/newsfirstlive-kannada/media/post_attachments/wp-content/uploads/2025/06/Kantara-Film-Shivamogga-Shooting.jpg)
ಶಿವಮೊಗ್ಗ: ನಟ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಾಪ್ಟರ್ 1 ಸಿನಿಮಾ ಸಾಲು, ಸಾಲು ಅವಘಡದ ಸವಾಲುಗಳನ್ನ ಎದುರಿಸುತ್ತಿದೆ. ಸಾಲು, ಸಾಲು ಅವಘಡಗಳ ಮಧ್ಯೆಯೂ ಕಾಂತಾರ ಚಲನಚಿತ್ರದ ಚಿತ್ರೀಕರಣ ಮುಂದುವರಿದಿದೆ.
ಹೊಸನಗರ ತಾಲೂಕಿನ ಮಾಸ್ತಿ ಕಟ್ಟೆಯ ಮಾಣಿ ಜಲಾಶಯದ ಹಿನ್ನೀರಿನಲ್ಲಿ ಕಾಂತಾರ-1 ಚಿತ್ರೀಕರಣ ನಡೆಯುತ್ತಿದೆ. ಕಳೆದ ರಾತ್ರಿ ಶೂಟಿಂಗ್ ವೇಳೆ ಚಿತ್ರೀಕರಣದಲ್ಲಿ ಬಳಕೆಯಾದ ದೋಣಿ ಮಗುಚಿ 30 ಜನ ಅಪಾಯದಿಂದ ಪಾರಾಗಿದ್ದರು.
ಶೂಟಿಂಗ್ ವೇಳೆ ದೋಣಿ ಮುಗುಚಿದ ಘಟನೆಯಲ್ಲಿ ಹಲವರು ಪಾರಾಗಿದ್ರೆ ಓರ್ವ ಮಹಿಳೆ ತೀರ್ಥಹಳ್ಳಿಯ ಮೇಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಈ ಮಾಹಿತಿ ಮೇರೆಗೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಕಾಂತಾರ-1 ತಂಡಕ್ಕೆ ಮತ್ತೆ ಶಾಕ್.. ಶೂಟಿಂಗ್ ಸೆಟ್ನಲ್ಲಿ ಮತ್ತೊಂದು ಅವಘಡ
ಕಳೆದ ಒಂದು ತಿಂಗಳ ಅವಧಿಯಲ್ಲಿ ಕಾಂತಾರ-1 ಸಿನಿಮಾದಲ್ಲಿ ಭಾಗಿಯಾಗಿದ್ದ ಇಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಕಳೆದ ರಾತ್ರಿಯ ಅವಘಡ ಸೇರಿ ಒಟ್ಟು 6 ಅವಘಡಗಳು ಚಿತ್ರೀಕರಣದ ವೇಳೆ ನಡೆದಿದೆ.
ಹೀಗೆ ಸಾಲು, ಸಾಲು ಅವಘಡಗಳು ಕಾಂತಾರ-1 ಚಿತ್ರತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಇಷ್ಟಾದ್ರೂ ಇಂದು ಮತ್ತೆ ಶೂಟಿಂಗ್ ಅನ್ನು ಚಿತ್ರ ತಂಡ ಆರಂಭ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ