/newsfirstlive-kannada/media/post_attachments/wp-content/uploads/2025/03/kiran-raj5.jpg)
ಕಿರುತೆರೆಯ ಸೂಪರ್ ಸ್ಟಾರ್‌ಗಳು ಇರೋದು ಕೆಲವೇ ಕೆಲವರು. ಆ ಪಟ್ಟಿಯಲ್ಲಿ ಇರೋರು ಕಿರಣ್ ರಾಜ್. ಇದೇನೂ ಅತಿಶಯೋಕ್ತಿ ಏನಲ್ಲಾ. ಅವರ ಬೆಳವಣಿಗೆ ನೋಡುತ್ತಿದ್ದರೇ ಯಾರು ಬೇಕಾದ್ರೂ ಹೇಳಬಹುದು. ಕಿರುತೆರೆಯ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಅವರು ನಟನೆ ಮಾಡಿದ್ದರು.
ಇವತ್ತಿಗೂ ರಿಲೀಸ್‌ಗೆ ಒಂದೆರೆಡು ಸಿನಿಮಾ ರೆಡಿಯಿದೆ. ಜೊತೆಗೆ ಇನ್ನೊಂದಿಷ್ಟು ಸಿನಿಮಾಗಳು ಕ್ಯೂನಲ್ಲಿವೆ. ಸಿನಿಮಾ ಇಂಡಸ್ಟ್ರಿಯಲ್ಲಿ ಇಷ್ಟೆಲ್ಲಾ ಆಫರ್ಸ್ ಇದ್ರೂ, ಕಿರಣ್ ರಾಜ್ ಮತ್ತೆ ಕಿರುತೆರೆಗೆ ಬರ್ತಿದ್ದಾರೆ ಅಂದ್ರೆ ನೀವು ನಂಬಲೇಬೇಕು. ಅಷ್ಟಕ್ಕೂ ಕಿರಣ್ ರಾಜ್ ಮತ್ತೆ ಕಿರುತೆರೆಗೆ ಏಕೆ ಬರ್ತಿದ್ದಾರೆ ಅನ್ನೋ ಇಂಟರೆಸ್ಟಿಂಗ್ ಅಂಡ್ ಎಕ್ಸ್‌ಕ್ಲ್ಯೂಸಿವ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ನಾಳೆಯಿಂದ ಬೆಂಗಳೂರಲ್ಲಿ RCB ಕ್ಯಾಂಪ್ ಆರಂಭ.. ಕಿಂಗ್ ಕೊಹ್ಲಿ ಅಭಿಮಾನಿಗಳಿಗೆ ಬಿಗ್ ಅಪ್ಡೇಟ್!
View this post on Instagram
ಕಿರಣ್ ರಾಜ್ ಇವರ ಕ್ರೇಜ್ ಹೇಗಿತ್ತು? ಹೇಗಿದೆ? ಅನ್ನೋದು ನಿಮಗೆಲ್ಲಾ ಗೊತ್ತೇ ಇದೇ. ಕನ್ನಡತಿ ಮೂಲಕ ಕನ್ನಡಿಗರ ಮನೆ ಮಾತಾದ, ಸಹಜ ನಟನೆಯಿಂದ ಸೂಪರ್‌ಸ್ಟಾರ್‌ಗಳ ತಾಯಂದಿರ ಫೇವರೇಟ್ ಆದ, ಲುಕ್ಸ್ ಹಾಗೂ ಮಾಸ್ ಡೈಲಾಗ್ಸ್‌ನಿಂದ ಯೂತ್ಸ್‌ಗೆ ಸಿಕ್ಕಾಪಟ್ಟೆ ಇಷ್ಟವಾದ, ಆ್ಯಟಿಡ್ಯೂಟ್‌ನಿಂದ ಫೀಮೇಲ್ ಫ್ಯಾನ್ಸ್‌ಗಳಿಸಿದವರು. ಕೆ.ಆರ್. ಅಂದ್ರೆ ಕಿರಣ್ ರಾಜ್.
ಕನ್ನಡತಿ ಸೀರಿಯಲ್ ಮೂಲಕ ಸಾಕಷ್ಟು ಪ್ಯಾಪ್ಯುಲಾರಿಟಿ ಬಂತು ನಿಜ. ಆ, ಪಾಪ್ಯುಲಾರಿಟಿ ಬಹುತೇಕರಿಗೆ ಬರಬಹುದು. ಆದ್ರೆ, ಭವಿಷ್ಯಕ್ಕೆ ಬುನಾದಿ ಹಾಕಿಕೊಡೋದಿಲ್ಲ. ಆದ್ರೆ, ಕಿರಣ್ ರಾಜ್ ವಿಚಾರದಲ್ಲಿ ಹಾಗೇ ಆಗಲಿಲ್ಲ. ಯಾಕಂದ್ರೆ, ಕನ್ನಡತಿ ನಂತರ ಕಿರಣ್ ರಾಜ್‌ಗೆ ಬ್ಯಾಕ್ ಟು ಬ್ಯಾಕ್ ಕನ್ನಡ ಸಿನಿಮಾ ಆಫರ್ಸ್ ಬಂದ್ವು. ಹಲವು ಸಿನಿಮಾಗಳು ರಿಲೀಸ್ ಕೂಡ ಆದವು. ಇವತ್ತಿಗೂ ಇವರ ಸಿನಿಮಾ ಆಫರ್ಸ್‌ಗೆ ನಿಜಕ್ಕೂ ಕೊರತೆ ಇಲ್ಲ. ಪಾಪ್ಯುಲಾರಿಟಿ ಇವರಿಗೆ ಭದ್ರಬುನಾದಿಯನ್ನೂ ಹಾಕಿಕೊಟ್ಟಿದೆ. ಇದಕ್ಕೆಲ್ಲಾ ಮುಖ್ಯ ಕಾರಣ. ಕಿರಣ್ ರಾಜ್ ಅಭಿನಯ ಮತ್ತು ಅವರ ಪಾಸಿಟಿವ್ ಆ್ಯಟಿಟ್ಯೂಡ್.
ಕನ್ನಡತಿಯಲ್ಲಿ ಜನರಿಗೆ ಇಷ್ಟವಾಗಿದ್ದೇ ಕಿರಣ್ ರಾಜ್‌ರ ಸಹಜ ನಟನೆ. ಎಲ್ಲೂ ಓವರ್ ಅನಿಸದೇ ರೀತಿ, ಪಾತ್ರಕ್ಕೆ ತಕ್ಕಂತಹ ರೀತಿ ನಟಿಸಿ, ಸೈ ಎನಿಸಿಕೊಂಡಿದ್ದರು ಕಿರಣ್ ರಾಜ್. ಹರ್ಷ ಅನ್ನೋ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿ, ಆ ಪಾತ್ರವನ್ನ ಜನರ ಮನಸ್ಸಿನಲ್ಲಿ ಜೀವಂತವಾಗಿರಿಸಿದ್ದು ಕಿರಣ್ ರಾಜ್. ಒಂದು ಬಾರಿ ಕಿರುತೆರೆಯಲ್ಲಿ ಸಕ್ಸಸ್ ಆದ್ರೆ, ಜನರ ಪ್ರೀತಿ ಸಮುದ್ರದಷ್ಟು ಸಿಗುತ್ತೆ. ಮತ್ತೆ ಮತ್ತೆ ರಂಜಿಸಿ ಅನ್ನೋ ಬೇಡಿಕೆ ಬರ್ತಾ ಇರುತ್ತೆ. ಈಗ ಕಿರಣ್ ರಾಜ್ ಕೂಡ, ಮತ್ತೆ ಕಿರುತೆರೆಗೆ ಎಂಟ್ರಿ ಕೊಡ್ತಿದ್ದಾರೆ. ಹೌದು, ಕನ್ನಡತಿಯ ನಂತರ ಕಿರಣ್ ರಾಜ್ ಕಿರುತೆರೆಯ ಸೀರಿಯಲ್‌ವೊಂದರಲ್ಲಿ ನಾಯಕನಾಗಿ ಮತ್ತೆ, ನಿಮ್ಮುಂದೆ ಬರಲು ಸಜ್ಜಾಗಿದ್ದಾರೆ.
ಇದನ್ನೂ ಓದಿ:ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಮೊರೆ ಹೋದ ಬಾಲಿವುಡ್ ನಟಿ ಕತ್ರಿನಾ ಕೈಫ್; ಫೋಟೋ ಇಲ್ಲಿದೆ!
ಹೌದು, ಕಿರಣ್ ರಾಜ್ ಲೀಡ್‌ನಲ್ಲಿರೋ ಸೀರಿಯಲ್‌ವೊಂದು ಬರ್ತಿದ್ದಾರೆ. ಆ ಸೀರಿಯಲ್‌ನಲ್ಲಿ ಮೇಲ್ ಔರಿಯೆಂಟ್ ಕಂಟೆಂಟ್‌ಗೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತೆ. ವಿಶೇಷ ಅಂದ್ರೆ, ಕಲರ್ಸ್ ಕನ್ನಡದಲ್ಲಿ ಮಿಂಚಿದ್ದ ಕಿರಣ್ ರಾಜ್, ಹೊಸ ಸೀರಿಯಲ್ ಮೂಲಕ ಮತ್ತೆ ಜೀ ಕನ್ನಡಕ್ಕೆ ಕಾಲಿಡುತ್ತಿದ್ದಾರೆ. ಈ ಹಿಂದೆ, ಜೀ ಕನ್ನಡದ ಲೈಫ್ ಸೂಪರ್ ಗುರು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಕಿರಣ್ ರಾಜ್, ಈಗ ಮತ್ತೆ ಜೀ ಕುಟುಂಬ ಜಾಯಿನ್ ಆಗ್ತಿದ್ದಾರೆ. ಸಿನಿಮಾಗಳ ಆಫರ್ಸ್ ಇದ್ದರೂ ಕಿರಣ್ ರಾಜ್ ಈ ಸೀರಿಯಲ್‌ನ ಯಾಕೆ ಒಪ್ಪಿಕೊಂಡರು ಅನ್ನೋದು ಮುಖ್ಯವಾದ ಪ್ರಶ್ನೆ.
ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಯೊಬ್ಬರು ಕನ್ನಡತಿ ರೀತಿ ಸೀರಿಯಲ್ ಮಾಡಿ ಎಂದು ಕಮೆಂಟ್ ಮಾಡಿದ್ದರು. ಈ ಕಮೆಂಟ್‌ಗೆ ಉತ್ತರಿಸಿದ್ದ ನಟ ಕಿರಣ್ ರಾಜ್, ಯಾವುದಾದ್ರೂ ಚಾನಲ್ ನನಗೆ, ಟೈಟಲ್ ರೋಲ್ ಕೊಟ್ಟರೆ, ನಾನು ಅಭಿನಯಿಸೋಕೆ ರೆಡಿ ಅಂತಾ ರಿಪ್ಲೈ ಮಾಡಿದ್ದರು. ಇದಾಗಿ ಕೆಲವೇ ದಿನಗಳ ನಂತರ ಕಿರಣ್ ರಾಜ್‌ಗೆ, ಜೀ ಚಾನಲ್‌ನಿಂದ ಫೋನ್ ಬರುತ್ತೆ. ಡಾ.ಕರ್ಣ ಅನ್ನೋ ಸೀರಿಯಲ್ ಮಾಡ್ತಿದ್ದೀವಿ. ಇದು ಟೈಟಲ್ ರೋಲ್. ನೀವು ಮಾಡೋಕೆ ರೆಡಿನಾ ಅಂತಾ ಕೇಳ್ತಾರೆ. ಕಥೆ ಕೇಳಿ, ಇಷ್ಟಪಟ್ಟ ಕಿರಣ್ ರಾಜ್, ಮತ್ತೆ ಕಿರುತೆರೆಗೆ ಬರಲು ಓಕೆ ಎಂದರು.
ಇದೀಗ ಸೀರಿಯಲ್‌ನ ಪ್ರೊಮೋ ಶೂಟ್ ಮುಗಿದಿದ್ದು, ಪ್ರೊಮೋ ಕೂಡ ರಿಲೀಸ್ ಆಗಿದೆ. ಜೊತೆಗೆ ಸೀರಿಯಲ್‌ನ ಶೂಟಿಂಗ್ ಕೂಡ ಶುರುವಾಗಿದ್ದು, ಏಪ್ರಿಲ್ಗೆ ಲಾಂಚ್ ಆಗೋ ಸಾಧ್ಯತೆ ಇದೆ. ಇನ್ನೊಂದೆೆಡೆ, ಕಿರಣ್ ರಾಜ್ ಈ ಪ್ರಾಜೆಕ್ಟ್‌ಗೆ ಹೈಯೆಸ್ಟ್ ಪೇಮೆಂಟ್ ತೆಗೆದುಕೊಂಡಿದ್ದಾರೆ ಅನ್ನೋ ಮಾಹಿತಿ ಕೂಡ ಸಿಕ್ಕಿದೆ. ಇಲ್ಲಿಯವರೆಗೆ ಓರ್ವ ನಟನಿಗೆ ನೀಡಿರುವ ಹೈಯೆಸ್ಟ್ ಪೇಮೆಂಟ್ ಅನ್ನೋದು ಇಂಡಸ್ಟ್ರಿ ಮೂಲಗಳಿಂದ ನಮಗೆ ಸಿಕ್ಕಿರೋ ಮಾಹಿತಿ. ಒಟ್ಟಿನಲ್ಲಿ, ಡಾ.ಕರ್ಣ ಮೂಲಕ ಮತ್ತೆ ಧೂಳೆಬ್ಬಿಸಲು ಕಿರಣ್ ರಾಜ್ ಗ್ರ್ಯಾಂಡ್ ಎಂಟ್ರಿ ಕೊಡ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ