newsfirstkannada.com

27 ವರ್ಷದ ಬಳಿಕ ಹೈಕೋರ್ಟ್‌ಗೆ ಕನ್ನಡಿಗ ಮುಖ್ಯ ನ್ಯಾಯಮೂರ್ತಿ; ಏನಿದರ ವಿಶೇಷತೆ?

Share :

Published February 1, 2024 at 1:32pm

    27 ವರ್ಷದ ಬಳಿಕ ಕನ್ನಡಿಗ ರಾಜ್ಯದ ಮುಖ್ಯ ನ್ಯಾಯಮೂರ್ತಿ

    ಎಸ್.ಎ. ಹಕೀಮ್‌ರ ಬಳಿಕ 15 ಮಂದಿ ಸಿಜೆಗಳ ನೇಮಕವಾಗಿದೆ

    ನಿಕಟಪೂರ್ವ ಸಿಜೆ ಪಿ.ಬಿ ವರಾಳೆ ಸುಪ್ರಿಂಕೋರ್ಟ್‌ಗೆ ಪದೋನ್ನತಿ

ಬೆಂಗಳೂರು: 27 ವರ್ಷದ ಬಳಿಕ ಕನ್ನಡಿಗರೊಬ್ಬರು ರಾಜ್ಯದ ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ಅಲಂಕರಿಸಿದ್ದಾರೆ. ನ್ಯಾ. ಪಿ.ಎಸ್. ದಿನೇಶ್ ಕುಮಾರ್ ಅವರು ಕರ್ನಾಟಕ ಹೈಕೋರ್ಟ್‌ಗೆ ಸಿಜೆಯಾಗಿ ಪದೋನ್ನತಿ ಪಡೆದಿರುವುದು ಸದ್ಯ ದಾಖಲೆಯಾಗಿದೆ.

ಕರ್ನಾಟಕ ಹೈಕೋರ್ಟ್‌ಗೆ ಮೊದಲು ಕನ್ನಡಿಗ ಸಿಜೆ ಆಗಿ ನಿವೃತ್ತ ನ್ಯಾಯಮೂರ್ತಿ ಎಸ್.ಎ ಹಕೀಮ್ ಅವರು ನೇಮಕಗೊಂಡಿದ್ದರು. ಎಸ್.ಎ ಹಕೀಮ್ ಅವರು 6 ದಿನ ಸಿಜೆಯಾಗಿದ್ರು. ಆದಾದ ಬಳಿಕ ಹಂಗಾಮಿ ಸಿಜೆಗಳಾಗಿ ಅನೇಕರು ನಿವೃತ್ತಿಯಾಗಿದ್ರು.

ಎಸ್.ಎ. ಹಕೀಮ್ ರ ಬಳಿಕ 15 ಮಂದಿ ಸಿಜೆಗಳ ನೇಮಕವಾಗಿದೆ. ಆದರಲ್ಲಿ ಯಾರೋಬ್ಬರು ಸಹ ಕರ್ನಾಟಕದವರು ಆಗಿರಲಿಲ್ಲ. ಇದೀಗ 27 ವರ್ಷದ ಬಳಿಕ ಮತ್ತೆ ರಾಜ್ಯ ಹೈಕೋರ್ಟ್‌ಗೆ ಕನ್ನಡಿಗ ಸಿಜೆ ಆಗಮಿಸಿದ್ದಾರೆ.
ಹೈಕೋರ್ಟ್ ಸಿಜೆ ಪಿ.ಎಸ್‌. ದಿನೇಶ್ ಕುಮಾರ್ ಅವರು ನಮ್ಮ ರಾಜ್ಯದಲ್ಲಿಯೇ ಕಾನೂನು ಪದವಿ ಪಡೆದಿದ್ದರು. ಕೆಲ ವರ್ಷ ವಕೀಲರಾಗಿ ನಂತರ ಹೈಕೋರ್ಟ್ ನ್ಯಾಯಾಮೂರ್ತಿಯಾಗಿ ಪದೋನ್ನತಿ ಪಡೆದಿದ್ದಾರೆ. ನಿಕಟಪೂರ್ವ ಸಿಜೆ ಪಿ.ಬಿ ವರಾಳೆ ಅವರು ಸುಪ್ರಿಂಕೋರ್ಟ್‌ಗೆ ಪದೋನ್ನತಿ ಪಡೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಪಿ.ಎಸ್ ದಿನೇಶ್ ಕುಮಾರ್ ಅವರು ಸಿಜೆಯಾಗಿ ನೇಮಕಗೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

27 ವರ್ಷದ ಬಳಿಕ ಹೈಕೋರ್ಟ್‌ಗೆ ಕನ್ನಡಿಗ ಮುಖ್ಯ ನ್ಯಾಯಮೂರ್ತಿ; ಏನಿದರ ವಿಶೇಷತೆ?

https://newsfirstlive.com/wp-content/uploads/2024/02/Karnataka-High-Court.jpg

Load More