ಹುಟ್ಟು ಹಬ್ಬದ ಸಂಭ್ರಮದಲ್ಲಿ ಸ್ಟಾರ್​ ನಿರೂಪಕ ಅಕುಲ್​ ಬಾಲಾಜಿ; ಹೇಗಿತ್ತು ಸೆಲೆಬ್ರೇಷನ್!

author-image
Veena Gangani
Updated On
ಹುಟ್ಟು ಹಬ್ಬದ ಸಂಭ್ರಮದಲ್ಲಿ ಸ್ಟಾರ್​ ನಿರೂಪಕ ಅಕುಲ್​ ಬಾಲಾಜಿ; ಹೇಗಿತ್ತು ಸೆಲೆಬ್ರೇಷನ್!
Advertisment
  • ಅಕುಲ್ ಬಾಲಾಜಿ ಬರ್ತ್​ ಡೇ ಆಯೋಜಿಸಿದ್ದ ಹೆಂಡತಿ ಜ್ಯೋತಿ ಅಕುಲ್
  • ಹುಟ್ಟು ಹಬ್ಬದ ಸಂಭ್ರಮಲ್ಲಿ ಕಿರುತೆರೆ ಲೋಕದ ಜನಪ್ರಿಯ ನಿರೂಪಕ
  • ಎಲ್ಲರ ಸಮ್ಮುಖದಲ್ಲಿ ಕೇಕ್​ ಕಟ್​ ಮಾಡಿ ಸಂಭ್ರಮಿಸಿದ ಅಕುಲ್ ಬಾಲಾಜಿ

ಕನ್ನಡ ಕಿರುತೆರೆ ಲೋಕದ ಜನಪ್ರಿಯ ನಿರೂಪಕ ಅಕುಲ್ ಬಾಲಾಜಿ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ಅಕುಲ್ ಬಾಲಾಜಿ ಎಂದರೆ ಥಟ್​ ಅಂತ ನೆನಪಾಗೋದೆ ಆ ಜೋರಾದ ಮಾತು, ನಗುಮುಖ, ಅವರ ಹಾಸ್ಯ ಚಟಾಕಿ. ನಗು ನಗುತ್ತಲೇ ಎಲ್ಲರನ್ನೂ ತನ್ನತ್ತ ಸೆಳೆಯುವ ನಿರೂಪಕ ಅಕುಲ್ ಬಾಲಾಜಿ ಈಗ ಹುಟ್ಟು ಹಬ್ಬದ ಸಂಭ್ರದಲ್ಲಿದ್ದಾರೆ.

ಇದನ್ನೂ ಓದಿ:ಯದುವೀರ್ 2ನೇ ಪುತ್ರನ ನಾಮಕಾರಣ; ಯುಗಾಧ್ಯಕ್ಷ ಕೃಷ್ಣದತ್ತ ಚಾಮರಾಜ ಒಡೆಯರ್‌ ಫೋಟೋ ಇಲ್ಲಿವೆ!

publive-image

ಚಟಪಟ ಅಂತ ಮಾತನಾಡೋ ಅಕುಲ್​ ಬಾಲಾಜಿ ಅವರು ತಮ್ಮ ಖಡಕ್​​​ ಮಾತಿನಲ್ಲೇ ರಾಜ್ಯದ ಮನೆ ಮಾತಾಗಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಅಕುಲ್ ಬಾಲಾಜಿ ಹೆಸರು ಹೇಳಿದ್ರೆ ಸಾಕು ಇವರು ಆ್ಯಂಕರ್ ಅಂತಾ ಥಟ್ ಅಂತ ಹೇಳಿ ಬಿಡ್ತಾರೆ. ಅಷ್ಟರ ಮಟ್ಟಿಗೆ ಅಕುಲ್ ಬಾಲಾಜಿ ಫೇಮಸ್​​. ಕನ್ನಡ, ತೆಲುಗು ಭಾಷೆಗಳಲ್ಲಿ ನಿರೂಪಕರಾಗಿ ಗುರುತಿಸಿಕೊಂಡಿದ್ದ ಅಕುಲ್ ಬಾಲಾಜಿ ಅವರು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.

publive-image

ಫೆಬ್ರವರಿ 23ರಂದು ನಿರೂಪಕ ಅಕುಲ್ ಬಾಲಾಜಿ ಅವರದ್ದು ಹುಟ್ಟು ಹಬ್ಬವಿತ್ತು. ಹೀಗಾಗಿ ಅಕುಲ್ ಬಾಲಾಜಿ ಅವರ ಪತ್ನಿ ಪಾರ್ಟಿಯೊಂದನ್ನು ಆಯೋಜನೆ ಮಾಡಿದ್ದರು. ಇದೇ ವೇಳೆ ಕುಟುಂಬಸ್ಥರು, ಗೆಳಯರ ಸಮ್ಮುಖದಲ್ಲಿ ಕೇಕ್​ ಕಟ್​ ಮಾಡಿ ತಮ್ಮ ಹುಟ್ಟು ಹಬ್ಬವನ್ನು ಗ್ರ್ಯಾಂಡ್​ ಆಗಿ ಆಚರಿಸಿಕೊಂಡಿದ್ದಾರೆ. ಇನ್ನೂ, ಪತಿಯ ಹುಟ್ಟು ಹಬ್ಬವನ್ನು ಆಚರಿಸಿದ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment