/newsfirstlive-kannada/media/post_attachments/wp-content/uploads/2025/04/Devdutt_Padikkal_1-1-1.jpg)
IPL ಸೀಸನ್​ 18ರಲ್ಲಿ ಆರ್​​ಸಿಬಿಯ ಅಬ್ಬರದ ಜೊತೆ ಜೊತೆಗೆ ಕನ್ನಡಿಗನ ಪರಾಕ್ರಮ ಜೋರಾಗಿದೆ. ಆನ್​ಫೀಲ್ಡ್​​ನಲ್ಲಿ ಘರ್ಜಿಸ್ತಿರೋ ಕನ್ನಡಿಗ ದೇವದತ್​ ಪಡಿಕ್ಕಲ್​ ಆಟಕ್ಕೆ ಎದುರಾಳಿಗಳು ಥಂಡಾ ಹೊಡೆದಿದ್ದಾರೆ. ಕ್ಲಾಸ್​ ಆಟಕ್ಕೂ ಸೈ.. ಮಾಸ್​ ಆಟಕ್ಕೂ ಜೈ ಎಂಬಂತಿದೆ ಕನ್ನಡಿಗನ ಆರ್ಭಟ.
ಸೀಸನ್​ 18ರ ಐಪಿಎಲ್​ನಲ್ಲಿ ಆರ್​​ಸಿಬಿಯ ಅಬ್ಬರ ನಡೀತಿದೆ. ಈ ಹಿಂದಿಗಿಂತ ಸಖತ್​ ಬ್ಯಾಲೆನ್ಸ್​ಡ್ ಆಗಿ ಕಾಣ್ತಿರೋ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಕಪ್​ ಗೆಲ್ಲೋ ಹಾಟ್​ ಫೇವರಿಟ್​​ ಅನಿಸಿದೆ. ಹೋಮ್​ಗ್ರೌಂಡ್​​ನ ಸತತ ಸೋಲಿಗೂ ಬ್ರೇಕ್​ ಹಾಕಿ ಪ್ಲೇ ಆಫ್​ನತ್ತ ಆರ್​​ಸಿಬಿ ದಿಟ್ಟ ಹೆಜ್ಜೆ ಇಟ್ಟಿದೆ. ಈ ಸಕ್ಸಸ್​ ಹಿಂದೆ ಕನ್ನಡಿಗನ ಕೊಡುಗೆಯನ್ನ ಮರೆಯೋಕಾಗುತ್ತಾ? ಹೋಮ್​ ಟೀಮ್​ಗೆ ಕಮ್​​ಬ್ಯಾಕ್​ ಮಾಡಿರೋ ನಮ್ಮ ಹೆಮ್ಮೆಯ ದೇವದತ್ತ್​​ ಪಡಿಕ್ಕಲ್​ ಪರಾಕ್ರಮ ಮರೆಯುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/04/PADIKKAL-1.jpg)
ಪಡಿಕ್ಕಲ್​​ ಪರಾಕ್ರಮ.. ಆರ್​​ಸಿಬಿಯ ಅಬ್ಬರ.!
ಈ ಸೀಸನ್​ನಲ್ಲಿ ಆರ್​​ಸಿಬಿ ಯಶಸ್ಸಿನ ಹಿಂದೆ ನಮ್ಮ ಹೆಮ್ಮಯ ಕನ್ನಡಿಗನ ಕೊಡುಗೆ ಅಪಾರ. ಈ ಸೀಸನ್​​ನಲ್ಲಿ ತವರಿನ ತಂಡಕ್ಕೆ ಕಮ್​ಬ್ಯಾಕ್​ ಮಾಡಿರೋ ದೇವದತ್ತ್​​ ಪಡಿಕ್ಕಲ್​​ ಪರಾಕ್ರಮ ಮರೆಯುತ್ತಿದ್ದಾರೆ. ಕನ್ಸಿಸ್ಟೆಂಟ್​ ಆಟವನ್ನಾಡ್ತಿರೋ ಪಡಿಕ್ಕಲ್​​ ಆರ್​​ಸಿಬಿಯ ಗೆಲುವಿನ ಬಲವಾಗಿದ್ದಾರೆ.
ಈ ಸೀಸನ್​ನಲ್ಲಿ ಇಂಪ್ಯಾಕ್ಟ್​ ಪ್ಲೇಯರ್​​ ರೋಲ್​ನ ಪರ್ಫೆಕ್ಟ್​ ಆಗಿ ನಿಭಾಯಿಸ್ತಿರೋ ಆಟಗಾರ ಅಂದ್ರೆ ಅದು ದೇವದತ್ತ್​ ಪಡಿಕ್ಕಲ್​. ಆರ್​​ಸಿಬಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​​ ಮಾಡ್ತಿರೋ ಇಂಪ್ಯಾಕ್ಟ್ಫುಲ್​ ಆಟವಾಡ್ತಿದ್ದಾರೆ. ಆಡಿದ 8 ಪಂದ್ಯಗಳಲ್ಲಿ 156.46ರ ಸ್ಟ್ರೈಕ್​ರೇಟ್​ನಲ್ಲಿ 230 ರನ್​ ಸಿಡಿಸಿದ್ದಾರೆ. 2 ಹಾಫ್​ ಸೆಂಚುರಿ ಸಿಡಿಸಿ ಮಿಂಚಿರೋ ಪಡಿಕ್ಕಲ್​​ ಆರ್​​ಸಿಬಿಯ ಬ್ಯಾಟಿಂಗ್​​ ಬೆನ್ನೆಲುಬು ಎನಿಸಿದ್ದಾರೆ.
/newsfirstlive-kannada/media/post_attachments/wp-content/uploads/2025/04/Devdutt_Padikkal.jpg)
ಕಿಂಗ್​ ಕೊಹ್ಲಿ ಜೊತೆಗೆ ಕನ್ನಡಿಗನ ಕಮಾಲ್​.!
ವಿರಾಟ್​ ಕೊಹ್ಲಿ - ದೇವದತ್​​ ಪಡಿಕ್ಕಲ್.. ಈ ಸೀಸನ್​ನಲ್ಲಿ ಜೋಡಿ ಬೊಂಬಾಟ್​ ಆಟವಾಡ್ತಿದೆ. ರನ್​ಭೂಮಿಯಲ್ಲಿ ಇಬ್ಬರು ಒಂದಾದ್ರೆ ಎದುರಾಳಿ ಕಥೆ ಮುಗಿತು ಅಂತಲೇ ಆಗಿದೆ. ಕೊಹ್ಲಿ ಕ್ಲಾಸ್​ ಆಟವಾಡಿ ಎದುರಾಳಿಗಳನ್ನ ಕಾಡಿದ್ರೆ, ಪಡಿಕ್ಕಲ್​ ಅಬ್ಬರದ ಆಟವನ್ನಾಡ್ತಿದ್ದಾರೆ. ರಾಜಸ್ಥಾನ್​ ರಾಯಲ್ಸ್​ ಎದುರು ಶತಕದ ಜೊತೆಯಾಟವಾಡಿ ಮಿಂಚಿದ ಈ ಜೋಡಿ ಈ ಸೀಸನ್​​ನಲ್ಲಿ ಒಟ್ಟಾರೆ 429 ರನ್​ಗಳ ಕಾಣಿಕೆ. ಆರ್​​ಸಿಬಿ ಸಕ್ಸಸ್​​ನಲ್ಲಿ ಈ ಸ್ಕೋರ್​ ಮೇಜರ್​ ರೋಲ್​​ ಪ್ಲೇ ಮಾಡಿರೋದು ಸುಳ್ಳಲ್ಲ.
/newsfirstlive-kannada/media/post_attachments/wp-content/uploads/2025/04/Devdutt_Padikkal_1-1.jpg)
RCBಗೆ ಕಮ್​​ಬ್ಯಾಕ್​.. ಪಡಿಕ್ಕಲ್​ ಫುಲ್​ ಚೇಂಜ್​!
ಈ ಸೀಸನ್​​ನಲ್ಲಿ ಅಬ್ಬರದ ಆಟದಿಂದ ಗಮನ ಸೆಳೆದಿರೋ ದೇವದತ್​​ ಪಡಿಕ್ಕಲ್​ ಕಳೆದ ಸೀಸನ್​ನಲ್ಲಿ ಲಕ್ನೋ ಪರ ಆಡಿದ್ರು. ಆದ್ರೆ ಅದೇನಾಗಿತ್ತೊ ಗೊತ್ತಿಲ್ಲ. ಕನ್ನಡಿಗನ ಖದರ್ ಲಾಸ್ಟ್​ ಸೀಸನ್​ನಲ್ಲಿ​ ಫುಲ್​​ ಮಾಯವಾಗಿತ್ತು. ಅಟ್ಟರ್​ ಫ್ಲಾಪ್​ ಪ್ರದರ್ಶನ ನೀಡಿದ್ದ ಪಡಿಕ್ಕಲ್​ 7 ಪಂದ್ಯಗಳಲ್ಲಿ ಜಸ್ಟ್​ 38 ರನ್​ಗಳಿಸಿದ್ರು. ಹೀಗಾಗಿ ಕೇವಲ 5.42ರ ಸರಾಸರಿಯಲ್ಲಿ ರನ್​ಗಳಿಸಿದ್ದ ಪಡಿಕ್ಕಲ್​​ನ ಈ ಹರಾಜಿಗೂ ಮುನ್ನ ಲಕ್ನೋ ರಿಲೀಸ್​ ಮಾಡಿತ್ತು.
/newsfirstlive-kannada/media/post_attachments/wp-content/uploads/2025/04/RCB_PADIKKAL.jpg)
ಕಳಪೆಯಾಟ, ಅನ್​​ಸೋಲ್ಡ್​ ಭೀತಿ, ಕೈ ಹಿಡಿದ RCB
ಲಾಸ್ಟ್​ ಸೀಸನ್​​ನಲ್ಲಿ ಕಳಪೆಯಾಟವಾಡಿದ್ದ ಪಡಿಕ್ಕಲ್​ ಈ ಸೀಸನ್​ಗೂ ಮುನ್ನ ಅನ್​​ಸೋಲ್ಡ್​ ಭೀತಿ ಎದುರಾಗಿತ್ತು. ಇನ್​​​ಫ್ಯಾಕ್ಟ್​​ ಮೆಗಾ ಆಕ್ಷನ್​ನಲ್ಲಿ ಫಸ್ಟ್​ ರೌಂಡ್​​ನಲ್ಲಿ ಯಾವ ಫ್ರಾಂಚೈಸಿ ಕೂಡ ಪಡಿಕ್ಕಲ್​ನ ಪಿಕ್​ ಮಾಡಿರಲಿಲ್ಲ. ಅಂತಿಮ ಹಂತದಲ್ಲಿ ಆರ್​​ಸಿಬಿ ಬೇಸ್​​ಪ್ರೈಸ್​ ನೀಡಿ ಪಡಿಕ್ಕಲ್​​ನ ಖರೀದಿಸಿತು. 2 ಕೋಟಿ ನೀಡಿ ಖರೀದಿಸಿದ ಆರ್​​ಸಿಬಿ​ ಫ್ರಾಂಚೈಸಿ ನಂಬಿಕೆಯನ್ನ ಪಡಿಕ್ಕಲ್ ಉಳಿಸಿಕೊಂಡಿದ್ದಾರೆ.
ಇದನ್ನೂ ಓದಿ: KL ರಾಹುಲ್ ‘ಕಾಂತಾರ’ ಸೆಲೆಬ್ರೇಷನ್​ಗೆ ಕೊಹ್ಲಿ ರಿಯಾಕ್ಷನ್ ಏನು? ವಿರಾಟ್ ರಿವೇಂಜ್ ಪ್ಲಾನ್ ಏನು?
ಆರ್​​ಸಿಬಿಯಿಂದಲೇ ಐಪಿಎಲ್​ ಜರ್ನಿ ಆರಂಭಿಸಿದ ಕನ್ನಡಿಗ ಪಡಿಕ್ಕಲ್​ 2022ರಲ್ಲಿ ರಾಜಸ್ಥಾನ್​​ ಸೇರಿದ್ರು. 2 ಸೀಸನ್​ ರಾಜಸ್ಥಾನ್​ ಪರ ಆಡಿ 2024ರಲ್ಲಿ ಲಕ್ನೋ ಸೇರಿದ್ರು. ಆದ್ರೆ, ಆರ್​​ಸಿಬಿಯಲ್ಲಿ ಸಿಕ್ಕ ಸಕ್ಸಸ್​ ಆ ಎರಡೂ ಫ್ರಾಂಚೈಸಿಯಲ್ಲಿ ಸಿಗಲಿಲ್ಲ. ಇದೀಗ ಆರ್​​ಸಿಬಿ ಮತ್ತೆ ಕಮ್​​ಬ್ಯಾಕ್​ ಮಾಡಿದ್ದಾರೆ. ಮತ್ತೆ ಅದೇ ಹಳೆ ಖದರ್​​ನಲ್ಲಿ ಖರ್ಜಿಸ್ತಿದ್ದಾರೆ. ಕನ್ನಡಿಗ ಪಡಿಕ್ಕಲ್​ ಪರಾಕ್ರಮ ಹೀಗೆ ಮುಂದುವರೆಯಲಿ ಅನ್ನೋದು ಕನ್ನಡಿಗರ ಆಶಯ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us