/newsfirstlive-kannada/media/post_attachments/wp-content/uploads/2024/11/RCB_TEAM-2.jpg)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಹಿಂದಿ ಭಾಷೆಯಲ್ಲಿ ಎಕ್ಸ್ ಖಾತೆ ತೆರೆದ ಹಿನ್ನೆಲೆಯಲ್ಲಿ ಅಭಿಮಾನಿಗಳು, ಕೆಲ ಕನ್ನಡ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2025ರ ಮೆಗಾ ಆಕ್ಷನ್ನಲ್ಲಿ ಆರ್ಸಿಬಿ ಫ್ರಾಂಚೈಸಿಯು ಆಟಗಾರರನ್ನು ಖರೀದಿ ಮಾಡಿತ್ತು. ಈ ಸಂಬಂಧ ಹೊಸ ಆಟಗಾರರು ಇರುವ ಫೋಟೋವನ್ನು ಹಿಂದಿಯಲ್ಲಿರುವ ಹೊಸ ಎಕ್ಸ್ ಖಾತೆಯಲ್ಲಿ ಪೋಸ್ಟ್ ಅನ್ನು ಶೇರ್ ಮಾಡಿತ್ತು. ಇದಕ್ಕೆ ಅಭಿಮಾನಿಗಳು, ಕೆಲ ಕನ್ನಡ ಪರ ಹೋರಾಟಗಾರರು ವಿರೋಧ ವ್ಯಕ್ತ ಪಡಿಸಿದ್ದಾರೆ. ನಮ್ಮ ಬೆಂಬಲ ಕೊಡುತ್ತಿರುವುದು ಬೆಂಗಳೂರು ಹೆಸರಿಗೆ ಮಾತ್ರ. ಹಿಂದಿ ಪೇಜ್ ಅನ್ನು ಫ್ರಾಂಚೈಸಿ ಡಿಲೀಟ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಆರ್ಸಿಬಿ ಹಿಂದಿಯಲ್ಲಿ ಎಕ್ಸ್ ಪೇಜ್ ಓಪನ್ ಮಾಡಿ ಒಂದೆರಡು ಪೋಸ್ಟ್ ಶೇರ್ ಮಾಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಈ ಸಂಬಂಧ ಟ್ವೀಟ್ ಮಾಡಿದ್ದು, ನಿಮಗೆ ಬೆಂಬಲ ಕೊಡುತ್ತಿರುವುದು ಬೆಂಗಳೂರು ಎನ್ನುವ ಹೆಸರಿಗೆ. ನಮ್ಮ ತಂಡ ಎಂದು ಪ್ರಾಣ ಕೊಟ್ಟು ಪ್ರೀತಿಸೋ ಕನ್ನಡಿಗರ ಪ್ರೀತಿಯನ್ನು ದುರುಪಯೋಗ ಪಡಿಸಿಕೊಳ್ಳಬೇಡಿ. ನಿಮ್ಮ ಐಪಿಎಲ್ ಕಪ್ ಹಾಗೂ ಆರ್ಸಿಬಿಗಿಂತಲೂ ನಮಗೆ, ನಮ್ಮ ಕನ್ನಡ, ಕನ್ನಡ ನೆಲದ ಸ್ವಾಭಿಮಾನವೇ ಹೆಚ್ಚು. ತಕ್ಷಣ ಅದನ್ನು ತೆಗೆದು ಹಾಕಿ ಎಂದು ಬರೆದುಕೊಂಡಿದ್ದಾರೆ.
ಇನ್ನೊಬ್ಬರು ಈ ಸಂಬಂಧ ಟ್ವೀಟ್ ಮಾಡಿದ್ದು, ಇವರದ್ದು ಆಡಿದ್ದೇ ಆಟ ಆಗೋಯಿತು. ಕನ್ನಡಿಗರೂ ಎಚ್ಚೆತ್ತುಕೊಂಡಿಲ್ಲ ಎಂದರೆ ಏನು ಬೇಕಾದರೂ ಮಾಡುತ್ತಾರೆ. ಒಂದು ಕಡೆ ಅಭಿಮಾನಿಗಳ ಭಾವನೆಗೆ ಬೆಲೆ ಇಲ್ಲ. ಇನ್ನೊಂದು ಕಡೆ ಹಿಂದಿ ಹೇರಿಕೆ. ಪ್ರತಿಯೊಬ್ಬ ಕನ್ನಡಿಗನೂ ಧ್ವನಿಯಾಗಿ. ಆರ್ಸಿಬಿ ತಂಡಕ್ಕೆ ತಲುಪುವಂತೆ ಮಾಡಿ ಎಂದು ಬರೆದುಕೊಂಡಿದ್ದಾರೆ.
पेश है धुरंधरों से सजी आईपीएल 2️⃣0️⃣2️⃣5️⃣ की हमारी दमदार टीम! ❤️🔥#PlayBold#IPL2025#IPLAuction#BidForBold#RCB#Hindi#Explorepic.twitter.com/R3ZbmmDRAZ
— Royal Challengers Bengaluru Hindi (@RCBinHindi)
पेश है धुरंधरों से सजी आईपीएल 2️⃣0️⃣2️⃣5️⃣ की हमारी दमदार टीम! ❤️🔥#PlayBold#IPL2025#IPLAuction#BidForBold#RCB#Hindi#Explorepic.twitter.com/R3ZbmmDRAZ
— Royal Challengers Bengaluru Hindi (@RCBinHindi) November 25, 2024
">November 25, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ