newsfirstkannada.com

Video: ರಾಯಚೂರಿನಿಂದ ರಾಮನೂರಿನ ಕಡೆಗೆ.. 1500 ಕಿಲೋ ಮೀಟರ್​ ಸೈಕಲ್​ ಸವಾರಿ ಹೊರಟ ಕನ್ನಡಿಗ

Share :

Published January 18, 2024 at 8:05am

Update January 18, 2024 at 8:48am

    ಈ ರಾಮಭಕ್ತನಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ

    ಜನವರಿ 24ರಂದು ಶ್ರೀರಾಮನ ದರ್ಶನ ಮಾಡಲಿರುವ ಕನ್ನಡಿಗ

    ಸೈಕಲ್​ ಪಂಕ್ಚರ್ ಆದರೂ ಸರಿಪಡಿಸಿಕೊಂಡು ಮುನ್ನಡೆದ ರಾಮಭಕ್ತ

ರಾಯಚೂರು: ಯುವಕನೋರ್ವ ಶ್ರೀರಾಮನ ದರ್ಶನಕ್ಕೆ ಸೈಕಲ್ ನಲ್ಲಿ ಸವಾರಿ ಕೈಗೊಂಡ ಘಟನೆ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಉಳಿಮಹೇಶ್ವರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮಲ್ಲಿಕಾರ್ಜುನ ಎಂಬ ಯುವಕ ಸೈಕಲ್ ಯಾತ್ರೆ ಆರಂಭಿಸಿದ್ದಾನೆ.

ರಾಯಚೂರು ಜಿಲ್ಲೆಯಿಂದ ಸೈಕಲ್ ನಲ್ಲಿ ಅಯೋಧ್ಯೆಗೆ ಹೊರಟಿದ್ದಾನೆ. ಇದೇ 16 ರಿಂದ ಪ್ರಯಾಣ ಕೈಗೊಂಡಿದ್ದು 24 ನೇ ತಾರೀಖು ಗುರಿ ತಲುಪಲು ಮುಂದಾಗಿದ್ದಾನೆ.

ಮಲ್ಲಿಕಾರ್ಜುನ ಈಗ ಕಲಬುರಗಿ ಜಿಲ್ಲೆ ದಾಟಿದ್ದಾನೆ. ಕನ್ನಡ ಬಿಟ್ಟು ಬೇರೆ ಯಾವ ಭಾಷೆಯೂ ಬಾರದ ಮಲ್ಲಿಕಾರ್ಜುನ ಅಯೋಧ್ಯೆ ಶ್ರೀರಾಮನ ದರ್ಶನ ಮಾಡಲಿದ್ದಾನೆ.

ನ್ಯೂಸ್​ಫಸ್ಟ್​ಗೆ ಪ್ರತಿಕ್ರಿಯೆ ನೀಡಿದ ಮಲ್ಲಿಕಾರ್ಜುನ ಸೈಕಲ್ ಸವಾರಿ ಮಾಡಿ ಶ್ರೀರಾಮನ ದರ್ಶನ ಪಡೆಯುತ್ತೇನೆ ಎಂದು ಹೇಳಿದ್ದಾನೆ. ಆದರೆ ದಾರಿ ಮಧ್ಯೆ ಆತನ ಪಂಕ್ಚರ್ ಆಗಿ ಬಳಿಕ ಮತ್ತೆ ಪಂಕ್ಚರ್ ಮಾಡಿಕೊಂಡು ರಾಮನ ಮಂದಿನ ಕಡೆ ಮಲ್ಲಿಕಾರ್ಜುನ ಪ್ರಯಾಣ ಬೆಳೆಸಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ರಾಯಚೂರಿನಿಂದ ರಾಮನೂರಿನ ಕಡೆಗೆ.. 1500 ಕಿಲೋ ಮೀಟರ್​ ಸೈಕಲ್​ ಸವಾರಿ ಹೊರಟ ಕನ್ನಡಿಗ

https://newsfirstlive.com/wp-content/uploads/2024/01/Mallikarjun-1.jpg

Load More