹೇಳಿದ್ದರು. ಅಂತಹ ಮನುಷ್ಯ ಇಂದು ಒತ್ತಡ ತಡೆಯಲಾರದೆ ಬದುಕು ಮುಗಿಸಿಬಿಟ್ಟರು. ಚಿಕ್ಕ ವಯಸ್ಸು, ಬದುಕಿಗೊಂದು ತರ್ಕವೇ ಬೇಡವೆ. ತೀರಾ ಸಂಕಟವಾಗುತ್ತದೆ. ಅಂತಿಮ ನಮನಗಳು ವಿನೋದ್ ಎಂದು ಟಿಎನ್​ ಸೀತಾರಾಮ್ ಅವರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment