/newsfirstlive-kannada/media/post_attachments/wp-content/uploads/2025/06/Vadhu2.jpg)
ಕೆಲ ಧಾರಾವಾಹಿ ಬಂದ ಹಾಗೇ ವೇಗವಾಗಿ ಜರ್ನಿ ಮುಗಿಸಿಬಿಡುತ್ತೆ. ಈ ಲಿಸ್ಟ್​ಗೆ ವಧು ಧಾರಾವಾಹಿ ಸೇರ್ಪಡೆಯಾಗಿದೆ.
ಹೌದು, ಪ್ರೋಮೋ ಮೂಲಕ ಸಖತ್ ಸೌಂಡ್ ಮಾಡಿದ್ದ ಧಾರಾವಾಹಿ ಬಿಗ್​ಬಾಸ್​ ವೇದಿಕೆ ಮೇಲೆ ರಿಲೀಸ್ ಆಗಿತ್ತು. ಟಿ. ಎನ್. ಸೀತಾರಾಮ್ ಕಾಣಿಸಿಕೊಂಡಿದ್ದ ಪ್ರೋಮೋ ಕುತೂಹಲ ಹೆಚ್ಚಿಸಿತ್ತು. ಜನವರಿ 27ಕ್ಕೆ ತೆರೆ ಕಂಡಿತ್ತು ವಧು ಧಾರಾವಾಹಿ.
ಇದನ್ನೂ ಓದಿ: ಟಾಪ್​ 6ರಲ್ಲಿ ಯಾರ ಕೈಗೆ ಸೇರಲಿದೆ Sa Re Ga Ma Pa ಟ್ರೋಫಿ.. ವೀಕ್ಷಕರ ಚಿತ್ತ ಯಾರತ್ತ?
/newsfirstlive-kannada/media/post_attachments/wp-content/uploads/2025/06/Vadhu1.jpg)
ಆದ್ರೆ, ನಿರೀಕ್ಷೆಯಂತೆ ವೀಕ್ಷಕರ ಮನ ಮುಟ್ಟುವಲ್ಲಿ ಸೀರಿಯಲ್ ಯಶಸ್ವಿ ಆಗಲಿಲ್ಲ. TRP ರೇಟಿಂಗ್​ನಲ್ಲಿ ಸುಧಾರಣೆ ಕಾಣಲಿಲ್ಲ, ಇದರ ನಡುವೆ ಸಮಯ ಬದಲಾವಣೆ ಮತ್ತಷ್ಟು ಹೊಡೆತ ಕೊಟ್ಟಿತ್ತು. ಬರಹಗಾರರ ತಂಡ ಬದಲಾಗಿದ್ದು, ಮತ್ತೊಂದು ಹೊಡೆತವಾಗಿತ್ತು. ಮೊದಲು ಕನ್ನಡತಿ ಧಾರಾವಾಹಿಗೆ ಕಥೆ ಬರೆದಿದ್ದ ನಿರ್ದೇಶಕ, ಚಾನಲ್​ ಹೆಡ್​ ಆಗಿದ್ದ ಪರಮೇಶ್ವರ್ ಗುಂಡ್ಕಲ್ ಅವರು ವಧುಗೆ ಸ್ಟೋರಿ ಮಾಡಿದ್ರು. ಮೊದಲ ಪ್ರೋಮೋ ಕೂಡ ಇವರೇ ನಿರ್ದೇಶನ ಮಾಡಿದ್ದು. ಧಾರಾವಾಹಿ ಶುರುವಾದ ಒಂದೇ ವಾರದಲ್ಲಿ ಉದಯ ವಾಹಿನಿಗೆ ಹೆಡ್​ ಆಗಿ ಕಾರ್ಯ ನಿರ್ವಹಿಸ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/06/Vadhu.jpg)
ಹೀಗಾಗಿ ರೈಟರ್ ಟೀಮ್​ ಚೇಂಜ್​ ಆಗಿದ್ದು ವಧುಗೆ ಹೊಡೆತೆ ಕೊಟ್ಟಿತು. ಪಾರು, ಬ್ರಹ್ಮಗಂಟು ಸೂಪರ್​ ಹಿಟ್​ ಸೀರಿಯಲ್​ಗಳನ್ನ ಕೊಡಗೆ ನೀಡಿರೋ ಧೃತಿ ಕ್ರಿಯೇಷನ್ಸ್​ ಅಡಿ ವಧು ನಿರ್ಮಾಣ ಮಾಡಿದ್ರು. ನಟ, ನಿರ್ದೇಶಕ, ನಿರ್ಮಾಪಕ ದಿಲೀಪ್ ರಾಜ್​ ಹಾಗೂ ಪತ್ನಿ ಶ್ರೀವಿದ್ಯಾ ವಧುಗೆ ಬಂಡವಾಳ ಹಾಕಿದ್ರು. ಪ್ರಿಯಾಂಕಾ ಪಾತ್ರದಲ್ಲಿ ಸೋನಿ ಮುಲೇವ, ವಧು ಪಾತ್ರದಲ್ಲಿ ದುರ್ಗಶ್ರೀ, ಸಾರ್ಥಕ್​ ಪಾತ್ರದಲ್ಲಿ ಅಭಿಷೇಕ್​ ಹಾಗೂ ಪ್ರಮುಖ ಪಾತ್ರದಲ್ಲಿ ವಿನಯಾ ಪ್ರಸಾದ್​ ಅಭಿನಯಿಸಿದ್ರು. ಈ ವಾರ ಕೊನೆ ಸಂಚಿಕೆಗಳು ಪ್ರಸಾರವಾಗಲಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us