newsfirstkannada.com

ಅಪ್ಪು ಪುತ್ರಿಯಿಂದ ‘ಯುವ’ ಸಿನಿಮಾದ ಸಾಂಗ್ ರಿಲೀಸ್​.. ಅಪ್ಪನ ಬಗ್ಗೆ ಭಾವುಕರಾಗಿ ಮಾತನಾಡಿದ ಯುವರಾಜ್ ಕುಮಾರ್

Share :

Published March 16, 2024 at 10:17am

    ಯುವ ಸಿನಿಮಾ ಅಪ್ಪ- ಮಗನ ಬಾಂಧವ್ಯದ ಕಥೆ ಹೊಂದಿದೆಯಾ?

    ಪುನೀತ್​ ರಾಜ್​​ಕುಮಾರ್​ರ 2ನೇ ಪುತ್ರಿಯಿಂದ ಸಾಂಗ್ ರಿಲೀಸ್

    ಯುವರಾಜ್ ಕುಮಾರ್ ಹೆಚ್ಚಾಗಿ ಬೆಳೆದಿರೋದು ಯಾರ ಜೊತೆ..?

ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಯುವರಾಜ್ ಕುಮಾರ್ ನಾಯಕನಾಗಿ ನಟಿಸ್ತಿರುವ ಚೊಚ್ಚಲ ಸಿನಿಮಾ ಯುವ. ಈಗಾಗಲೇ ಈ ಸಿನಿಮಾ ಟೀಸರ್ ಹಾಗೂ ಹಾಡಿನಿಂದ ಸಖತ್ ಹವಾ ಸೃಷ್ಟಿದೆ. ಬೆನ್ನಲ್ಲೇ ಯುವ ಸಿನಿಮಾದ ಮತ್ತೊಂದು ಅಪ್ಪುಗೆ ಹಾಡನ್ನು ದಿವಂಗತ ಪುನೀತ್​ ರಾಜ್​​ಕುಮಾರ್ ಅವರ 2ನೇ ಪುತ್ರಿ ಕೈಯಿಂದ ಚಿತ್ರತಂಡ ಬಿಡುಗಡೆ ಮಾಡಿಸಿದೆ.

ದೊಡ್ಮನೆ ಕುಡಿ ನಟನೆಯ ಯುವ ಸಿನಿಮಾದ ಬಗ್ಗೆ ಅಭಿಮಾನಿಗಳು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿನಿಮಾದ ಇನ್ನೊಂದು ಸಾಂಗ್ ಅನ್ನು ದಿವಂಗತ ನಟ ಪುನೀತ್​ ರಾಜ್​​ಕುಮಾರ್ ಅವರ ​ಎರಡನೇ ಪುತ್ರಿ ವಂದಿತಾ ಕೈಯಿಂದ ಸಿನಿಮಾದ ಹಾಡನ್ನ ಬಿಡುಗಡೆ ಮಾಡಿಸಲಾಗಿದೆ. ಪುನೀತ್​ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಯುವರಾಜ್ ಅಭಿನಯದ ಯುವ ಚಿತ್ರದ 3ನೇ ಸಾಂಗ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಹಿಂದೆ ವಂದಿತಾ ಅವರು ಎಲ್ಲೂ ಹೊರಗೆ ಕಾಣಿಸಿಕೊಂಡಿರಲಿಲ್ಲ. ಸದ್ಯ ಹಾಡಿನ ಬಿಡುಗಡೆ ಬಳಿಕ ಮಾತನಾಡಿದ ಯುವ ರಾಜ್​ಕುಮಾರ್ ಸಿನಿಮಾದಲ್ಲಿ​ ಅಪ್ಪ-ಮಗನ ಬಾಂಧವ್ಯದ ಬಗ್ಗೆ ಚಿತ್ರಿಸಲಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಯುವ ರಾಜ್​ಕುಮಾರ್, ತಮ್ಮ ತಂದೆ ರಾಘವೇಂದ್ರ ರಾಜ್​ಕುಮಾರ್​ ಬಗ್ಗೆ ಮಾತನಾಡಿದ್ದಾರೆ. ಹೆಚ್ಚಾಗಿ ಬೆಳೆದಿರೋದೆಲ್ಲ ಅಮ್ಮನ ಜೊತೆ. ಅಮ್ಮನ ಅಟಾಚ್ಮೆಂಟ್ ಹೆಚ್ಚಿದೆ. ಸಿನಿಮಾ, ಪ್ರೊಡಕ್ಷನ್ ಅಂತ ಕೆಲಸಗಳಲ್ಲಿ ಅಪ್ಪ ಬ್ಯುಸಿ ಇರುತ್ತಿದ್ದರು. ಅಪ್ಪ ಅನಾರೋಗ್ಯದಿಂದ ಮನೆಯಲ್ಲಿ ಉಳಿದಾಗ ನಾನು ಜವಾಬ್ದಾರಿ ತಗೊಂಡೆ. ಆಗ ಅಪ್ಪನ ಕಷ್ಟ ಏನೆಂದು ಗೊತ್ತಾಯಿತು. ಒಂದು ಕಾಲದಲ್ಲಿ ಅಪ್ಪ ತುಂಬಾ ಸ್ಟ್ರಿಕ್ಟ್ ಆಗಿ ಇದ್ದರು. ಈಗ ಫ್ರೆಂಡ್ ರೀತಿ ನಮ್ಮ ಜೊತೆ ಇರುತ್ತಾರೆ ಎಂದಿದ್ದಾರೆ. ಯುವ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ಮಾರ್ಚ್ 23ಕ್ಕೆ ನಡೆಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಪ್ಪು ಪುತ್ರಿಯಿಂದ ‘ಯುವ’ ಸಿನಿಮಾದ ಸಾಂಗ್ ರಿಲೀಸ್​.. ಅಪ್ಪನ ಬಗ್ಗೆ ಭಾವುಕರಾಗಿ ಮಾತನಾಡಿದ ಯುವರಾಜ್ ಕುಮಾರ್

https://newsfirstlive.com/wp-content/uploads/2024/03/YUVA_RAJAKUMAR.jpg

Load More