/newsfirstlive-kannada/media/post_attachments/wp-content/uploads/2025/05/shivani7.jpg)
ಕನ್ನಡ ಸರಿಗಮಪ ಲಿಟ್ಲ್ ಚಾಂಪ್ ಸೀಸನ್ 19ರಲ್ಲಿ ರನ್ನರ್​ ಅಪ್ ಆಗಿದ್ದ ಶಿವಾನಿ ಅವರು ಈಗ ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ. ಜೀ ತಮಿಳಿನ ಸರಿಗಮಪ ಸೀಸನ್ 5ರಲ್ಲಿ ಅವಕಾಶ ಪಡೆದಿದ್ದಾರೆ. ತಮಿಳು ಹಾಡೊಂದನ್ನು ಸುಮಧುರವಾಗಿ ಹಾಡಿದ ಅವರ ಪ್ರದರ್ಶನ ಜಡ್ಜ್​ಗಳನ್ನು ಮೆಚ್ಚಿಸಿದೆ. ಶಿವಾನಿ ಅವರ ಯಶಸ್ಸು ಕನ್ನಡಿಗರಿಗೆ ಹೆಮ್ಮೆಯ ವಿಷಯ.
/newsfirstlive-kannada/media/post_attachments/wp-content/uploads/2025/05/shivani6.jpg)
ಕನ್ನಡದ ಸರಿಗಮಪ ಲಿಟ್ಲ್ ಚಾಂಪ್ ಸೀಸನ್ 19ರ ಫಿನಾಲೇ ರೇಸ್​​ನಲ್ಲಿದ್ದ ಚಿಕ್ಕಮಗಳೂರಿನ ಶಿವಾನಿ ಅವರು ಮೊದಲ ರನ್ನರ್ ಅಪ್ ಆದರೆ, ಮಂಗಳೂರಿನ ಪ್ರತಿಭೆ ತನುಶ್ರೀ ಎರಡನೇ ರನ್ನರ್ ಅಪ್ ಆಗಿದ್ದರು. ಪ್ರಗತಿ ಬಡಿಗೇರ್ ಅವರು ವಿನ್ನರ್ ಆಗಿದ್ದರು. ಈ ಮೂಲಕ ಅವರು ಕನ್ನಡಿಗರಿಂದ ಮೆಚ್ಚುಗೆ ಪಡೆದರು. ಈಗ ಅವರಿಗೆ ಜೀ ತಮಿಳಿನಲ್ಲಿ ಪ್ರಸಾರ ಆಗುತ್ತಿರೋ ‘ಸರಿಗಮಪ ಸೀಸನ್ 5’ರಲ್ಲಿ ಹಾಡೋದಕ್ಕೆ ಚಾನ್ಸ್​ ಸಿಕ್ಕಿದೆ. ಇದು ಶಿವಾನಿ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
/newsfirstlive-kannada/media/post_attachments/wp-content/uploads/2025/05/vijay-prakash2.jpg)
ಇನ್ನೂ, ಅಚ್ಚರಿಯ ವಿಚಾರ ಏನೆಂದರೆ ತೆಲುಗು ‘ಸರಿಗಮಪ ಸೀಸನ್ 5’ರ ಆಡಿಷನ್​ನಲ್ಲಿ ಶಿವಾನಿ ಭಾಗಿಯಾಗಿದ್ದರು. ವೇದಿಕೆ ಮೇಲೆ 2011ರಲ್ಲಿ ರಿಲೀಸ್ ಆದ ತಮಿಳಿನ ‘ವಾಗೈ ಸೂಡ ವಾ’ ಚಿತ್ರದ ‘ಪೋರಾನೆ ಪೋರಾನೆ..’ ಹಾಡನ್ನು ಹಾಡಿದ್ದರು. ಶಿವಾನಿ ಹಾಡನ್ನು ಕೇಳಿ ವೇದಿಕೆ ಮೇಲಿದ್ದ ಜಡ್ಜ್​ಗಳು ಹಾಗೂ ಜ್ಯೂರಿಗಳು ಫಿದಾ ಆಗಿದ್ದಾರೆ. ಎಲ್ಲರೂ ಅವರನ್ನು ಸ್ಪರ್ಧಿಯಾಗಿ ಆಯ್ಕೆ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಆದ್ರೆ ಗಾಯಕ ವಿಜಯ್ ಪ್ರಕಾಶ್ ಗ್ರೀನ್ ಸಿಗ್ನಲ್ ಕೊಡದೇ ವೆಟಿಂಗ್​ ಲಿಸ್ಟ್​ನಲ್ಲಿ ಇರುವಂತೆ ಸೂಚಿಸಿದ್ದರು.
/newsfirstlive-kannada/media/post_attachments/wp-content/uploads/2025/05/vijay-prakash1.jpg)
ಹೀಗಾಗಿ ಶಿವಾನಿ ಖುಷಿಯಿಂದಲೇ ವೇದಿಕೆಯಿಂದ ಆಚೆ ಹೋಗುತ್ತಿದ್ದರು, ಆಗ ಚಮಕ್​ ಕೊಟ್ಟ ವಿಜಯ್​ ಪ್ರಕಾಶ್​, ಶಿವಾನಿ ಬನ್ನಿ ಬನ್ನಿ ನಿಮ್ಮ ವಾಯ್ಸ್​ ಪರೀಕ್ಷೆ ಮಾಡಬೇಕು ಅಂತ ಹೇಳಿದ್ದರು. ಆ ಕೂಡಲೇ ಶಿವಾನಿ ಸೋಜುಗದ ಸೂಜು ಮಲ್ಲಿಗೆ ಹಾಡನ್ನು ಹಾಡಿದ್ದಾರೆ. ಹಾಡನ್ನು ಶುರು ಮಾಡುತ್ತಿದ್ದಂತೆ ಶಿವಾನಿ ಧ್ವನಿ ಕೇಳಿ ಜಡ್ಜ್​ಗಳೇ ಫಿದಾ ಆಗಿ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ಇದೇ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.
View this post on Instagram
ಈ ವಿಡಿಯೋ ನೋಡಿದ ನೆಟ್ಟಿಗರು, ಅಭಿಮಾನಿಗಳು ತಮಿಳಿನ ಹಾಡನ್ನು ಕಲಿತು ಇಷ್ಟು ಅದ್ಭುತವಾಗಿ ಹಾಡಿದ್ದಕ್ಕೆ ಫಿದಾ ಆಗಿದ್ದಾರೆ. ಅಲ್ಲದೇ ತಮಿಳು ನಾಡಿನ ಸರಿಗಮಪದಲ್ಲಿ ಕನ್ನಡ ಹಾಡು ಹಾಡಿ ಎಲ್ಲರಿಂದಲೂ ಪ್ರಶಂಸೆ ಗಳಿಸಿಕೊಂಡ ಕನ್ನಡ ಕುವರಿ ಶಿವಾನಿಗೆ ಶುಭವಾಗಲಿ, ನಮ್ಮ ರಾಜ್ಯದ ಕರ್ನಾಟಕ ಚಿಕ್ಕಮಂಗಳೂರಿನ ಹುಡುಗಿ ಶಿವನಿಗೆ ಸಪೋರ್ಟ್ ಮಾಡಿ, ಹಾಡೋಕೆ, ಮಾತಾಡೋಕೆ ಕನ್ನಡದಂಥ ಮತ್ತೊಂದು ಭಾಷೆ ಉಂಟೇ! ಪ್ರತಿ ಕನ್ನಡಿಗನ ಮೈ ನವೀರೇಳಿಸುವ ಧ್ವನಿ. ಅವಕಾಶ ಸಿಕ್ಕಾಗೆಲ್ಲ ಕನ್ನಡದ ಕವಿಗಳ ಸಾಲುಗಳನ್ನು ಕೇಳುವ ಸೌಭಾಗ್ಯ ನಮ್ಮ ಕರ್ಣಗಳದಾಗಲಿ ಶುಭವಾಗಲಿ ನಿನಗೆ ಅಂತ ಕಾಮೆಂಟ್ಸ್ ಹಾಕಿ ಶುಭ ಹಾರೈಸಿದ್ದಾರೆ.
/newsfirstlive-kannada/media/post_attachments/wp-content/uploads/2025/05/vijay-prakash.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us