/newsfirstlive-kannada/media/post_attachments/wp-content/uploads/2023/07/SITA_RAMA_SERIAL.jpg)
ಇಡೀ ಕಿರುತೆರೆಯ ವೀಕ್ಷಕರು ಕಾದಿದ್ದು ಸೀತಾ ರಾಮ ಧಾರಾವಾಹಿಯಗೋಸ್ಕರ. ತಡ ಮಾಡದೆ ನಿನ್ನೆಯಷ್ಟೆ ಸೀತಾ ರಾಮ ಇಬ್ಬರು ಕರುನಾಡ ಮನೆ ಮನೆಗೆ ಬಲಗಾಲಿಟ್ಟು ತಲುಪಿದ್ದಾರೆ.
ಹೌದು.. ಮೊದಲನೇ ಎಪಿಸೋಡ್​ ತಂಡ ಅಂದುಕೊಂಡಂತೆ ಲಾಂಚ್ ಆಗಿದೆ. ಪ್ರತಿಯೊಬ್ಬರ ಮನೆಯಲ್ಲೂ ಸೀತಾ ರಾಮ ಧಾರಾವಾಹಿಯ ಟೈಟಲ್ ಟ್ರ್ಯಾಕ್ ಮೊಳಗಿದೆ. ಇನ್ನು ಫಸ್ಟ್ ಎಪಿಸೋಡ್​ ಅಂತೂ ಅದ್ಭುತವಾಗಿ ಮೂಡಿ ಬಂದಿದ್ದು ವೀಕ್ಷಕರ ಮನಸನ್ನು ತಲುಪುವಲ್ಲಿ ಯಶಸ್ವಿಯಾಗಿದೆ.
ಸೀತಾಳ ಮುಗ್ಧತೆ, ರಾಮ್​ನ ರಾಯಲ್ ಲುಕ್ ಸಿಹಿಯ ಸಿಯಾದ ಮಾತು. ಎಲ್ಲವು ಸೀರಿಯಲ್​ನಲ್ಲಿ ಅದ್ಭುತವಾಗಿ ಮೂಡಿ ಬರುತ್ತಿದೆ. ಇನ್ನೂ ಮೊದಲ ಎಪಿಸೋಡ್​​ನಲ್ಲಿ ಎಲ್ಲ ಪಾತ್ರಗಳ ಪರಿಚಯವಾಗಿದೆ. ಮೊದಲ ಸಂಚಿಕೆಯಲ್ಲಿ ರಾಮ್​ಗೆ ಸೀತಾಳ ಮುಖ ಪರಿಚಯವಾಗಿದೆ.
/newsfirstlive-kannada/media/post_attachments/wp-content/uploads/2023/07/SITA_RAMA_SERIAL_1.jpg)
ಸೀರಿಯಲ್​​ನ ಶೂಟ್ ಮಾಡಿರೋ ರೀತಿ ನೋಡಿದ್ರೆ, ಸಿನಿಮಾ ರೀತಿಯಲ್ಲಿ ಶೂಟ್ ಮಾಡಿದ್ದಾರೆ. ರಾಮ್​ನ ಪರಿಚಯ ಮಲೇಷಿಯಾದಲ್ಲಿ ಶೂಟ್ ಮಾಡಿದ್ದಾರೆ. ವೀಕ್ಷಕರು ಕಾದಿದ್ದಕ್ಕೂ ಸಾರ್ಥಕವಾಗೋ ಮಟ್ಟಕ್ಕೆ ಶೂಟಿಂಗ್ ಮಾಡಿದ್ದಾರೆ. ಇನ್ನೂ ಕತೆಯ ಸೂತ್ರಧಾರ ಆಗಿ ಕಿರುತೆರೆಯ ಫೇಮಸ್ ಡೈರೆಕ್ಟ್​ರ್ ಮಧುಸೂಧನ್ ಅವ್ರು ಎಂಟ್ರಿಯಾಗಿದ್ದಾರೆ.
ಕಥಾ ಅಂದರವಂತೂ ಎಲ್ಲರು ಮೆಚ್ಚಿಕೊಳ್ಳುವಂತಿದೆ. ಧಾರಾವಾಹಿಗೆ ಹೆಚ್ಚು ಕಳೆ ತಂದಿದ್ದು ವೈಷ್ಣವಿ ಸತತ ಮೂರ್ನಾಲ್ಕು ವರ್ಷದ ನಂತರ ಮೊತ್ತೊಮ್ಮೆ ಒಳ್ಳೆ ಪಾತ್ರ ಅವ್ರನ್ನ ಹರಸಿ ಬಂದಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್​​ನಲ್ಲಿ 'ಫಿಲ್ಮಿ ಫಸ್ಟ್' ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us