/newsfirstlive-kannada/media/post_attachments/wp-content/uploads/2025/05/Preethi-Srinivasa6.jpg)
ಸೀರಿಯಲ್ ಪ್ರಿಯರಿಗೆ ಭರ್ಜರಿ ಮನರಂಜನೆ ನೀಡ್ತಿದೆ ಶ್ರಾವಣಿ ಸುಬ್ರಮಣ್ಯ ಸೀರಿಯಲ್. ಟಿಆರ್‌ಪಿ ಲಿಸ್ಟ್ನಲ್ಲೂ ಮೊದಲ ದಿನದಿಂದ ಉತ್ತಮ ಸ್ಥಾನ ಕಾಯ್ದು ಕೊಂಡು ಬಂದಿದೆ. ಅಲ್ಲದೇ ಕೆಲವು ವಾರಗಳಿಂದ ಶ್ರಾವಣಿ ಸುಬ್ರಮಣ್ಯ ಟಿಆರ್‌ಪಿ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಳ್ಳುತ್ತಿದೆ. ಈ ಧಾರಾವಾಹಿಯಲ್ಲಿ ಮೂಡಿ ಬರುತ್ತಿರೋ ಎಲ್ಲ ಪಾತ್ರಗಳು ಜನಪ್ರಿಯವಾಗಿದ್ದು, ಜನರು ಕಲಾವಿದರನ್ನು ಪಾತ್ರಗಳಿಂದಲೇ ಇಷ್ಟ ಪಡುತ್ತಿದ್ದಾರೆ.
ಇದನ್ನೂ ಓದಿ: ಕನ್ನಡ ಕಿರುತೆರೆ ದಂಪತಿ ಮನೆಯಲ್ಲಿ ಸಂಭ್ರಮ..ನಟಿ ಶಿಲ್ಪಾ ರವಿ ಕ್ಯೂಟ್ ಮಗನಿಗೆ ಇಟ್ಟ ಹೆಸರೇನು?
ಇನ್ನೂ, ಇದೇ ಧಾರಾವಾಹಿಯಲ್ಲಿ ಪಿಂಕಿ ಪ್ರಾತದಲ್ಲಿ ನಟಿಸುತ್ತಿರುವ ಬಾಲನಟಿ ಹೆಸರು ಪ್ರತಿ ಶೆಟ್ಟಿ. ಈಕೆ ತನ್ನ ಅದ್ಭುತ ನಟನೆಯ ಮೂಲಕವೇ ಎಲ್ಲರ ಗಮನವನ್ನು ಸಳೆದಿದ್ದಾಳೆ. ಮಾಡೆಲ್ ಮತ್ತು ಬಾಲಕಲಾವಿದೆಯಾಗಿ ಗುರುತಿಸಿಕೊಂಡಿರುವ ಪ್ರತಿಶೆಟ್ಟಿ ಕೇವಲ 40 ದಿನಗಳಲ್ಲಿ 5 ಕೆಜಿ ತೂಕ ಇಳಿಸಿಕೊಂಡಿದ್ದಾಳೆ ಎಂದರೆ ನೀವು ನಂಬ್ತೀರಾ..? ನಂಬಲೇಬೇಕು.
ಹೌದು, ದೊಡ್ಡವರಂತೆ ಜಿಮ್‌ನಲ್ಲಿ ಬೆವರು ಹರಿಸಿರುವ ಪಿಂಕಿ ಮಸ್ತ್ ವರ್ಕೌಟ್ ಮಾಡಿ ತೂಕ ಇಳಿಸಿಕೊಂಡಿದ್ದಾಳೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಪ್ರತಿಶೆಟ್ಟಿಗೆ ತೂಕ ಇಳಿಸಿಕೊಂಡಿದ್ದು ಏಕೆ? ಇಷ್ಟು ಸಣ್ಣ ಹುಡುಗಿ ಜಿಮ್ ವರ್ಕೌಟ್ ಮಾಡಬಹುದು ಅಂತ ನೆಟ್ಟಿಗರಲ್ಲಿ ಪ್ರಶ್ನೆ ಮೂಡಿದೆ. ಆದ್ರೆ ಬಾಲನಟಿ ಜಿಮ್ ವರ್ಕೌಟ್ ಮಾಡೋದಕ್ಕೆ ಕಾರಣವಿದೆ. ಈ ಬಗ್ಗೆ ಖುದ್ದು ಪ್ರತಿಶೆಟ್ಟಿ ಜಿಮ್ ಟ್ರೈನರ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು 3.4 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.
View this post on Instagram
ಈ ವಯಸ್ಸಿನಲ್ಲಿ ಇವರು ಏಕೆ ಜಿಮ್ಗೆ ಬಂದಿದ್ದಾರೆ ಅಂತ ನಿಮಗೆ ಪ್ರಶ್ನೆ ಮೂಡಬಹುದು. ಬಾಲ ನಟಿಯಾಗಿರೋ ಪ್ರತಿ ಶೆಟ್ಟಿ ಅವರು ಮಾಡೆಲ್ ಆಗಿರುತ್ತಾರೆ. ಇವರು 3 ವರ್ಷದ ಹಿಂದೆ ಒಂದು ದೊಡ್ಡ ಬಜೆಟ್ ಸಿನಿಮಾಗೆ ಆಡಿಷನ್ ಕೊಟ್ಟು ಸೆಲೆಕ್ಟ್ ಆಗಿರುತ್ತಾರೆ. ಆದರೆ ಶೂಟಿಂಗ್ 3 ವರ್ಷ ಕೊಂಚ ತಡವಾಗುತ್ತೆ. ಆ ಮೂರು ವರ್ಷದಲ್ಲಿ ಜಾಸ್ತಿ ದಪ್ಪ ಆಗುತ್ತಾರೆ. ಜಾಸ್ತಿ ಚಬ್ಬಿ ಚಬ್ಬಿ ಆಗಿರುತ್ತಾರೆ. ಆದ್ರೆ ಒಂದು ದಿನ ಡೈರೆಕ್ಟರ್ಗೆ ಭೇಟಿಯಾಗಿದ್ದಾಗ ಅವರು ಹೇಳ್ತಾರೆ, ಇವರು ಈ ಕ್ಯಾರೆಕ್ಟ್ರ್ಗೆ ಸೂಟ್ ಆಗ್ತಾ ಇಲ್ಲ. ಇವರೂ ಸ್ವಲ್ಪ ಜಾಸ್ತಿ ಚಬ್ಬಿಯಾಗಿದ್ದಾರೆ ಅಂತ. ಅದಕ್ಕೆ ಬಾಲನಟಿಯ ಪೋಷಕರು ಡೈರೆಕ್ಟರ್ ಹತ್ತಿರ ರಿಕ್ವೇಸ್ಟ್ ಮಾಡಿಕೊಂಡು 40 ದಿನ ಬಾಕಿ ಉಳಿದಿದೆ ಸಿನಿಮಾ ಶೂಟಿಂಗ್ಗೆ ಅಷ್ಟರಲ್ಲಿ ಸಣ್ಣ ಮಾಡಿಕೊಂಡು ಕರೆದುಕೊಂಡು ಬರುತ್ತೇವೆ ಅಂತ ಮಾತು ಕೊಡುತ್ತಾರೆ. ಇವರು ನೇರವಾಗಿ ನನ್ನ ಹತ್ತಿರ ಬಂದು ಈ ವಿಚಾರದ ಬಗ್ಗೆ ತಿಳಿಸುತ್ತಾರೆ. ಆದ್ರೆ ಚಿಕ್ಕ ಮಕ್ಕಳನ್ನು ಟ್ರೈನ್ ಮಾಡುವುದು ಕೊಂಚ ಚಾಲೆಜಿಂಗ್ ಆಗಿರುತ್ತದೆ. ಏಕೆಂದರೆ ಇವರ ಎತ್ತರ ಕಡಿಮೆ ಇರೋ ಕಾರಣ ಯಾವುದೇ ಟ್ರೀಟ್ಮೆಂಟ್ ಅವರಿಗೆ ಸೂಟ್ ಆಗಲ್ಲ. ಆದ್ರೂ ಸಹ ಟ್ರೈನ್ ಮಾಡಿದ್ವಿ. ತುಂಬಾ ಜನರಿಗೆ ಪ್ರಶ್ನೆ ಬರುತ್ತದೆ. ಮಕ್ಕಳು ಜಿಮ್ಗೆ ಹೋಗಬಹುದಾ? ಹೈಟ್ ನಿಲ್ಲಲ್ವಾ ಅಂತ? ಆದ್ರೆ ಇದು ನಿಮ್ಮ ಜನಿಟಿಕ್ ಮೇಲೆ ನಿಂತಿರುತ್ತದೆ. ನೀವು ಏನೇ ಮಾಡಿದ್ರು ಜಾಸ್ತಿ ಮಾಡೋದಕ್ಕೆ ಆಗೋದಿಲ್ಲ, ಕಡಿಮೆ ಮಾಡೋದಕ್ಕೆ ಆಗೋದಿಲ್ಲ. ಇವರು ಜಿಮ್ ಸ್ಟಾರ್ಟ್ ಮಾಡಿದ್ದಾಗ 40 ಕೆಜಿ ಇದ್ದರು, ಈಗ 35 ಕೆಜಿ ವೇಟ್ ಲಾಸ್. 40 ದಿನದಲ್ಲಿ ಇವರಲ್ಲಿ ಆದ ಬದಲಾವಣೆ ಕಂಡು ಡೈರೆಕ್ಟರ್ ಫುಲ್ ಶಾಕ್ ಆದ್ರು, ಆ ರೋಲ್ ಇವರಿಗೆ ಕೊಟ್ಟು ಬಿಟ್ಟರು ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ