/newsfirstlive-kannada/media/post_attachments/wp-content/uploads/2025/05/Srirasthu-Shubhamasthu.jpg)
ವಿಭಿನ್ನವಾದ ಲವ್ ಸ್ಟೋರಿ ಹೇಳುತ್ತಿರುವ ಕಥೆ ಎಂದರೆ ಅದು ಶ್ರೀರಸ್ತು ಶುಭಮಸ್ತು. ಅಪ್ಪ-ಮಗನ ನಡುವೆ ಮುನಿಸು, ಮಾಧವ ಹಾಗೂ ತುಳಸಿ ಸ್ನೇಹ-ಪ್ರೀತಿ ತುಂಬಿದ ಪ್ರೋಮೋಗೆ ವೀಕ್ಷಕರಿಗೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡು ಮುನ್ನುಗ್ಗುತ್ತಿತ್ತು. ಆದರೆ ಇದೀಗ ಶ್ರೀರಸ್ತು ಶುಭಮಸ್ತು ಸೀರಿಯಲ್ ಮುಕ್ತಾಯವಾಗುತ್ತಿದೆ.
ಇದನ್ನೂ ಓದಿ:ಉಗ್ರರಿಗೆ ನೆರವು ನೀಡಿದ್ದ ಓವರ್ ಗ್ರೌಂಡ್ ವರ್ಕರ್ ಆತ್ಮಹತ್ಯೆ, ಭದ್ರತಾಪಡೆ ಕಣ್ಮುಂದೆಯೇ ನದಿಗೆ ಹಾರಿದ
ಶ್ರೀರಸ್ತು ಶುಭಮಸ್ತು ಕಲಾವಿದರು ಸಖತ್ ಕ್ಲೂಸ್. ಶೂಟಿಂಗ್ ಗ್ಯಾಪ್ನಲ್ಲಿ ಸಖತ್ ಜಾಲಿ ಮಾಡ್ತಿರ್ತಾರೆ. ಸೆಟ್ನ ಮಜಾ ಈಗ ಕೇರಳವರೆಗೂ ಹರಡಿದೆ. ಹೌದು, ಅಭಿ, ಅವಿ, ಶಾರ್ವರಿ, ಮಾಧವ್, ಪೂರ್ವಿ ಹಾಗೂ ದೀಪಿಕಾ ಪಾತ್ರ ಮಾಡ್ತಿರೋ ನಟರು ಕೇರಳದ ವೈಯನಾಡುಗೆ ತೆರಳಿದ್ದಾರೆ. ಹಾಟ್.. ಹಾಟ್ ವಾತವರಣಕ್ಕೆ ಬೈ ಹೇಳಿ ಪ್ರಕೃತಿ ನಡುವೆ ಎಂಜಾಯ್ ಮಾಡಿದ್ದಾರೆ.
ಮಸ್ತ್ ಆಗಿರೋ ವಾತಾವರಣದಲ್ಲಿ ಮಜೇದಾರ್ ಕ್ಷಣಗಳನ್ನ ಕಳೆಯುತ್ತಿದ್ದಾರೆ ಸ್ನೇಹಿತರು. ಅಂದ್ಹಾಗೆ, ಶ್ರೀರಸ್ತು ಶುಭಮಸ್ತು ಮುಕ್ತಾಯ ಆಗುವ ಸೂಚನೆ ಸಿಗ್ತಿದ್ದು, ಅಧಿಕೃತವಾಗಿ ಘೋಷಣೆ ಆಗಿಲ್ಲ. ಇನ್ನೇನೂ ಕೊನೆ ಸಂಚಿಕೆ ಹಂತ ತಲುಪಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ