newsfirstkannada.com

‘ಟೊಮೆಟೊ’ ನಿರ್ಮಾಪಕನ ವಿರುದ್ಧ ಅತ್ಯಾಚಾರ ಆರೋಪ; ಚಾನ್ಸ್​ಗಾಗಿ ₹75 ಲಕ್ಷ ಕೊಟ್ಟು ಮೋಸ ಹೋದ್ಲಂತೆ ಮಹಿಳೆ..!

Share :

14-06-2023

    ನಿರ್ಮಾಪಕನ ವಿರುದ್ಧ ಅತ್ಯಾಚಾರ ಆರೋಪ

    ಸಿನಿಮಾದಲ್ಲಿ ಚಾನ್ಸ್​ ಕೊಡ್ತೀನಿ ಎಂದು 75 ಲಕ್ಷ ಪೀಕಿದ?

    ಟೊಮೆಟೊ ನಿರ್ಮಾಪಕನ ವಿರುದ್ಧ ಠಾಣೆ ಮೆಟ್ಟಿಲೆರಿದ ಮಹಿಳೆ

ಬೆಂಗಳೂರು: ನಿರ್ಮಾಪಕನೋರ್ವ ಸಿನಿಮಾದಲ್ಲಿ ಚಾನ್ಸ್​ ಕೊಡಿಸುತ್ತೇನೆ ಎಂದು ಬರೋಬ್ಬರಿ 75 ಲಕ್ಷ ಪೀಕಿಸಿ, ಅತ್ಯಾಚಾರವೆಸಗಿದ್ದಾನೆ ಎಂದು ಮಹಿಳೆಯೊಬ್ಬಳು ಆರೋಪಿಸಿದ್ದಾಳೆ. ಈ ಸಂಬಂಧ ಮಹಿಳೆ ಜ್ಞಾನಭಾರತಿ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದಾಳೆ.

‘ಸಿನಿಮಾದಲ್ಲಿ ಚಾನ್ಸ್ ಕೊಡ್ತೀನಿ’

ನಿರ್ಮಾಪಕ ಕುಮಾರ್ ಎಂಬಾತ ‘ಟೊಮೆಟೊ’ ಎಂಬ ಸಿನಿಮಾದಲ್ಲಿ ಚಾನ್ಸ್ ಕೊಡಿಸುತ್ತೀನಿ ಎಂದು ಅತ್ಯಾಚಾರವೆಸಗಿದ್ದಾನೆ. 75 ಲಕ್ಷ ತೆಗೆದುಕೊಂಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ. ಇದೇ ವಿಚಾರವಾಗಿ ಮಹಿಳೆ ನಿರ್ಮಾಪಕನ ವಿರುದ್ಧ ದೂರು ನೀಡಿದ್ದಾಳೆ.

‘1.5 ಕೋಟಿ ಕೊಡಿಸುತ್ತೀನಿ’

ನಿರ್ಮಾಪಕ ಕುಮಾರ್​ ಮಹಿಳೆಗೆ ನಟನೆ ಮಾಡಲು ಅವಕಾಶ ಕೊಡೋದಾಗಿ ಕೈಯಿಂದ 75 ಲಕ್ಷ ಹಣ ತೆಗೆದುಕೊಂಡಿದ್ದಾನೆ. ಸಿನಿಮಾ ರಿಲೀಜ್​ ಆದಮೇಲೆ ಬಿಗ್ ಹಿಟ್ ಆಗುತ್ತೆ 75 ಲಕ್ಷದ ಬದಲಾಗಿ 1.5 ಕೋಟಿ ಕೊಡುತ್ತೀನಿ ಎಂದು ನಂಬಿಸಿದ್ದಾನೆ. ದಿ ಕಲರ್ಸ್​ ಆಫ್​ ಟೊಮೆಟೊ ಹೆಸರಿನ ಚಿತ್ರ ನಿರ್ಮಾಪಕ ಈ ಕೃತ್ಯ ವೆಸಗಿದ್ದಾನೆ ಎಂದು ಮಹಿಳೆ ಆರೋಪಿದ್ದಾಳೆ.

‘ಬಾಳು ಕೊಡುತ್ತೇನೆ
50 ಹಾಗೂ ದಿ ಕಲರ್ಸ್ ಆಫ್ ಟೊಮೆಟೊ ಎಂಬ ಎರಡು ಚಿತ್ರ ಮಾಡುತ್ತೀನಿ ಹೀಗಾಗಿ 75 ಲಕ್ಷ ಬೇಕು ಎಂದು ತೆಗೆದುಕೊಂಡಿದ್ದಾನೆ. ಚಿತ್ರದಲ್ಲಿ ನಟಿಸಲು ಅವಕಾಶ ಸಿಗುತ್ತೆ ಹಾಗೂ ಕೊಟ್ಟ ಹಣ ಡಬಲ್ ಆಗಿ ರಿಟರ್ನ್ ಬರುತ್ತೆ ಎಂದು ಹಣ ಪಡೆದುಕೊಂಡಿದ್ದಾನೆ. ಬಳಿಕ ಬಾಳು ಕೊಡುತ್ತೇನೆ ಎಂದು ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾಳೆ.

‘ಚೆಕ್​ ಕೊಡ್ತೀನಿ ಬಾ’

ಇನ್ನು ಮಹಿಳೆ ಸ್ವಲ್ಪ ದಿನಗಳ ಬಳಿಕ ಕುಮಾರ್​ ಬಳಿ ಹಣ ವಾಪಾಸ್ ಕೇಳಿದ್ದಾಳೆ. ಆದರೆ ನಿರ್ಮಾಪಕ ಒಂದಷ್ಟು ದಿನ ಸಬೂಬು ಹೇಳಿಕೊಂಡೇ ತಿರುಗಾಡುತ್ತಿದ್ದ. ನಂತರ ಯಾವಾಗ ಹಣಕ್ಕಾಗಿ ಒತ್ತಡ ಹಾಕಲಾಯಿತು ಆ ಬಳಿಕ ತನ್ನ ಕಚೇರಿಗೆ ಕರೆಸಿಕೊಂಡಿದ್ದಾನೆ. ಕರೆಸಿಕೊಳ್ಳಲು ಚೆಕ್ ಕೊಡುತ್ತೀನಿ ಬಾ ಎಂದು ಕರೆಸಿಕೊಂಡಿದ್ದಾನೆ. ನಂತರ ಅತ್ಯಾಚಾರ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ. ನಿರ್ಮಾಪಕ ಕುಮಾರ್​ ವಿರುದ್ಧ ಮಹಿಳೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಟೊಮೆಟೊ’ ನಿರ್ಮಾಪಕನ ವಿರುದ್ಧ ಅತ್ಯಾಚಾರ ಆರೋಪ; ಚಾನ್ಸ್​ಗಾಗಿ ₹75 ಲಕ್ಷ ಕೊಟ್ಟು ಮೋಸ ಹೋದ್ಲಂತೆ ಮಹಿಳೆ..!

https://newsfirstlive.com/wp-content/uploads/2023/06/Tomatto.jpg

Load More