newsfirstkannada.com

ಲಕ್ಷ್ಮೀ ನಿವಾಸ ಸೀರಿಯಲ್​ನಿಂದ ಹೊರ ಬಂದ್ರಾ ನಟಿ ದಿವ್ಯಾ? ಆ ಪಾತ್ರಕ್ಕೆ ಬಣ್ಣ ಹಚ್ಚೋದ್ಯಾರು?

Share :

Published March 20, 2024 at 5:58am

Update March 20, 2024 at 6:07am

  ಲಕ್ಷ್ಮೀಯ 2ನೇ ಸೊಸೆ ಸಿಂಚನ ಪಾತ್ರ ಸದ್ಯದಲ್ಲೇ ರೀಪ್ಲೆಸ್ ಆಗುತ್ತಾ..?

  ಕಿರುತೆರೆ ನಟಿ ದಿವ್ಯಾ ಸ್ಥಾನಕ್ಕೆ ಬಂದಿರುವ ಹೊಸ ನಟಿ ಇವರೇ ನೋಡಿ

  ಶೂಟಿಂಗ್ ಮಾಡಲು ಸಮಯ ಸಾಕಾಗದೇ ಈ ನಿರ್ಧಾರ ಮಾಡಿದ್ರಾ?

ಕಿರುತೆರೆಯ ಸದ್ಯದ ಮೋಸ್ಟ್ ಸೆನ್ಸೇಶನಲ್ ಅಂದ್ರೆ ಅದು ಲಕ್ಷ್ಮೀ ನಿವಾಸ ಸೀರಿಯಲ್. ಸದ್ಯ ಜೀ ವಾಹಿನಿಯ ಟಾಪ್ ಒನ್ ಸೀರಿಯಲ್ ಇದಾಗಿದೆ. ಈಗಾಗಲೇ ಎಲ್ಲ ಪಾತ್ರಗಳು ಕೂಡ ವೀಕ್ಷಕರ ಮನಸ್ಸನ್ನ ತಟ್ಟಿವೆ.

ಆದ್ರೆ, ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಸದ್ಯ ಬೇಸರ ಸಂಗತಿಯೊಂದು ಆಚೆ ಬಂದಿದೆ. ಅದುವೆ ಸೀರಿಯಲ್​ನ ಒಂದು ಪ್ರಮುಖ ಪಾತ್ರ ಬದಲಾಗ್ತಿದೆ. ಲಕ್ಷ್ಮಿಯ 2ನೇ ಸೊಸೆ ಸಿಂಚನ ಪಾತ್ರ ಸದ್ಯದಲ್ಲೇ ರೀಪ್ಲೆಸ್ ಆಗಲಿದೆ. ಸಿಂಚನ ಆ ಮನೆಯ ಮುದ್ದು ಸೊಸೆ, ಓಡೋಗಿ ಲವ್ ಮಾಡಿ ಮದ್ವೆ ಮಾಡ್ಕೊಂಡು ಲಕ್ಷ್ಮೀ ನಿವಾಸ ಮನೆ ಸೇರಿದ್ದಾಳೆ. ಇದು ಸಿಂಚನ ಪಾತ್ರದ ಒನ್ ಲೈನ್ ಸ್ಟೋರಿ. ಈ ಪಾತ್ರವನ್ನ ಸದ್ಯ ಪ್ರಸ್ತುತ ನಟಿ ದಿವ್ಯಾ ಅವರು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು.

ಆದ್ರೆ, ಕಾರಣಾಂತರದಿಂದ ಈ ಧಾರಾವಾಹಿಯಿಂದ ದಿವ್ಯಾ ಆಚೆ ಬರ್ತಿದ್ದಾರೆ. ಅವರು ಸೀರಿಯಲ್​ನಿಂದ ಆಚೆ ಬರ್ತಿರೋದಕ್ಕೆ ಅದೊಂದು ಕಾರಣ ಇದೆ. ಈಗಾಗ್ಲೇ ಕಲರ್ಸ್​ ವಾಹಿನಿಯಲ್ಲಿ ಲಾಂಚ್ ಆದ ಚುಕ್ಕಿತಾರೆ ಧಾರಾವಾಹಿಯಲ್ಲಿ ಚುಕ್ಕಿಯ ತಾಯಿ ಪಾತ್ರದಲ್ಲಿ ಪಾತ್ರದಲ್ಲಿ ನಟಿಸ್ತಿದ್ದಾರೆ. ಈ ಎರಡು ಸೀರಿಯಲ್​ಗೂ ಸಮಯ ಸಾಕಾಗುತ್ತಿಲ್ಲ. ಹಾಗಾಗಿಯೇ ಪಾತ್ರ ಬಿಡಲು ಕಾರಣ ಆಗಿರಬಹುದು ಎನ್ನಲಾಗುತ್ತಿದೆ. ಆದ್ರೆ, ಲಕ್ಷ್ಮೀ ನಿವಾಸ ಸೀರಿಯಲ್​ನಿಂದ ನಟಿ ದಿವ್ಯಾ ಆಚೆ ಬಂದಿರುವುದಂತು ಸತ್ಯ.

ಹಾಗಾದ್ರೆ ಇನ್ಮುಂದೆ ಸಿಂಚನ ಪಾತ್ರವನ್ನ ಯಾರು ನಿಭಾಯಿಸ್ತಿದ್ದಾರೆ ಅನ್ನೋ ಪ್ರಶ್ನೆಗೂ ಈಗಾಗ್ಲೇ ಉತ್ತರ ಸಿಕ್ಕಿದೆ. ಕನ್ನಡದ ನಟಿ ರೂಪಿಕಾ ಅವರು ಸಿಂಚನಾ ಪಾತ್ರವನ್ನ ರೀಪ್ಲೇಸ್ ಮಾಡಿದ್ದಾರೆ. ಈಗಾಗ್ಲೇ ಕಲರ್ಸ್​ ವಾಹಿನಿಯ ದೊರೆಸಾನಿ ಧಾರಾವಾಹಿಯಲ್ಲಿ ನಾಯಕಿ ದೀಪಿಕಾ ಪಾತ್ರದಲ್ಲಿ ನಟಿಸಿ ಕಿರುತೆರೆಯ ವೀಕ್ಷಕರ ಮನಸ್ಸಲ್ಲಿ ಉಳಿದುಕೊಂಡಿದ್ದಾರೆ. ಇನ್ನು ಮುಂದೆ ನಟಿ ರೂಪಿಕಾ ಅವರು ಸಿಂಚನ ಪಾತ್ರವನ್ನ ನಿಭಾಯಿಸಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಕ್ಷ್ಮೀ ನಿವಾಸ ಸೀರಿಯಲ್​ನಿಂದ ಹೊರ ಬಂದ್ರಾ ನಟಿ ದಿವ್ಯಾ? ಆ ಪಾತ್ರಕ್ಕೆ ಬಣ್ಣ ಹಚ್ಚೋದ್ಯಾರು?

https://newsfirstlive.com/wp-content/uploads/2024/03/lakshmi-nivasa.jpg

Load More