ಕಾಂತಾರ- 1 ಶೂಟಿಂಗ್ ಮಾಡುವಾಗ ಅಸಲಿಗೆ ಏನಾಯಿತು.. ಸ್ಪಷ್ಟನೆ ಕೊಟ್ಟ ಚಿತ್ರತಂಡ, ಹೇಳಿದ್ದೇನು?

author-image
Bheemappa
Updated On
ಕಾಂತಾರ- 1 ಶೂಟಿಂಗ್ ಮಾಡುವಾಗ ಅಸಲಿಗೆ ಏನಾಯಿತು.. ಸ್ಪಷ್ಟನೆ ಕೊಟ್ಟ ಚಿತ್ರತಂಡ, ಹೇಳಿದ್ದೇನು?
Advertisment
  • ಚಿತ್ರೀಕರಣದ ವೇಳೆ ಜಲಾಶಯದಲ್ಲಿ ದೋಣಿ ಮಗುಚಿ ಬಿದ್ದಿತ್ತಾ?
  • ಬ್ಯಾಕ್​ಡ್ರಾಪ್​ಗಾಗಿ ಶಿಪ್ ಸೆಟ್​ ಅನ್ನು ನಾವು ಹಾಕಿಕೊಂಡಿದ್ದೇವು
  • ಶೂಟಿಂಗ್​​ ಮಾಡಲು ಯಾರ ಯಾರ ಅನುಮತಿ ಪಡೆಯಲಾಗಿದೆ?

ಶಿವಮೊಗ್ಗ: ಸ್ಯಾಂಡಲ್​ವುಡ್​ನ ಕಾಂತಾರ-1 ಸಿನಿಮಾದ ಶೂಟಿಂಗ್​ ಮಾಡುವಾಗ ಅವಘಡ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರತಂಡ ಕೊನೆಗೂ ಘಟನೆ ಕುರಿತು ಸ್ಪಷ್ಟನೆ ನೀಡಿದೆ. ಶೂಟಿಂಗ್​​ಗೆ ಬೇಕಾದ ಎಲ್ಲ ಅಗತ್ಯವಾದ ಅನುಮತಿ ಸರ್ಕಾರದ ಇಲಾಖೆಗಳಿಂದ ಪಡೆದಿದ್ದೇವೆ. ಯಾರಿಗೂ ಯಾವುದೇ ತೊಂದರೆ ಆಗಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ಕೊಟ್ಟ ಹೊಂಬಾಳೆ ಫಿಲಂ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಆದರ್ಶ ಅವರು, ಮಾಣಿ ಹಿನ್ನೀರಿನ ಬಳಿ ಕಾಂತಾರ-1 ಸಿನಿಮಾ ಶೂಟಿಂಗ್ ನಡೆಯುತ್ತಿದೆ. ನಮ್ಮ ಸೆಟ್​ನಲ್ಲಿ ಬ್ಯಾಕ್​ಡ್ರಾಪ್​ಗಾಗಿ ಶಿಪ್ ಸೆಟ್​ ಅನ್ನು ಹಾಕಿಕೊಂಡಿದ್ದೇವು. ಶೂಟಿಂಗ್ ಮಾಡುವಾಗ ಜೋರಾದ ಮಳೆ, ಗಾಳಿಯಿಂದಾಗಿ ಶಿಪ್​ ಸೆಟ್​ ಪಲ್ಟಿಯಾಗಿ ಬಿದ್ದಿದೆ ಅಷ್ಟೇ. ಆ ಸ್ಥಳದಲ್ಲಿ ಯಾರೂ ಕೂಡ ಇರಲಿಲ್ಲ. ಶೂಟಿಂಗ್ ಮಾಡುತ್ತಿರುವ ಸ್ಥಳ ಅದರಿಂದ ದೂರ ಇದೆ ಎಂದು ಹೆಳಿದ್ದಾರೆ.

ಇದನ್ನೂ ಓದಿ: ಸೇತುವೆ ಮೇಲೆ ನಿಂತು ನೋಡುವಾಗಲೇ ನದಿಗೆ ಬಿದ್ದ ಬ್ರಿಡ್ಜ್​.. ಇಬ್ಬರು ನಿಧನ, ಕಾಣೆ ಆದವರಿಗಾಗಿ ಹುಡುಕಾಟ

publive-image

ಅದರಲ್ಲಿ ಯಾರಿಗೂ ಯಾವುದೇ ತೊಂದರೆ ಆಗಿಲ್ಲ. ಈಗಾಗಲೇ ಶೂಟಿಂಗ್ ಮತ್ತೆ ಆರಂಭ ಮಾಡಲಾಗಿದೆ. ಬೇಕಾದ ಎಲ್ಲ ಅನುಮತಿಗಳನ್ನು ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಕೆಪಿಸಿ ಹಾಗೂ ಪಂಚಾಯತಿಗೂ ಮಾಹಿತಿ ನೀಡಿ ಚಿತ್ರೀಕರಣ ಮಾಡುತ್ತಿದ್ದೇವೆ. ನೀರಿನ ಭಾಗದಲ್ಲಿ ಯಾವುದೇ ಚಿತ್ರೀಕರಣ ಇಲ್ಲ. ಆದರೂ ರಕ್ಷಣೆಗಾಗಿ ಸ್ಪೀಡ್​ ಬೋಟ್​, 25 ಮೀನುಗಾರರು, ಸ್ವಿಮ್ಮರ್ಸ್​, ಸ್ಕೂಬಾ ಡೈವರ್ಸ್​, ಲೈಫ್ ಜಾಕೆಟ್ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಶಿಪ್ ಪಲ್ಟಿಯಾದ ಘಟನೆಯಲ್ಲಿ ಯಾರಿಗೂ ಏನು ಆಗಿಲ್ಲ. ಕ್ಯಾಮೆರಾ ಏನಾದರೂ ನೀರಲ್ಲಿ ಹೋಗಿದ್ದರೇ ಶೂಟಿಂಗ್ ಮಾಡಲು ಆಗುತ್ತಿರಲಿಲ್ಲ. ಆದರೆ ಈಗ ಶೂಟಿಂಗ್ ಆರಂಭಿಸಿದ್ದೇವೆ. ಪೊಲೀಸರು ಸ್ಥಳಕ್ಕೆ ಬಂದು ಎಲ್ಲ ಪರಿಶೀಲನೆ ಮಾಡಿದ್ದಾರೆ. ಯಾವುದೇ ಅವಘಡ ಸ್ಥಳದಲ್ಲಿ ನಡೆದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment