ಟಾಪ್ ಒನ್ ಪಟ್ಟ ಬಿಟ್ಟುಕೊಡದ ಪುಟ್ಟಕ್ಕನ ಮಕ್ಕಳು.. ಈ ವಾರದ TRPಯಲ್ಲಿ ಯಾವ ಸೀರಿಯಲ್‌ಗೆ ಎಷ್ಟನೇ ಸ್ಥಾನ?

author-image
Veena Gangani
Updated On
ಈ ವಾರ ಅತೀ ಹೆಚ್ಚು ವೀಕ್ಷಕರು ನೋಡಿದ ಟಾಪ್​ ಸೀರಿಯಲ್​ ಯಾವುದು..? ಹೇಗಿದೆ TRP ಲಿಸ್ಟ್​?
Advertisment
  • ಈ ವಾರ ಯಾವ ಸೀರಿಯಲ್​ಗೆ ಟಿಆರ್​ಪಿಯಲ್ಲಿ ಮೊದಲ ಸ್ಥಾನ?
  • ವೀಕ್ಷಕರು ಈ ವಾರ ಹೆಚ್ಚು ನೋಡಿದ ಧಾರಾವಾಹಿ ಇದೇ ನೋಡಿ!
  • ನಿತ್ಯ ಕನ್ನಡಿಗರ ಮನಗೆದ್ದ ಕಿರುತೆರೆಯ ಟಾಪ್​ ಸೀರಿಯಲ್​ ಇವು

ಕನ್ನಡ ಕಿರುತೆರೆಯ ಸೀರಿಯಲ್​ಗಳ ಲೆಕ್ಕಾಚಾರ ಹಾಗೂ ಹಗ್ಗಜಗ್ಗಾಟ ವಾರದಿಂದ ವಾರಕ್ಕೆ ಏರುಪೇರು ಆಗುತ್ತಾನೆ ಇರುತ್ತದೆ. ಯಾವ ಧಾರಾವಾಹಿಗಳನ್ನು ವೀಕ್ಷಕರು ನೋಡಿ ಹಾರೈಸಿದ್ದಾರೆ ಎಂದು ಟಿಆರ್​​ಪಿ ಮೂಲಕ ತಿಳಿಯಲಿದೆ. ಪ್ರತಿ ದಿನ ಹೊಸತನ ನೀಡಬೇಕು. ಮನರಂಜನೆಯ ಜೊತೆಗೆ ವಿಭಿನ್ನತೆಯನ್ನ ಅಳವಡಿಸಿಕೊಳ್ಳಬೇಕು. ವೀಕ್ಷಕರ ಮೆಚ್ಚುಗೆಗೆ ಪಾತ್ರರಾಗಬೇಕು ಅನ್ನೋದು ಪ್ರತಿ ಸೀರಿಯಲ್​ ತಂಡದ ಕನಸು. ವೀಕ್ಷಕರ ಅಭಿಪ್ರಾಯ ತಿಳಿದುಕೊಳ್ಳಲು ಟಿಆರ್​ಪಿಗಾಗಿ ಕಾಯುತ್ತಾ ಇರುತ್ತಾರೆ.

ಇದನ್ನೂ ಓದಿ:HDK ವಿರುದ್ಧ ನಾಲಿಗೆ ಹರಿಬಿಟ್ಟ ದರ್ಶನ್ ಮಹಿಳಾ ಅಭಿಮಾನಿಗೆ ಸಂಕಷ್ಟ; ಆಗಿದ್ದೇನು?

ಇದೀಗ ಟಿಆರ್​ಪಿ ಲಿಸ್ಟ್​ ಬಿಡುಗಡೆ ಆಗಿದೆ. ಯಾವ ಸೀರಿಯಲ್​ಗೆ ಎಷ್ಟು ರೇಟಿಂಗ್​ ಬಂದಿದೆ ಅಂತ ಗೊತ್ತಾಗಿದೆ. ಮೊದಲ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು 8.5, ಎರಡನೇ ಸ್ಥಾನದಲ್ಲಿ ಲಕ್ಷ್ಮೀ ನಿವಾಸ 8.2, ಮೂರನೇ ಸ್ಥಾನದಲ್ಲಿ ಶ್ರಾವಣಿ ಸುಭ್ರಮಣ್ಯ 7.2, ನಾಲ್ಕನೇ ಸ್ಥಾನದಲ್ಲಿ ಸೀತಾರಾಮ 6, ಐದನೇ ಸ್ಥಾನದಲ್ಲಿ ಅಮೃತಧಾರೆ 5.7, ಆರನೇ ಸ್ಥಾನವನ್ನ ರಾಮಾಚಾರಿ, ಶ್ರೀಗೌರಿ ಹಾಗೂ ಭಾಗ್ಯಲಕ್ಷ್ಮೀ ಹಂಚಿಕೊಂಡಿವೆ 4.9 ಪಡೆದುಕೊಂಡಿದ್ದಾರೆ.

ಇನ್ನು, ಏಳನೇ ಸ್ಥಾನವನ್ನ ಲಕ್ಷ್ಮೀ ಬಾರಮ್ಮ ಹಾಗೂ ಕರಿಮಣಿ ಹಂಚಿಕೊಂಡಿವೆ 4.8, ಏಂಟನೇ ಸ್ಥಾನದಲ್ಲಿ ನಿನಗಾಗಿ 4.5, ಒಂಬತ್ತನೇ ಸ್ಥಾನದಲ್ಲಿ ಶ್ರೀರಸ್ತು ಶುಭಮಸ್ತು 3.9, ಮೊದಲ ಬಾರಿಗೆ ಹತ್ತನೇ ಸ್ಥಾನವನ್ನ ಅಲಂಕರಿಸಿದೆ ಅವನು ಮತ್ತೇ ಶ್ರಾವಣಿ 3.4. ಕಳೆದ ವಾರ ಲಾಂಚ್​ ಆದ ದಂಪತಿಗಳ ಸಂಭ್ರಮಿಸೋ ರಿಯಾಲಿಟಿ ಶೋ ರಾಜಾರಾಣಿ 3.7 ರೇಟಿಂಗ್​ ಪಡೆದುಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment