/newsfirstlive-kannada/media/post_attachments/wp-content/uploads/2025/05/Archana_Udupa.jpg)
ಗಾಯಕಿ ಹಾಗೂ ನಿರೂಪಕಿ ಅರ್ಚನಾ ಉಡುಪ ಅವರು ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದು ಅವರು ಹಾಡುವುದನ್ನೇ ನಿಲ್ಲಿಸಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವದಂತಿ, ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಈ ಕುರಿತು ಸ್ವತಹ ಅರ್ಚನಾ ಉಡುಪ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.
ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿರುವ ಅರ್ಚನಾ ಉಡುಪ ಅವರು, ನಾನು ಇವತ್ತು ಎರಡು ಅತಿ ಮುಖ್ಯವಾದ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದೇನೆ. ನನ್ನನ್ನು ಇವು ಬಹಳ ದಿನಗಳಿಂದ ಕಾಡುತ್ತಿವೆ. ಈ ವಿಡಿಯೋ ಮಾಡಬೇಕೋ, ಬೇಡವೋ?. ಇದರಿಂದ ಉಪಯೋಗ ಆಗುತ್ತೋ ಇಲ್ವೋ?, ಅನ್ನುವ ಅನುಮಾನವಿತ್ತು. ಇದರ ಕಿರಿ ಕಿರಿ ಜಾಸ್ತಿ ಆಗುತ್ತಿರುವುದರಿಂದ ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ.
3-4 ವರ್ಷದ ಹಿಂದೆ ಸಂದರ್ಶನವೊಂದನ್ನು ಕೊಟ್ಟಿದ್ದೆ. ಆ ಸಂದರ್ಶನದಲ್ಲಿ ನನಗೆ 20 ವರ್ಷದ ಹಿಂದೆ ಸಣ್ಣದಾಗಿ ಗಂಟಲಿನ ಕಿರಿ ಕಿರಿ ಸಮಸ್ಯೆ ಉಂಟಾಗಿ ಕೆಲವು ತಿಂಗಳಗಳ ಕಾಲ ಹಾಡುವುದಕ್ಕೆ ಆಗಿರಲಿಲ್ಲ. ಈ ತೊಂದರೆಯಿಂದ ಹೇಗೆ ಹೊರಗೆ ಬಂದೇ, ಮತ್ತೇ ಹಾಡೋದಕ್ಕೆ ಹೇಗೆ ಪ್ರಾರಂಭ ಮಾಡಿದೆ ಎಂದು ಆ ವಿಷಯವನ್ನು ನಾಲ್ಕೈದು ವರ್ಷಗಳ ಹಿಂದೆ ಇಂಟರ್ವ್ಯೂವ್ನಲ್ಲಿ ಹಂಚಿಕೊಂಡಿದ್ದೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ; ಭಾರತದ ರಕ್ಷಣಾ ಬಜೆಟ್ಗೆ 50,000 ಕೋಟಿ ರೂಪಾಯಿ ಹೆಚ್ಚಳ ಸಾಧ್ಯತೆ
ಆದರೆ ನಾನು ಹೇಳಿದ್ದ ಕ್ಲಿಪ್ ಅನ್ನು ಮಾತ್ರ ಅವರು ಹಾಕಿದ್ದಾರೆ. ಆದರೆ ನೀವು ಆ ವಿಡಿಯೋವನ್ನು ಪೂರ್ಣವಾಗಿ ನೋಡದೇ ನನಗೆ ಗಂಟಲು ಹೋಗಿದೆ, ಹಾಡೋದಕ್ಕೆ ಆಗುತ್ತಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದು ಮನಸಿಗೆ ತುಂಬಾ ನೋವು ಕೊಡುತ್ತಿದೆ. ಎಲ್ಲಿ ಹೋದರೂ ಆರೋಗ್ಯವಾಗಿದ್ದೀರಾ, ಹಾಡುತ್ತಿದ್ದೀರಾ ಎಂದು ಕೇಳುತ್ತಿದ್ದಾರೆ. ಆದರೆ ನನಗೆ ಏನು ಆಗಿಲ್ಲ. ಈಗ ನಾನು ಮೊದಲಿಗಿಂತ ಹೆಚ್ಚು ಬ್ಯುಸಿಯಾಗಿದ್ದೀನಿ. ಹೆಚ್ಚು ಹಾಡು ಹಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಇನ್ನೊಂದು ತುಂಬಾ ಮುಖ್ಯವಾದ ವಿಷ್ಯ ಅಂದ್ರೆ, ಶಾರ್ಟ್ ಹೇರ್ ಕಟ್ ಯಾಕೆ ಮಾಡಿಸಿದ್ದೀನಿ ಅಂದರೆ, ನಾನು ಹೊಸ ಸೀರಿಯಲ್ನಲ್ಲಿ ಆ್ಯಕ್ಟ್ ಮಾಡುತ್ತಿದ್ದೇನೆ. ಆ ಪಾತ್ರಕ್ಕೆ ಹೇಗೆ ಬೇಕೋ ಹಾಗೆ ಲುಕ್ ಇರಬೇಕು. ಹೀಗಾಗಿ ಹೇರ್ ಕಟ್ ಮಾಡಿಸಿದ್ದೀನಿ. ನನಗೆ ಯಾವುದೇ ಆರೋಗ್ಯದ ಸಮಸ್ಯೆ ಇಲ್ಲ. ಆದರೆ ನನಗೆ ಕ್ಯಾನ್ಸರ್ ಬಂದಿದೆ ಅನ್ನೋ ಮಟ್ಟಕ್ಕೆ ಮಾತನಾಡಿ, ಎಲ್ಲ ಕಡೆನೂ ಹಬ್ಬಿಸಿದ್ದಾರೆ. ಇದು ನನಗಿಂತ ನನ್ನ ಕುಟುಂಬಸ್ಥರಿಗೆ ತುಂಬಾ ನೋವಾಗಿದೆ. ದಯವಿಟ್ಟು ಪೂರ್ಣ ಮಾಹಿತಿ ಗೊತ್ತಿಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಏನನ್ನು ಹೇಳಬೇಡಿ. ಇದರಿಂದ ಮತ್ತೊಬ್ಬರ ವೃತ್ತಿ ಜೀವನಕ್ಕೆ ಘಾಸಿ ಆಗುತ್ತದೆ ಎಂದು ಅರ್ಚನಾ ಉಡುಪ ಅವರು ಮನವಿ ಮಾಡಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ