ಸಖತ್ ಹ್ಯಾಪಿ ಮೂಡ್ನಲ್ಲಿದ್ದಾರೆ ಸತ್ಯ ಸೀರಿಯಲ್ನ ಲೇಡಿ ಸಿಂಗಂ
ಸತ್ಯ ಸೀರಿಯಲ್ ಮೂಲಕ ಅಭಿಮಾನಿಗಳನ್ನು ಗಳಿಸಿಕೊಂಡ ನಟಿ
ಸತ್ಯಳ ವಿಭಿನ್ನ ಲುಕ್ಗೆ ಫಿದಾ ಆಗಿದ್ದರು ಸಾಕಷ್ಟು ಕನ್ನಡ ವೀಕ್ಷಕರು
ಕನ್ನಡ ಕಿರುತೆರೆಯಲ್ಲಿ ಸತ್ಯ ಸೀರಿಯಲ್ ವೀಕ್ಷಕರಿಗೆ ವಿಭಿನ್ನತೆಯನ್ನು ಉಣ ಬಡಿಸುತ್ತಿತ್ತು. ಇಷ್ಟು ದಿನ ವೀಕ್ಷಕರಿಗೆ ಮನರಂಜನೆ ನೀಡುತ್ತಿದ್ದ ಜನ ಮೆಚ್ಚಿದ ಸೀರಿಯಲ್ ಆಗಿದ್ದ ಸತ್ಯ ಆಗಸ್ಟ್ 10ರಂದು ಮುಕ್ತಾಯಗೊಂಡಿತ್ತು. ಇಷ್ಟು ದಿನ ವೀಕ್ಷಕರು ಕೂಡ ಸತ್ಯಾಳನ್ನ ಅಷ್ಟೇ ಪ್ರೀತಿಯಿಂದ ಸ್ವೀಕರಿಸಿಕೊಂಡು ಬಂದಿದ್ದರು. ಹೆಚ್ಚು ಹೆಚ್ಚು ಸಂಚಿಕೆಗಳನ್ನು ಪೂರೈಸಿ ಮುನ್ನುಗ್ಗುತ್ತಿದ್ದ ಸತ್ಯ ಸೀರಿಯಲ್ ಕೊನೆಯಾಗಿದ್ದಕ್ಕೆ ಫ್ಯಾನ್ಸ್ ಬೇಸರ ಆಗಿದ್ದರು.
ಇದನ್ನೂ ಓದಿ: ಯುವತಿಯ ಖಾಸಗಿ ವಿಡಿಯೋ ಇಟ್ಟುಕೊಂಡಿದ್ದ ಸೀರಿಯಲ್ ನಟ ಕೇಸ್ಗೆ ಬಿಗ್ ಟ್ವಿಸ್ಟ್; ಅಸಲಿಗೆ ಆಗಿದ್ದೇನು?
ಸತ್ಯಳ ವಿಭಿನ್ನ ಲುಕ್, ಮಾತು ಎಲ್ಲವೂ ವೀಕ್ಷಕರ ಮನಸ್ಸಲ್ಲಿ ಅಚ್ಚಳಿಯದ ಛಾಪು ಮೂಡಿಸಿತ್ತು. ವಿಶೇಷವಾಗಿ ಮಕ್ಕಳಿಗೂ ಸತ್ಯ ಸಿಕ್ಕಾಪಟ್ಟೆ ಫೇವರಿಟ್ ಆಗಿಬಿಟ್ಟಿದ್ದರು. ಸತ್ಯ ಪಾತ್ರವನ್ನ ಅದ್ಭುತವಾಗಿ ನಿಭಾಯಿಸಿದ್ದ ನಟಿ ಗೌತಮಿ ಜಾಧವ್ ಅವರು ಕೂಡ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ಇದೀಗ ಸತ್ಯ ಸೀರಿಯಲ್ ಮೂಲಕ ಎಲ್ಲರ ಮನೆ ಮಾತಾಗಿದ್ದ ನಟಿ ಗೌತಮಿ ಜಾದವ್ ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ. ಸತ್ಯ ಸೀರಿಯಲ್ ಮುಕ್ತಾಯದ ಬಳಿಕ ಎಲ್ಲೂ ಕಾಣಿಸಿಕೊಳ್ಳದ ನಟಿ ಗೌತಮಿ ಜಾದವ್ ಅತಿ ಶ್ರೀಘದಲ್ಲಿ ಗುಡ್ನ್ಯೂಸ್ ಕೊಡುತ್ತೇನೆ ಅಂತ ಖುದ್ದಾಗಿ ಹೇಳಿಕೊಂಡಿದ್ದಾರೆ.
View this post on Instagram
ಈ ಬಗ್ಗೆ ಖುದ್ದು ನಟಿ ಗೌತಮಿ ಜಾದವ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬಹಳ ದಿನಗಳ ಬಳಿಕ ಲೈವ್ ವಿಡಿಯೋ ಮಾಡಿ ಈ ವಿಚಾರದ ಬಗ್ಗೆ ಹಂಚಿಕೊಂಡಿದ್ದಾರೆ. ಆದಷ್ಟು ಬೇಗ ಇನ್ನೊಂದು ಒಳ್ಳೆಯ ಪ್ರಾಜೆಕ್ಟ್ ಜತೆಗೆ ನಿಮ್ಮ ಮುಂದೆ ಬರುತ್ತೇನೆ. ನಾನು ಸೆಲೆಕ್ಟ್ ಮಾಡಿಕೊಳ್ಳುವಂತ ಪ್ಲಾಟ್ ಫಾರ್ಮ್ ನಿಮಗೆ ಖುಷಿ ಕೊಡುತ್ತೆ. ಆ ನನ್ನ ಆಯ್ಕೆ ಮೂಲಕ ನಿಮಗೆ ಮನರಂಜನೆ ನೀಡುತ್ತೇನೆ. ನಿಮ್ಮ ಮುಂದೆ ಬೇರೆ ಬೇರೆ ಪಾತ್ರದ ಮೂಲಕ ಬರುತ್ತಾ ಇರುತ್ತೇನೆ ಅಂತ ಹೇಳಿದ್ದಾರೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು ಬಿಗ್ಬಾಸ್ಗೆ ಹೋಗ್ತಾ ಇದ್ದೀರಾ? ಸತ್ಯ 2 ಬರ್ತಾ ಇದ್ಯಾ ಬೇಗ ಹೇಳಿ ಅಕ್ಕ ಅಂತ ಕಾಮೆಂಟ್ಸ್ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ