newsfirstkannada.com

ಸೀರಿಯಲ್​, ಸಿನಿಮಾದಲ್ಲಿ ನಟಿ ದರ್ಶನಿ ಸಿಕ್ಕಾಪಟ್ಟೆ ಬ್ಯುಸಿ; ಇಲ್ಲಿವೆ ನಿಮಗೆ ಗೊತ್ತಿರದ ಕೆಲವು ಸಂಗತಿಗಳು

Share :

Published March 21, 2024 at 6:11am

    ಶ್ರೀರಸ್ತು ಶುಭಮಸ್ತು ಧಾರಾವಾಹಿಯ ದೀಪಿಕಾ ಪಾತ್ರಧಾರಿ ನಟಿ ದರ್ಶಿನಿ

    ಸ್ಯಾಂಡಲ್​ವುಡ್​ನಲ್ಲಿ ಕೋರಿಯೋಗ್ರಾಫರ್ ದರ್ಶಿನಿ ಕೆಲಸ ಮಾಡಿದ್ದಾರಾ?

    ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ಖಡಕ್ ವಿಲನ್ ಆಗಿರುವ ದರ್ಶಿನಿ

ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಕತೆಗೆ ವೀಕ್ಷಕರು ಥಂಬ್ಸ್​ ಅಪ್ ನೀಡಿದ್ದಾರೆ. ಧಾರಾವಾಹಿಯ ಎಲ್ಲ ಪಾತ್ರಗಳು ವೀಕ್ಷಕರ ಮನಸ್ಸಿಗೆ ನಾಟಿವೆ. ಇದರಲ್ಲಿ ದೀಪಿಕಾ ಪಾತ್ರಕ್ಕೂ ವೀಕ್ಷಕರು ಚಪ್ಪಾಳೆ ತಟ್ಟಿದ್ದಾರೆ. ಈಗ ಆ ಪಾತ್ರ ಮಾಡ್ತಿರುವ ನಟಿ ದರ್ಶಿನಿ ಡೆಲ್ಟಾ ನಾಗರಾಜ್ ಅವರ ಬಗೆಗಿನ ಒಂದಷ್ಟು ಸ್ಪೆಷಲ್ ನ್ಯೂಸ್ ಇಲ್ಲಿದೆ.

ನಟಿ ದರ್ಶಿನಿ ಅವರು ಮೂಲತಃ ಬೆಂಗಳೂರಿನವರು. ದರ್ಶಿನಿ ಬರೀ ಕಲಾವಿದರಷ್ಟೆ ಅಲ್ಲ. ಉತ್ತಮ ನೃತ್ಯ ಕಲಾವಿದೆ ಕೂಡ ಹೌದು. ನಟಿ ದರ್ಶಿನಿ ಕೋರಿಯೋಗ್ರಾಫರ್ ಕೂಡ ಹೌದು. ಇದಷ್ಟೇ ಅಲ್ಲ, ಚಲನಚಿತ್ರರಂಗದಲ್ಲಿ ಕೋರಿಯೋಗ್ರಾಫರ್ ಆಗಿ ಗುರುತಿಸಿಕೊಂಡಿರುವ ನಟಿಯ ಬಹಳಷ್ಟು ವಿಷಯಗಳ ವೀಕ್ಷಕರಿಗೆ ಗೊತ್ತಿಲ್ಲ.

ಸಿನಿ ರಂಗದಲ್ಲಿ ಇತ್ತೀಚಿಗೆ ಬಿಡುಗಡೆ ಆಗಿರುವ ಉಪಾಧ್ಯಕ್ಷ ಸಿನಿಮಾದ ಹಾಡುಗಳಿಗೆ ದರ್ಶಿನಿಯೇ ಕೋರಿಯೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ. ನಟರಾದ ಚಿಕ್ಕಣ್ಣ, ಶರಣ್ ಹೀಗೆ ಹೆಸರಾಂತ ಕಲಾವಿದರ ಸಿನಿಮಾಗಳಿಗೆ ಕೋರಿಯೋಗ್ರಾಫರ್ ಆಗಿ ಕೆಲಸ ಮಾಡಿದ ಅನುಭವ ಅವರಿಗಿದೆ. ಸದ್ಯ ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ಖಡಕ್ ವಿಲನ್ ಆಗಿ ನಟಿಸ್ತಿರುವ ದೀಪಿಕಾ, ಕೋರಿಯೋಗ್ರಫಿ ಮತ್ತು ಆ್ಯಕ್ಟಿಂಗ್ ಎರಡನ್ನೂ ಸರಿದೂಗಿಸಿಕೊಂಡು ಅಭಿನಯ ಮಾಡ್ತಿದ್ದಾರೆ.

ಉತ್ತಮ ನಟಿ ಆಗಬೇಕು ಅನ್ನೋದಷ್ಟೇ ಅಲ್ಲ, ಬೆಸ್ಟ್‌ ಕೋರಿಯೋಗ್ರಾಫರ್ ಆಗ್ಬೇಕು ಅನ್ನೋದು ದರ್ಶಿನಿಯ ಆಸೆ. ಇನ್‌ಫ್ಯಾಕ್ಟ್‌ ಇವ್ರು ಕೋರಿಯೋಗ್ರಫರ್ ಆಗ್ಬೇಕು ಅನ್ನೋದು ಇವರ ತಂದೆಯ ಕನಸಂತೆ. ಹಾಗಾಗಿಯೇ ದರ್ಶಿನಿ ಅದನ್ನ ನನಸು ಮಾಡಿದ್ದಾರೆ. ಕಿರುತೆರೆ ಹಾಗೂ ಹಿರಿತೆರೆ ಎರಡು ಕಡೆನೂ ನಟಿ ದರ್ಶಿನಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಇವರ ಈ ಜರ್ನಿ ಹೀಗೆ ಸಾಗಲಿ ಅಂತ ನಾವು ಕೂಡ ಬೆಸ್ಟ್ ವಿಶಸ್ ತಿಳಿಸೋಣ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೀರಿಯಲ್​, ಸಿನಿಮಾದಲ್ಲಿ ನಟಿ ದರ್ಶನಿ ಸಿಕ್ಕಾಪಟ್ಟೆ ಬ್ಯುಸಿ; ಇಲ್ಲಿವೆ ನಿಮಗೆ ಗೊತ್ತಿರದ ಕೆಲವು ಸಂಗತಿಗಳು

https://newsfirstlive.com/wp-content/uploads/2024/03/DARSHINI.jpg

Load More