ಕನ್ನಡತಿಯ ಕೈ ಹಿಡಿದು ಹೊರಟ ಸಾಗರ್ ಭಾರದ್ವಾಜ್.. ರಂಜನಿ ರಾಘವನ್ ಜೋಡಿಗೆ ​ಫ್ಯಾನ್ಸ್​ ಹಾರೈಕೆ

author-image
Veena Gangani
Updated On
ಕನ್ನಡತಿಯ ಕೈ ಹಿಡಿದು ಹೊರಟ ಸಾಗರ್ ಭಾರದ್ವಾಜ್.. ರಂಜನಿ ರಾಘವನ್ ಜೋಡಿಗೆ ​ಫ್ಯಾನ್ಸ್​ ಹಾರೈಕೆ
Advertisment
  • ಕನ್ನಡತಿ ಮುಕ್ತಾಯದ ನಂತರ ನಿರ್ದೇಶನ ಕಡೆಗೆ ಮುಖ ಮಾಡಿದ ನಟಿ
  • ಯುವ ನಿರ್ದೇಶಕಿ ಆಗಿ ಮಿಂಚೋಕೆ ತಯಾರಾಗಿದ್ದಾರೆ ರಂಜನಿ ರಾಘವನ್
  • ಜಾಲಿ ಮುಂಗಾರು​ ಮಳೆಯನ್ನ ಎಂಜಾಯ್​ ಮಾಡ್ತಿದ್ದಾರೆ ಸ್ಟಾರ್ ಪ್ರೇಮಿಗಳು

ಜನಪ್ರಿಯ ಧಾರಾವಾಹಿ ಕನ್ನಡತಿ ಮುಕ್ತಾಯದ ನಂತರ ರಂಜನಿ ರಾಘವನ್ ಸಿನಿಮಾ ನಿರ್ದೇಶನ, ನಟನೆಯತ್ತ, ಸಾಹಿತ್ಯದ ಕುರಿತು ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಇವರದ್ದು ಪ್ರಾಜೆಕ್ಟ್​ ರಿಲೀಸ್​ ಆಗಿಲ್ಲ. ಯುವ ನಿರ್ದೇಶಕಿ ಆಗಿ ಮಿಂಚೋಕೆ ತಯಾರಾಗಿದ್ದಾರೆ.

publive-image

ಅಂದ್ಹಾಗೆ, ರಂಜನಿ ರಾಘವನ್ ತಮ್ಮ ಮದುವೆ ಬಗ್ಗೆ ಅನೌನ್ಸ್​ ಮಾಡಿದ್ರು. ಹೌದು, ರಂಜನಿ ಅವ್ರು ಮೂವರು ಸಹೋದರಿಯರು. ರಂಜನಿನೇ ದೊಡ್ಡವ್ರು. ಇವರ ನಂತರ ಇಬ್ಬರೂ ತಂಗಿಯರಿದ್ದಾರೆ. ಒಬ್ಬರ ಹೆಸರು ವೈಷ್ಣವಿ, ಇನ್ನೊಬ್ಬರ ಹೆಸರು ಸೌದಾಮಿನಿ. ಅವರಲ್ಲಿ ಕಳೆದ ನವೆಂಬರ್​ನಲ್ಲಿ ಸಹೋದರಿ ಸೌಧಾಮಿನಿ ವಿವಾಹ ಮಹೋತ್ಸವ ನೆರವೇರಿದೆ.

publive-image

ತಂಗಿ ಮದುವೆ ಬೆನ್ನಲ್ಲೇ ಭಾವಿ ಪತಿಯನ್ನ ಪರಿಚಯಿಸಿದ್ರು ನಟಿ ರಂಜನಿ. ತಮ್ಮ ಬಾಳ ಸಂಗಾತಿಯಾಗುವವರ ಬಗ್ಗೆ ಹೇಳುವ ಮೂಲಕ ಭಾರಿ ಸುದ್ದಿಯಾಗಿದ್ದರು. ಭಾವಿ ಪತಿಯಾಗುವ ಹುಡುಗ ಸಾಗರ್ ಭಾರದ್ವಾಜ್ ಜೊತೆಗಿನ ಫೋಟೊ ಶೇರ್ ಮಾಡಿ ನನ್ ಹುಡುಗ, ಲೈಫ್ ಪಾರ್ಟ್ನರ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಸದ್ಯ ಪ್ರೇಮಿಗಳಿಬ್ಬರೂ ಜಾಲಿ ಮುಂಗಾರು​ ಮಳೆಯನ್ನ ಎಂಜಾಯ್​ ಮಾಡ್ತಿದ್ದಾರೆ.

publive-image

ಭಾವಿ ಪತಿ ಜೊತೆಗೆ ಜಾಲಿ ಡ್ರೈವ್​ ಹೋಗಿರೋ ಫೋಟೋಗಳನ್ನ ಹಂಚಿಕೊಂಡಿದ್ದಾರೆ ರಂಜನಿ. ಇತ್ತೀಚಿಗೆ ಲೈಫ್ ಜೊತೆಯಾಗಿ ಹಿತವಾಗಿ ಸಾಗ್ತಿದೆ ಎಂಬ ಅರ್ಥದಲ್ಲಿ ಸುಂದರ ಕ್ಷಣಗಳನ್ನ ಶೇರ್​ ಮಾಡಿದ್ದಾರೆ. ಬೆಸ್ಟ್ ಫ್ರೆಂಡ್ ಸಾಗರ್ ಅವರನ್ನು ಲೈಫ್ ಪಾರ್ಟ್ನರ್ ಆಗಿ ಸ್ವೀಕರಿಸಿರೋ ರಂಜನಿ, ಮದುವೆ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದ್ರೆ ಶೇರ್ ಮಾಡಿಕೊಂಡ ಫೋಟೋ ನೋಡಿ ಅಭಿಮಾನಿಗಳು ಈ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.

ನಟಿ ರಂಜನಿ ರಾಘವನ್ ಅವರು ಸಾಗರ್‌ ಭಾರದ್ವಾಜ್ ಅವರ ಬಗ್ಗೆ ಯಾವ ಮಾಹಿತಿಯೂ ಹಂಚಿಕೊಂಡಿಲ್ಲ. ಆದರೆ ಸಾಗರ್‌ ಭಾರದ್ವಾಜ್ ಅವರು ಅಥ್ಲೇಟ್‌. ರನ್ನರ್‌, ಸೈಕಲಿಸ್ಟ್‌, ಬೈಕರ್‌ ಆಗಿಯೂ ಗುರುತಿಸಿಕೊಂಡಿದ್ದಾರೆ. ಸಾಗರ್‌ ಭಾರದ್ವಾಜ್ ಬಳಿ bullet 350cc ಇದೆ. ಇದೇ ಬುಲೆಟ್‌ನಲ್ಲಿ 1 ಲಕ್ಷ ಕಿಲೋ ಮೀಟರ್ ಪ್ರಯಾಣ ಮಾಡಿದ್ದಾರೆ. ಸೈಕಲ್‌ನಲ್ಲಿ 2 ಲಕ್ಷ ಕಿಲೋ ಮೀಟರ್ ಪ್ರಯಾಣಿಸಿದ್ದಾರೆ. ಇನ್ನೂ ಇವರ ಬಗ್ಗೆ ಹೆಚ್ಚಿನ ವಿವರ ಲಭ್ಯವಾಗಿಲ್ಲ. ಈ ಬಗ್ಗೆ ಖುದ್ದಾಗಿ ರಂಜನಿ ಅವರೇ ತಿಳಿಸಬೇಕಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment