ಶ್ರೀಗೌರಿ ಸೀರಿಯಲ್ ಈಗ ಫುಲ್​ ಇಂಟ್ರಸ್ಟಿಂಗ್​​.. ಗೌರಿ ಅರ್ಚನಾಗೆ ಬುದ್ಧಿ ಕಲಿಸ್ತಾಳಾ ಇಲ್ವಾ?

author-image
Bheemappa
Updated On
ಅಭಿಮಾನಿಗಳಿಗೆ ಶಾಕಿಂಗ್​ ನ್ಯೂಸ್​ ಕೊಟ್ಟ ಬಿಗ್​ಬಾಸ್​ ಖ್ಯಾತಿಯ ಅಮೂಲ್ಯ ಗೌಡ; ಏನದು?
Advertisment
  • ಗೌರಿ ಹಾಗೂ ಅರ್ಚನಾ ನಡುವೆ ಏನೇನು ಆಗುತ್ತಿದೆ ಗೊತ್ತಾ?
  • ಕುತೂಹಲ ಸಂಚಿಕೆ ಪ್ರಸಾರ ಮಾಡ್ತಿರೋ ಶ್ರೀಗೌರಿ ಸೀರಿಯಲ್
  • ಗೌರಿ ತೆಗೆದುಕೊಂಡಿರೋ ಆ ಒಂದು ನಿರ್ಧಾರ ಖುಷಿ ನೀಡಿತಾ?

ಶ್ರೀಗೌರಿ ಧಾರಾವಾಹಿಯ ಇಂಟ್ರಸ್ಟಿಂಗ್​ ಸಂಚಿಕೆಗಳು ಪ್ರಸಾರವಾಗ್ತಿವೆ. ಯಾವಾಗಲೂ ವಿಲನ್​ಗೆ ವಿಜಯ. ಒಳ್ಳೆದು ಇದ್ಮೇಲೆ, ಕೆಟ್ಟದು ಇರಲೇಬೇಕು. ಕೆಟ್ಟದನ್ನ ವಿಜೃಂಬಿಸುತ್ತೀರಾ ಅನ್ನೋದು ಕಾಮನ್​ ಕಂಪ್ಲೇಂಟ್. ಅದಕ್ಕೆ ವೀಕ್ಷಕರಿಗೆ ವಿಶೇಷ ಸಂಚಿಕೆಗಳು ತೃಪ್ತಿ ನೀಡುತ್ತಿವೆ.

ಇದನ್ನೂ ಓದಿ:₹200 ಕೋಟಿಗೂ ಅಧಿಕ ಮೊತ್ತದ ದೇಣಿಗೆ ನೀಡಿದ ಹಳೆ ವಿದ್ಯಾರ್ಥಿ.. ಭಾರತದ ಇತಿಹಾಸದಲ್ಲೇ ಹೊಸ ದಾಖಲೆ!

ಗೌರಿ ಕಾಲೇಜಿಗೆ ಕುಂದಾಪುರದಿಂದ ಬೆಂಗಳೂರಿಗೆ ಬಂದಿರೋ ಹಿಂದೆನೇ ಅಪ್ಪು ಬಂದಿದ್ದಾಯ್ತು. ಅವನ ಹಿಂದೆನೇ ಪ್ಲಾನ್​ ಮಾಡ್ಕೊಂಡು ತಂಗಿ ಅರ್ಚನಾನೂ ಬಂದಳು. ಅಮ್ಮ- ಅಣ್ಣನ ಮುಂದೆ ನಾಜೂಕಾಗಿರೋ ಅರ್ಚನಾ ಕಾಲೇಜಿಗೆ ಬಂದ್ರೇ ಮಾಡ್ರನ್​ ಅವತಾರದಲ್ಲಿ ಬಿಂದಾಸ್​ ಆಗಿ ಅಣ್ಣ ಕೊಟ್ಟ ಹಣವನ್ನ ದುರುಪಯೋಗ ಪಡೆದುಕೊಳ್ತಿದ್ದಾಳೆ. ಈ ನಡುವೆ ಮೊದಲೇ ಅರ್ಚನಾಗೆ ಗೌರಿನ ಕಂಡ್ರೆ ಆಗಲ್ಲ. ಹಣದ ವಿಷ್ಯಕ್ಕೆ ಅರ್ಚನಾ ನಡೆದುಕೊಳ್ತಿರೋ ರೀತಿಗೆ ಬೇಸತ್ತಿರೋ ಗೌರಿ, ಅರ್ಚನಾಗೆ ಬುದ್ಧಿ ಕಲಿಸುತ್ತಿದ್ದಾಳೆ.

ಇದನ್ನೂ ಓದಿ: ಅಬ್ಬಾ.. ನಿಶ್ಚಿತಾರ್ಥಕ್ಕೆ ಆನ್​ಲೈನ್​ನಲ್ಲಿ ಫುಡ್​ ಆರ್ಡರ್ ಮಾಡಿದ ನವಜೋಡಿ.. ನೆಟ್ಟಿಗರು ಫುಲ್ ಶಾಕ್‌!

publive-image

ಮಂಗಳೂರಿನಲ್ಲಿ ಇದ್ದೀನಿ ಅಂತಾ ಹೇಳಿ ಬೆಂಗಳೂರಲ್ಲಿರೋ ಅಪ್ಪುಗೆ ತಂಗಿಯ ಬಂಡವಾಳದ ಬಗ್ಗೆ ಐಡಿಯಾ ಇಲ್ಲ. ಇಂಥ ತಂಗಿ ಯಾರಿಗೂ ಬೇಡ ಅಂತ ಹಿಡಿಶಾಪ ಹಾಕ್ತಿದ್ದ ವೀಕ್ಷಕರಿಗೆ ಗೌರಿ ತೆಗೆದುಕೊಂಡ ನಿರ್ಧಾರ ಖುಷಿ ನೀಡಿದೆ. ಅರ್ಚನಾಗೆ ಪಾಠ ಹೇಳ್ತಿರೋ ಗೌರಿ. ಇದರಿಂದ ಅರ್ಚನಾ ಬದಲಾಗೋ ಲಕ್ಷಣಗಳು ಕಾಣ್ತಿಲ್ಲ. ಆದರೆ ಅವಳ ಸಿಟ್ಟಿಗೆ ತಕ್ಕ ಶಾಸ್ತಿ ಮಾಡ್ತಿದ್ದಾಳೆ ಗೌರಿ.

ಇದನ್ನೂ ಓದಿ: ಅನಂತ್ ಅಂಬಾನಿ ಕೂದಲು ಉದುರುವುದೇಕೆ? ಮಗನ ಕಾಯಿಲೆ ಬಗ್ಗೆ ನೀತಾ ಅಂಬಾನಿ ಹೇಳಿದ್ದೇನು?

ವೀಕ್ಷಕರೂ ಖುಷ್​ ಆಗಿದ್ದು, ಈ ಥರಹದ ಮತ್ತಷ್ಟು ಸಂಚಿಕೆಗಳು ಬರಲಿ. ಫ್ಯಾಮಿಲಿಗೆ ಮೋಸ ಮಾಡೋರಿಗೆ ತಕ್ಕ ಪಾಠ ಆಗುತ್ತೆ ಅಂತ ಕಾಮೆಂಟ್​ಗಳ ಮೂಲಕ ಅಭಿಪ್ರಾಯ ತಿಳಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment