ತೆಲುಗಿನ ತ್ರಿನಯನಿ ಧಾರಾವಾಹಿಯಲ್ಲಿ ಮಿಂಚಿದ ಕನ್ನಡತಿ ಪವಿತ್ರ ಜಯರಾಂ ದುರಂತ ಅಂತ್ಯ

author-image
admin
Updated On
ತೆಲುಗಿನ ತ್ರಿನಯನಿ ಧಾರಾವಾಹಿಯಲ್ಲಿ ಮಿಂಚಿದ ಕನ್ನಡತಿ ಪವಿತ್ರ ಜಯರಾಂ ದುರಂತ ಅಂತ್ಯ
Advertisment
  • ತೆಲುಗು ಕಿರುತೆರೆ ವೀಕ್ಷಕರ ಮನೆ ಮಾತಾಗಿದ್ದ ಪವಿತ್ರ ಜಯರಾಂ
  • ಪವಿತ್ರ ಜಯರಾಂ ಸಾವಿಗೆ ಕಿರುತೆರೆ ಕಲಾವಿದರಿಂದ ತೀವ್ರ ಸಂತಾಪ
  • ನಾಳೆ ಪವಿತ್ರಾ ಜಯರಾಂ ಅವರ ಪಾರ್ಥಿವ ಶರೀರ ಬೆಂಗಳೂರಿಗೆ

ಬೆಂಗಳೂರು: ತೆಲುಗು ಸಿನಿಮಾ ಹಾಗೂ ಕಿರುತೆರೆಯಲ್ಲಿ ಅಭಿನಯಿಸಿದ ಬಹಳಷ್ಟು ಕನ್ನಡಿಗರು ಸಕ್ಸಸ್ ಕಂಡಿದ್ದಾರೆ. ತೆಲುಗು ಕಿರುತೆರೆಯಲ್ಲಿ ಕರ್ನಾಟಕದ ಕಲಾವಿದರಿಗೆ ಸಾಕಷ್ಟು ಬೇಡಿಕೆಯೂ ಇದೆ. ಕನ್ನಡಿಗರು ಅಭಿನಯಿಸಿದ ಧಾರಾವಾಹಿಗಳು ತೆಲುಗು ಕಿರುತೆರೆಯಲ್ಲಿ ಜನಪ್ರಿಯರಾಗಿದ್ದಾರೆ. ಹೀಗೆ ತೆಲುಗಿನ ತ್ರಿನಯನಿ ಧಾರಾವಾಹಿಯಲ್ಲಿ ಮಿಂಚಿದ ಕನ್ನಡತಿ ಪವಿತ್ರ ಜಯರಾಂ ಇವತ್ತು ದುರಂತದಲ್ಲಿ ಅಂತ್ಯವಾಗಿದ್ದಾರೆ.

ಪವಿತ್ರ ಜಯರಾಂ ಅವರು ತೆಲುಗಿನ ತ್ರಿನಯನಿ ಸೀರಿಯಲ್‌ ಮೂಲಕ ತೆಲುಗು ಕಿರುತೆರೆ ವೀಕ್ಷಕರ ಮನೆ ಮಾತಾಗಿದ್ದರು. ಕನ್ನಡತಿ ಪವಿತ್ರ ಜಯರಾಂ ಅವರು ಇಂದು ಮುಂಜಾನೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಪವಿತ್ರ ಜಯರಾಂ ಸಾವಿನ ಸುದ್ದಿ ತಿಳಿದ ತೆಲುಗು ಕಿರುತೆರೆಯ ಅನೇಕ ಕಲಾವಿದರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.

publive-image

ಪವಿತ್ರ ಜಯರಾಂ ಅವರು ಮೂಲತಃ ಮಂಡ್ಯ ಜಿಲ್ಲೆಯವರು. ಕನ್ನಡದ ರೋಬೋ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾ ರಮಣ ಧಾರವಾಹಿಯಲ್ಲಿ ನಟಿಸಿ ಜನಪ್ರಿಯರಾಗಿದ್ದ ಪವಿತ್ರ ಜಯರಾಂ ಅವರು ನಂತರ ತೆಲುಗು ಕಿರುತೆರೆಯಲ್ಲಿ ಅಭಿನಯಿಸಿದ್ದರು. ಪವಿತ್ರ ಜಯರಾಂ ಸಾವಿಗೆ ತೆಲುಗು ಕಿರುತೆರೆಯ ಹಲವು ಕಲಾವಿದರು ತೀವ್ರ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ:ಗಿಚ್ಚಿ ಗಿಲಿಗಿಲಿ ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಹಾಸ್ಯನಟ ಚಂದ್ರಪ್ರಭ; ಕಾರಣವೇನು? 

ಹೈದರಾಬಾದ್ ಸಮೀಪದ ಮೆಹಬೂಬ್ ನಗರದಲ್ಲಿ ಇಂದು ಬೆಳಗ್ಗೆ ಪವಿತ್ರ ಜಯರಾಂ ಅವರು ಪ್ರಯಾಣಿಸುತ್ತಿದ್ದ ಕಾರು, ಬಸ್‌ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದೆ. ಭೀಕರ ಅಪಘಾತದಲ್ಲಿ ನಟಿ ಪವಿತ್ರ ಜಯರಾಂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಾಳೆ ಪವಿತ್ರಾ ಜಯರಾಂ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ರವಾನೆ ಮಾಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment