/newsfirstlive-kannada/media/post_attachments/wp-content/uploads/2024/12/RANJINI2.jpg)
ಕನ್ನಡ ಕಿರುತೆರೆಯ ಜನ ಮೆಚ್ಚಿದ ಸೀರಿಯಲ್​ ಎಂದರೆ ಅದು ಕನ್ನಡತಿ. ಈ ಸೀರಿಯಲ್​​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದಿರೋ ನಟಿ ರಂಜನಿ ರಾಘವನ್ ಎಲ್ಲರಿಗೂ ಅಚ್ಚುಮೆಚ್ಚು. ಕನ್ನಡತಿ ಧಾರಾವಾಹಿಯಲ್ಲಿ ಭುವಿ ಪಾತ್ರ ನಿಭಾಯಿಸಿದ್ದ ರಂಜನಿ ಅವರಿಗೆ ಸಾಕಷ್ಟು ಅಭಿಮಾನಿಗಳ ಬಳಗ ಇದೆ.
ಇದನ್ನೂ ಓದಿ: BBK11: ಬಿಗ್​ಬಾಸ್ ಮನೆಯಲ್ಲಿ ಟಾರ್ಗೆಟ್ ಆದ ಚೈತ್ರಾ ಕುಂದಾಪುರ; ಮಂಜಣ್ಣನ ಗೇಮ್ ಪ್ಲಾನ್ ವರ್ಕೌಟ್ ಆಯ್ತಾ?
ಜನ ಮೆಚ್ಚಿದ ಕನ್ನಡತಿ ಧಾರಾವಾಹಿ ಮುಕ್ತಾಯದ ನಂತರ ರಂಜನಿ ರಾಘವನ್ ಒಂದು ಲಾಂಗ್ ಬ್ರೇಕ್ ತೆಗೆದುಕೊಂಡಿದ್ದರು. ಸಿನಿಮಾ ಸೇರಿದಂತೆ ಬೇರೆ ಬೇರೆ ಕೆಲಸದಲ್ಲಿ ಬ್ಯುಸಿಯಾಗಿದ್ದ ನಟಿ ರಂಜನಿ ರಾಘವನ್ ಅವರು ಇದೀಗ ಹೊಸ ಲುಕ್​ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಶಾಕ್​ ನೀಡಿದ್ದಾರೆ.
ಹೌದು, ನಟಿ ರಂಜನಿ ರಾಘವನ್ ವಧುವಿನ ಹಾಗೇ ಸಿಂಗಾರ ಮಾಡಿಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಆದರೆ ಇದೇ ಫೋಟೋಸ್ ನೋಡಿದ ಅಭಿಮಾನಿಗಳು ನಟಿ ರಂಜನಿ ಸದ್ದಿಲ್ಲದೆ ಮದುವೆ ಆದ್ರಾ ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ನಟಿ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಯಾವುದೇ ಪೋಸ್ಟ್​ ಹಾಕಿಕೊಂಡಿಲ್ಲ. ಬದಲಾಗಿ ನಟಿಯ ಹೆಸರಿನಲ್ಲಿರೋ ಫ್ಯಾನ್ಸ್ ಫೇಜ್​ನಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ:BBK11: ಈ ವಾರದ ಎಲಿಮಿನೇಷನ್‌ನಲ್ಲಿ ಬಿಗ್ ಟ್ವಿಸ್ಟ್.. ಸೇಫ್ ಆದ ಸ್ಪರ್ಧಿಗಳು ಯಾರು? ಆಚೆ ಹೋಗೋರು ಯಾರು?
ಸದ್ಯ ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಇತ್ತೀಚಿಗಷ್ಟೇ ನಟಿ ರಂಜನಿ ರಾಘವನ್ ತಮ್ಮ ಬಾಳ ಸಂಗಾತಿಯಾಗುವವರ ಬಗ್ಗೆ ಹೇಳುವ ಮೂಲಕ ಭಾರಿ ಸುದ್ದಿಯಾಗಿದ್ದರು. ಭಾವಿ ಪತಿಯಾಗುವ ಹುಡುಗ ಸಾಗರ್ ಭಾರದ್ವಾಜ್ ಜೊತೆಗಿನ ಫೋಟೊ ಶೇರ್ ಮಾಡಿ ನನ್ ಹುಡುಗ, ಲೈಫ್ ಪಾರ್ಟ್ನರ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಆದರೆ ಈಗ ರಂಜನಿ ಗೋಲ್ಡನ್ ಬಣ್ಣದ ಬ್ಲೌಸ್ ಹಾಗೂ ಬಾರ್ಡರ್ ಇರುವ ಕ್ರೀಂ ಬಣ್ಣದ ರೇಷ್ಮೆ ಸೀರೆ ಧರಿಸಿದ್ದಾರೆ. ಜೊತೆಗೆ ಮ್ಯಾಚಿಂಗ್ ಜ್ಯುವೆಲ್ಲರಿ, ಕೈ ತುಂಬಾ ಬಳೆ ಧರಿಸಿ, ಬನ್ ಹೇರ್ ಸ್ಟೈಲ್ ಮಾಡಿ, ಮುಡಿಗೆ ಮಲ್ಲಿಗೆ ಮುಡಿದುಕೊಂಡಿದ್ದಾರೆ. ಹೀಗೆ ವಧುವಿನ ಲುಕ್​ನಲ್ಲಿ ಕಾಣಿಸಿಕೊಂಡ ಎಲ್ಲರಿಗೂ ಶಾಕ್​ ಕೊಟ್ಟಿದ್ದಾರೆ.
ಬೆಸ್ಟ್ ಫ್ರೆಂಡ್ಸ್ – ಲೈಫ್ ಪಾರ್ಟ್ನರ್!
ರಂಜನಿ ರಾಘವನ್ ಅವರು ಬೆಸ್ಟ್ ಫ್ರೆಂಡ್ಸ್ ಅಂತ ಇರುವವರೇ ಲೈಫ್ ಪಾರ್ಟ್ನರ್ ಆದ್ರೆ ಚೆನ್ನಾಗಿರುತ್ತೆ. ಈಗ ಸಮಾಜದಲ್ಲಿ ಹಾಗೆ ಇರೋದು, ಮುಂಚೆ ಗಂಡನಿಗೆ ಸ್ವಲ್ಪ ಚೆಕ್ ಲಿಸ್ಟ್ ಕೊಟ್ಟಿದ್ರು ಇವತ್ತು ಅದೆಲ್ಲಾ ಬಿಟ್ಟು ನಮಗೆ ಯಾರಾದ್ರು ಬೆಸ್ಟ್ ಫ್ರೆಂಡ್ಸ್ ಇದ್ರೆ ನಮ್ಮ ಬಗ್ಗೆ ಎಲ್ಲಾ ತಿಳಿದುಕೊಂಡಿರ್ತಾರೆ ನಮಗೆ ಬೇಸಿಕ್ ಬೇಕಾಗಿರೋದು ಫ್ರೆಂಡ್ ಶಿಪ್ ಮತ್ತು ಒಡನಾಟ ಮಿಕ್ಕಿದೆಲ್ಲಾ ನಂತರ ಅಡ್ಜೆಸ್ಟ್ ಮಾಡಿಕೊಳ್ಳಬಹುದು ಆ ತರ ಇದ್ರೆ ಚೆನ್ನಾಗಿರುತ್ತೆ ಎಂದು ರಂಜನಿ ರಾಘವನ್ ಹೇಳಿದ್ದರು. ಅದರಂತೆ ತಮ್ಮ ಬೆಸ್ಟ್ ಫ್ರೆಂಡ್ ಸಾಗರ್ ಅವರನ್ನು ಲೈಫ್ ಪಾರ್ಟ್ನರ್ ಆಗಿ ಸ್ವೀಕರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ