ಕಾಂತಾರ ರಿಷಬ್ ಶೆಟ್ಟಿಗೆ ಸಿಗುತ್ತಾ ರಾಷ್ಟ್ರ ಪ್ರಶಸ್ತಿ? ಪೈಪೋಟಿಯಲ್ಲಿ ಇರೋ ಸ್ಟಾರ್‌ ನಟರು ಯಾರು?

author-image
admin
Updated On
ಕಾಂತಾರ ರಿಷಬ್ ಶೆಟ್ಟಿಗೆ ಸಿಗುತ್ತಾ ರಾಷ್ಟ್ರ ಪ್ರಶಸ್ತಿ? ಪೈಪೋಟಿಯಲ್ಲಿ ಇರೋ ಸ್ಟಾರ್‌ ನಟರು ಯಾರು?
Advertisment
  • ಇಂದು 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯ ಪಟ್ಟಿ ಘೋಷಣೆ
  • 2022ನೇ ಸಾಲಿನ ಅತ್ಯುತ್ತಮ ಸಿನಿಮಾಗಳಲ್ಲಿ ರೇಸ್‌ನಲ್ಲಿ ಕಾಂತಾರ
  • ರಿಷಬ್ ಶೆಟ್ಟಿಗೆ ಮಲಯಾಳಂನ ಖ್ಯಾತ ನಟನಿಂದ ಭಾರೀ ಪೈಪೋಟಿ

78ನೇ ಸ್ವಾತಂತ್ರ್ಯ ದಿನಾಚರಣೆಯ ಬೆನ್ನಲ್ಲೇ ಇಂದು ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗೆ ಆಯ್ಕೆಯಾದ ಅತ್ಯುತ್ತಮ ಚಲನಚಿತ್ರ, ನಟ, ನಟಿಯರ ಪಟ್ಟಿ ಘೋಷಣೆಯಾಗುತ್ತಿದೆ. ದೆಹಲಿಯಲ್ಲಿ 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳ ಘೋಷಣೆ ಆಗುತ್ತಿದ್ದು ತೀವ್ರ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: ದರ್ಶನ್‌ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌.. ‘ಸ್ಪೆಷಲ್ ಫೋಟೋ’ ಶೇರ್ ಮಾಡಿ ಹೊಸ ಭರವಸೆ ಮೂಡಿಸಿದ ವಿಜಯಲಕ್ಷ್ಮಿ

2022ನೇ ಸಾಲಿನ ಅತ್ಯುತ್ತಮ ಸಿನಿಮಾಗಳನ್ನು ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗೆ ಆಯ್ಕೆ ಮಾಡಿ ಘೋಷಣೆ ಮಾಡಲಾಗುತ್ತಿದೆ. ಕೇಂದ್ರದ ವಾರ್ತಾ, ಪ್ರಸಾರ ಇಲಾಖೆಯಿಂದ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗೆ ಆಯ್ಕೆಯಾದ ಸಿನಿಮಾಗಳ ಘೋಷಣೆ ಆಗಲಿದೆ.

publive-image

2022ರ ಜನವರಿ 1 ರಿಂದ ಡಿಸೆಂಬರ್ 31ರವರೆಗೆ ಬಿಡುಗಡೆಯಾದ ಸಿನಿಮಾಗಳಿಗೆ ಇಂದು ಪ್ರಶಸ್ತಿ ಘೋಷಣೆ ಮಾಡಲಾಗುತ್ತಿದೆ. ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಯ್ಕೆಯಾದ ಸಿನಿಮಾ ತಂಡ ಹಾಗೂ ಅತ್ಯುತ್ತಮ ನಟ, ನಟಿಯರಿಗೆ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಇದನ್ನೂ ಓದಿ: ಅಂದು ದ್ವಾರಕೀಶ್​​ ಕನಸಿನ ಮನೆ ಖರೀದಿಸಿದ್ದ ರಿಷಬ್​! ಇದುವರೆಗೂ ಅಲ್ಲಿಗೆ ಕಾಲಿಟ್ಟಿಲ್ಲವಂತೆ​! ಯಾಕೆ?

ಅತ್ಯುತ್ತಮ ನಟ ಯಾರಾಗ್ತಾರೆ?
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯ ಪಟ್ಟಿಯಲ್ಲಿ ಅತ್ಯುತ್ತಮ ನಟ ಯಾರಾಗ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಈ ಬಾರಿ ಅತ್ಯುತ್ತಮ ನಟನೆಗಾಗಿ ಕಾಂತಾರಾ ಸಿನಿಮಾದಲ್ಲಿ ಅಭಿನಯಿಸಿದ ನಟ ರಿಷಬ್‌ ಶೆಟ್ಟಿ ಹೆಸರು ಕೇಳಿ ಬಂದಿದೆ. ರಿಷಬ್ ಶೆಟ್ಟಿ ಅವರಿಗೆ ಮಲೆಯಾಳಂ ನಟ ಮಮ್ಮುಟಿ ಅವರು ಪೈಪೋಟಿ ನೀಡುತ್ತಿದ್ದಾರೆ. ಮಮ್ಮುಟ್ಟಿ ಅವರ ನನ್ಪಾಕಲ್ ನೆರತು ಮಾಯಕ್ಕಂ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಒಲಿಯುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment