/newsfirstlive-kannada/media/post_attachments/wp-content/uploads/2025/05/koramangala.jpg)
ಬೆಂಗಳೂರು: ಹೊಟೇಲ್‌ನ ಡಿಸ್ಪ್ಲೇ ಬೋರ್ಡ್ವೊಂದರಲ್ಲಿ ಕನ್ನಡಿಗರಿಗೆ ಅಪಮಾನ ಮಾಡಲಾಗಿದೆ. ಕೋರಮಂಗಲದ ಹೊಟೇಲ್‌ನ ಡಿಸ್ಪ್ಲೇ ಬೋರ್ಡ್ನಲ್ಲಿ ಅವಹೇಳನಕಾರಿಯಾಗಿ ಬರೆದು ಅತಿರೇಕದ ಉದ್ಧಟತನ ಮೆರೆದಿದ್ದಾರೆ.
ಇದನ್ನೂ ಓದಿ: ಪುಟ್ಟಕ್ಕನ ಮಕ್ಕಳು ವೀಕ್ಷಕರಿಗೆ ಶಾಕಿಂಗ್ ಸುದ್ದಿ; ಮುಕ್ತಾಯದ ಹಂತದಲ್ಲಿದೆ ಟಾಪ್ ಸೀರಿಯಲ್
ಹೌದು, ಕೋರಮಂಗಲದ ನೆಕ್ಸಸ್ ಮಾಲ್ ಸಮೀಪದ HOTEL GS SUITEನ ಡಿಸ್ಪ್ಲೇ ಬೋರ್ಡ್ ನಲ್ಲಿ ಕನ್ನಡಿಗರಿಗೆ ಅಪಮಾನ ಆಗುವಂತಹ ಬರಹ ಹಾಕಲಾಗಿದೆ. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಹೋಟೆಲ್ಗೆ ತೆರಳಿ ಪೊಲೀಸರು ಪರಿಶೀಲನೆ ಮಾಡಿದ್ದಾರೆ.
ಪೊಲೀಸರು ಹೊಟೇಲ್‌ನ ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದಾರೆ. ಮತ್ತು ಬೋರ್ಡನ್ನು ಕಿತ್ತು ಹಾಕಿದ್ದಾರೆ. ಇನ್ನೂ, ಈ ಘಟನೆ ಬಗ್ಗೆ ಆಗ್ನೇಯ ವಿಭಾಗ ಡಿಸಿಪಿ ಸಾರಾಫಾತೀಮಾ, ಮಡಿವಾಳ ಠಾಣೆಯಲ್ಲಿ ಸುಮೋಟೊ ಕೇಸ್ ದಾಖಲಿಸಿದ್ದೇವೆ. ಕೆಲಸ ಮಾಡ್ತಿದ್ದ ಮ್ಯಾನೇಜರ್ ಸೇರಿ ಐವರನ್ನ ವಶಕ್ಕೆ ಪಡೆದಿದ್ದೇವೆ. ಹೋಟೆಲ್ ಮಾಲೀಕ ವಿದೇಶದಲ್ಲಿ ಇದ್ದಾನೆ. ಆತನಿಗೂ ನೋಟಿಸ್ ಕೊಟ್ಟಿದ್ದೀವಿ. ಕಳೆದ ಎಂಟನೇ ತಾರೀಖಿನಂದು ಬೋರ್ಡ್ ಅಳವಡಿಸಿದ್ದಾರೆ. ಈ ರೀತಿ ಪದ ಯಾವಾಗಿಂದ ಡಿಸ್ಪ್ಲೆ ಮಾಡಿದ್ದಾರೆ ಅನ್ನೋದು ತನಿಖೆ ಮಾಡ್ತಿದ್ದೀವಿ. ಯಾವಾಗ ಘಟನೆ ಆಗಿದೆ ಅನ್ನೋದು ತನಿಖೆ ಮಾಡ್ತಿದ್ದೇವೆ ಎಂದು ಹೇಳಿದ್ದಾರೆ.
ವಿಶಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ