ಹಸಿ ಬಿಸಿ ಲುಕ್​ನಲ್ಲಿ ಅಮೃತಧಾರೆ ಖ್ಯಾತಿಯ​ ನಟಿ ಸಾರಾ ಅಣ್ಣಯ್ಯ.. PHOTOS

author-image
Veena Gangani
Updated On
ಹಸಿ ಬಿಸಿ ಲುಕ್​ನಲ್ಲಿ ಅಮೃತಧಾರೆ ಖ್ಯಾತಿಯ​ ನಟಿ ಸಾರಾ ಅಣ್ಣಯ್ಯ.. PHOTOS  
Advertisment
  • ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ ನಟಿ ಸಾರಾ
  • ಸಾರಾ ಅಣ್ಣಯ್ಯ ಬೋಲ್ಡ್ ಫೋಟೋಸ್ ನೋಡಿ ಫ್ಯಾನ್ಸ್ ಶಾಕ್
  • ಸೈಕೋ ಪಾತ್ರದಿಂದಲೇ ಸಖತ್ ಫೇಮಸ್ ಆದ ನಟಿ ಇವರು

ಕನ್ನಡ ಕಿರುತೆರೆಯಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡ ಸೀರಿಯಲ್ ಎಂದರೆ ಅದು ಕನ್ನಡತಿ. ಸೀರಿಯಲ್ ಮುಕ್ತಾಯಗೊಂಡು ವರ್ಷ ಕಳೆದರೂ ವೀಕ್ಷಕರು ಈಗಲೂ ಕೂಡ ಅದರ ಬಗ್ಗೆ ಮಾತಾಡುತ್ತಲೇ ಇರುತ್ತಾರೆ. ಹಾಗಾಗಿಯೇ ಈ ಸೀರಿಯಲ್​ ಇನ್ನೂ ಟಾಪ್​ ಸ್ಥಾನದಲ್ಲಿ ಉಳಿದುಕೊಂಡಿದೆ.

ಇದನ್ನೂ ಓದಿ: ಬಿಂದಾಸ್​ ಬ್ಯೂಟಿ ದಾಂಪತ್ಯದಲ್ಲಿ ಬಿರುಕು.. ಪತಿಯಿಂದ ದೂರವಾಗಿ ಹನ್ಸಿಕಾ ಪ್ರತ್ಯೇಕ ವಾಸ!

publive-image

ಸೀರಿಯಲ್​ ಮುಗಿದರೂ ಕೂಡ ಆ ಪಾತ್ರಗಳನ್ನು ವೀಕ್ಷಕರು ಮರೆತಿಲ್ಲ. ಇಂದಿಗೂ ಸಹ ಕಲಾವಿದರ ಅದ್ಭುತ ನಟನೆಯ ಬಗ್ಗೆ ವೀಕ್ಷಕರು ಮಾತಾಡುತ್ತಾರೆ. ಅದರಲ್ಲೂ ಕನ್ನಡತಿ ಸೀರಿಯಲ್​ನಲ್ಲಿ ಕಾಣಿಸಿಕೊಂಡ ಸಾರಾ ಅಣ್ಣಯ್ಯ ಅವರು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ.

publive-image

ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಹೊಸ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತ ಅಭಿಮಾನಿಗಳ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿದ್ದಾರೆ. ಸದ್ಯ ಅಮೃತಧಾರೆ ಸೀರಿಯಲ್​ನಿಂದ ಆಚೆ ಬಂದ ನಟಿ ಸಾರಾ ಅಣ್ಣಯ್ಯ ದೇಶ ವಿದೇಶ ಸುತ್ತುವುದರಲ್ಲಿ ಬ್ಯುಸಿಯಾಗಿದ್ದಾರೆ.

ಇದೀಗ ನಟಿ ಸಾರಾ ಅಣ್ಣಯ್ಯ ಹಸಿ ಬಿಸಿ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಸ್​ ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಕೆಲವರು ನೀವು ಹೀಗೆ ಇದ್ದರೆ ನಮಗೆ ಇಷ್ಟ ಆಗೋದಿಲ್ಲ ಸಾರಾ, ಯಾವಾಗಲೂ ನಿಮ್ಮನ್ನು ಸೀರೆಯಲ್ಲಿ ನೋಡಲು ಇಷ್ಟ ಪಡುತ್ತೇವೆ ಅಂತ ಕಾಮೆಂಟ್ಸ್ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment