ಪಹಲ್ಗಾಮ್‌ನಲ್ಲಿ ಜೀವ ಉಳಿದಿದ್ದೇ ಪವಾಡ.. ಉಗ್ರರ ದಾಳಿಯ ಭಯಾನಕ ಮಾಹಿತಿ ಬಿಚ್ಚಿಟ್ಟ ಕನ್ನಡಿಗರು

author-image
admin
Updated On
ಪಹಲ್ಗಾಮ್‌ನಲ್ಲಿ ಜೀವ ಉಳಿದಿದ್ದೇ ಪವಾಡ.. ಉಗ್ರರ ದಾಳಿಯ ಭಯಾನಕ ಮಾಹಿತಿ ಬಿಚ್ಚಿಟ್ಟ ಕನ್ನಡಿಗರು
Advertisment
  • ನಾವು ಅಂಗಡಿಯಲ್ಲಿದ್ದಾಗ ಉಗ್ರರು ಗುಂಡಿನ ಸುರಿಮಳೆಗೈದರು
  • ಉಗ್ರರಿದ್ದ ಜಾಗದಿಂದ ಓಡಿ ಬಂದು ಜೀವ ಉಳಿಸಿಕೊಂಡಿದ್ದೇವೆ
  • ಪಹಲ್ಗಾಮ್​ ದಾಳಿಯಲ್ಲಿ ಪಾರಾದ ಶಿರಸಿ ಮೂಲದ ಕುಟುಂಬ

ಪಹಲ್ಗಾಮ್‌ ಪ್ರವಾಸಕ್ಕೆ ಹೋಗಿದ್ದ ಶಿರಸಿ ಮೂಲದ ಕುಟುಂಬ ಅಲ್ಲಿಂದ ಬದುಕಿ ಬಂದಿರೋದೇ ಒಂದು ಪವಾಡ. ನಾವು ಅಂಗಡಿಯಲ್ಲಿದ್ದಾಗ ಉಗ್ರರು ಗುಂಡಿನ ಸುರಿಮಳೆಗೈದರು. ಓಡಿ ಬಂದು ಜೀವ ಉಳಿಸಿಕೊಂಡಿದ್ದೇವೆ ಎಂದು ಕಾಶ್ಮೀರದ ಕರಾಳ ಅನುಭವವನ್ನು ನ್ಯೂಸ್ ಫಸ್ಟ್ ಜೊತೆ ಶಿರಸಿಯ ಕುಟುಂಬ ಹಂಚಿಕೊಂಡಿದೆ.

ಕಳೆದ ಏಪ್ರಿಲ್ 22 ರಂದು ಉಗ್ರರು ದಾಳಿ ನಡೆಸಿದಾಗ ಶಿರಸಿಯ ಪ್ರದೀಪ ಹೆಗಡೆ, ಪತ್ನಿ ಶುಭಾ ಹೆಗಡೆ, ಮಗ ಸಿದ್ದಾಂತ ಹೆಗಡೆ ಸಹ ಪಹಲ್ಗಾಮ್‌ಗೆ ಹೋಗಿದ್ದರು. ಈ ಮೂವರು ಕಾಶ್ಮೀರಕ್ಕೆ ತೆರಳಿದ್ದು ಕೂದಲೆಳೆಯ ಅಂತರದಿಂದ ಪಾರಾಗಿ ಬಂದಿದ್ದಾರೆ.

publive-image

ಕಿವಿ ಪಕ್ಕದಲ್ಲಿ ಹಾದು ಹೋದ ಬುಲೆಟ್​​!
ಪಹಲ್ಗಾಮ್‌ನಲ್ಲಿ ಉಗ್ರರು ಹೊಡೆದ ಗುಂಡು ಶುಭಾ ಹೆಗಡೆ ಅವರ ಕಿವಿ ಪಕ್ಕದಲ್ಲಿ ಹಾದು ಹೋಗಿದೆ. ಪ್ರದೀಪ ಹೆಗಡೆ, ಶುಭಾ ಹೆಗಡೆ ಹಾಗೂ ಪುತ್ರ ಸಿದ್ದಾಂತ ಹೆಗಡೆ ಸಹ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡು ಮರುಜನ್ಮ ಪಡೆದಿದ್ದಾರೆ.

publive-image

ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಪ್ರದೀಪ ಹೆಗಡೆ ಅವರು ಕುಟುಂಬ ಸಮೇತ ಏಪ್ರಿಲ್ 21 ರಂದು ಶ್ರೀನಗರಕ್ಕೆ ಪ್ರವಾಸ ಹೋಗಿದ್ದರು. ಅಲ್ಲಿ ನಡೆದ ಘಟನೆ ಈ ಕುಟುಂಬದ ಜೀವನದಲ್ಲಿ ಮರೆಯಲಾಗದ ಘಟನೆಯಾಗಿ ಉಳಿದಿದೆ.

publive-image

ಏಪ್ರಿಲ್ 21ರಂದು ಶಿರಸಿಯ ಖಾಸಗಿ ಸಂಸ್ಥೆಯ ಮೂಲಕ ಪ್ರದೀಪ್ ಅವರ ಕುಟುಂಬ ಕಾಶ್ಮೀರ ಟ್ರಿಪ್‌ಗೆ ಹೋಗಿದೆ. ಮೊದಲ ದಿನ ಕೆಲವು ಪ್ರದೇಶಗಳಿಗೆ ತೆರಳಿ 2ನೇ ದಿನ ಪಹಲ್ಗಾಮ್‌ಗೆ ಹೋಗಿದ್ದಾರೆ.
ಭಾರತದ ಸ್ವಿಟ್ಜರ್ಲೆಂಡ್ ಅಂತಾನೇ ಕರೆಯೋ ಈ ಪ್ರದೇಶವನ್ನ ನೋಡೋಕೆ ಜನರ ದಂಡು ಅಲ್ಲಗೆ ಬಂದಿತ್ತು. ಅಂದು ಸಹಜವಾಗಿಯೇ ಅಲ್ಲಿನ ಜನ ಫೋಟೋ ಶೂಟಿಂಗ್ ಮಾಡಿಕೊಂಡು ಎಂಜಾಯ್‌ ಮಾಡುತ್ತಿದ್ದರು.

ಇದನ್ನೂ ಓದಿ: ‘ಅಪ್ಪ ನನಗಾಗಿ ಕೆಲಸ ಬಿಟ್ಟರು, ಅಮ್ಮ ಬರೀ 3 ತಾಸು ನಿದ್ರೆ ಮಾಡ್ತಿದ್ದಳು..’ ವೈಭವ್ ಕಷ್ಟದ ಬದುಕು ಹೇಗಿತ್ತು..? 

ಅಂದು ನಡೆದಿದ್ದೇನು? 
ಪ್ರದೀಪ್ ಕುಟುಂಬ ಪಹಲ್ಗಾಮ್‌ನ ಎಂಟ್ರಿಯಲ್ಲಿರುವ ಹೋಟೆಲ್‌ನಲ್ಲಿ ಚಹಾ ಸವಿಯುತ್ತಿದ್ರು. ಆಗಲೇ ಇವರಿಗೆ ಶಬ್ದ ಕೇಳಿದೆ. ಆಗ ಇವರಿಗೆ ಅಂಗಡಿಯವನು, ಪಟಾಕಿಯ ಶಬ್ದ ಇರಬೇಕು. ಇದು ಇಲ್ಲಿ ಸಹಜ ಅನ್ನೋ ಉತ್ತರ ನೀಡಿದ್ದ.

publive-image

ನಂತರ ಗುಂಡಿನ ಸದ್ದು ಮೊಳಗತೊಡಗಿದಾಗ ಭಯದಿಂದ ಎಲ್ಲರೂ ಕೂಡ ಅಲ್ಲಿಯೇ ಒಬ್ಬರ ಮೇಲೊಬ್ಬರಂತೆ ಮಲಗಿ ಅವಿತುಕೊಂಡಿದ್ದಾರೆ. ಆಗ ಚೇರ್ ಮೇಲಿದ್ದ ಬ್ಯಾಗ್ ತೆಗೆಯೋಕೆ ಹೋದಾಗ ಶುಭಾ ಅವರು ಇಬ್ಬರು ಉಗ್ರರು ಬರೋದನ್ನ ನೋಡಿದ್ರು. ಅದಾಗಲೇ ಉಗ್ರನ ಗನ್‌ನಿಂದ ಹೊರಟ ಬುಲೆಟ್ ಒಂದು ಶುಭಾ ಅವರ ಕಿವಿ ಪಕ್ಕದಲ್ಲೇ ಹಾದು ಹೋಗಿತ್ತು. ಸ್ವಲ್ಪ ಗುಂಡಿನ ಶಬ್ದ ಕಡಿಮೆಯಾಗುತ್ತಲೇ ಪ್ರದೀಪ್ ಕುಟುಂಬ ಅಲ್ಲಿಂದ ಓಡಿ ಬಂದು ಜೀವ ಉಳಿಸಿಕೊಂಡಿದೆ.

publive-image

ಕಾಶ್ಮೀರ ಪ್ರವಾಸ ಇವರ ಕುಟುಂಬಕ್ಕೆ ಜೀವನದಲ್ಲಿ ಮರೆಯಲಾಗದ ಒಂದು ಕಪ್ಪು ಚುಕ್ಕೆಯ ಘಟನೆಯಾಗಿ ಉಳಿದಿದೆ. ಇನ್ನೂ 3 ದಿನಗಳ ಪ್ರವಾಸ ಬಾಕಿ ಇರುವಂತೆಯೇ ಜೀವವನ್ನು ಕೈಯಲ್ಲಿ ಹಿಡಿದು ತವರಿಗೆ ಮರಳಿದೆ ಈ ಕುಟುಂಬ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment