/newsfirstlive-kannada/media/post_attachments/wp-content/uploads/2025/04/KANTARAJU.jpg)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದದಲ್ಲಿ ಸಚಿವ ಸಂಪುಟ ಸಭೆ ಆರಂಭವಾಗಿದೆ. ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ. ಜಿ ಪರಮೇಶ್ವರ್, ಶಿವರಾಜ್ ತಂಗಡಗಿ, ರಾಮಲಿಂಗ ರೆಡ್ಡಿ, ಹೆಚ್ ಕೆ ಪಾಟೀಲ್, ಶರಣ ಪ್ರಕಾಶ್ ಪಾಟೀಲ್, ಚೆಲುವರಾಯಸ್ವಾಮಿ, ಸತೀಶ್ ಜಾರಕಿಹೊಳಿ, ಬೋಸರಾಜು, ಪ್ರಿಯಾಂಕ್ ಖರ್ಗೆ, ಕೆ.ಜೆ ಜಾರ್ಜ್ , ಶಿವಾನಂದ ಪಾಟೀಲ್, ಕೆ.ಎನ್ ರಾಜಣ್ಣ, ದಿನೇಶ್ ಗುಂಡೂರಾವ್ ಹಾಜರಿದ್ದಾರೆ. ಇನ್ನು, ಇಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆಯಾಗೋ ಸಾಧ್ಯತೆ ಇದೆ.
ಇದನ್ನೂ ಓದಿ: ಜನಾಕ್ರೋಶ ಯಾತ್ರೆಗೆ ಜನಾಕ್ರೋಶ ಸವಾಲು.. ಬಿಜೆಪಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ಪ್ಲಾನ್; ಏನಿದು?
ರಾಜ್ಯ ಸರ್ಕಾರದಿಂದ ಜಾತಿಗಣತಿ ವರದಿ ಮಂಡನೆ ವಿಚಾರವಾಗಿ ಜೆಡಿಎಸ್ ವಿರೋಧ ವ್ಯಕ್ತಪಡಿಸಿದೆ. ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಬಿಡುಗಡೆ ಮಾಡಲಿ. ನಮ್ಮ ನಿವಾಸಗಳಿಗೆ ಬಂದು ಸಮೀಕ್ಷೆ ಮಾಡಿಲ್ಲ. ಜೊತೆಗೆ ದಳಪತಿ ಒಕ್ಕಲಿಗ ಸಮುದಾಯ ಸಂಖ್ಯೆ ಕಡಿಮೆ ಆಗುವ ಆತಂಕ ಹೀಗಾಗಿ ಜಾತಿಗಣತಿ ಮಂಡನೆಗೆ ಜೆಡಿಎಸ್ ಆಕ್ಷೇಪ ವ್ಯಕ್ತಪಡಿಸಿದೆ ಎನ್ನಲಾಗ್ತಿದೆ.
ಲೇಟಾಗಿದೆ ಎನ್ನುವುದು ಅಪ್ರಸ್ತುತ
ಇನ್ನು ಜಾತಿ ಜನಗಣತಿ ವರದಿಯೇ ಲೇಟಾಗಿದೆ ಎನ್ನುವುದು ಅಪ್ರಸ್ತುತವಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ಹೇಳಿದ್ದಾರೆ. ಜಾತಿ ಜನಗಣತಿ ಪದೇ ಪದೇ ಮಾಡಲು ಸಾಧ್ಯವಿಲ್ಲ. ಜಾತಿಗಣತಿ ಕಾರ್ಯಗಳೆಲ್ಲಾ ದೊಡ್ಡ ಕೆಲಸಗಳಾಗಿವೆ. 54 ಅಂಶಗಳ ಮೇಲೆ ಮಾಹಿತಿ ಪಡೆದು ವರದಿ ನೀಡಲಾಗಿದೆ. ಜಾತಿಯನ್ನು ಒಂದು ಅಂಶವಾಗಿ ಇಟ್ಟುಕೊಂಡು ಹಾಗೂ ವೈಜ್ಞಾನಿಕವಾಗಿ ಜಾತಿಗಣತಿ ವರದಿ ಸಿದ್ಧಪಡಿಸಲಾಗಿದೆ ಎಂದರು.
ಇದನ್ನೂ ಓದಿ: ಇಂದು ಕರ್ನಾಟಕ ಪಾಲಿಗೆ ಮಹತ್ವದ ದಿನ.. ಸಿದ್ದರಾಮಯ್ಯ ಸರ್ಕಾರದಿಂದ ಐತಿಹಾಸಿಕ ನಿರ್ಧಾರ ಸಾಧ್ಯತೆ..!
ವರದಿಯಲ್ಲಿ ಏನೀದೆ ಎಂದು ಯಾರಿಗೂ ಗೊತ್ತಿಲ್ಲ. ದತ್ತಾಂಶ, ಅಂಕಿ ಅಂಶಗಳಿಗೆ ಹೋಲಿಕೆ ಆಗಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಇದೇ ವೇಳೆ ಜಾತಿ ಜನಗಣತಿಗೆ ಜಾರಿಗೆ ಕಾಂಗ್ರೆಸ್ ನಾಯಕರ ಒಪ್ಪಿಗೆ ಇದ್ಯಾ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಪ್ರಹ್ಲಾದ್ ಜೋಶಿ ನರೇಂದ್ರ ಮೋದಿ ಜೊತೆಯಿದ್ದಾರಲ್ವಾ. ಮೊದಲು ಮೋದಿ ಮತ್ತೆ ಬಿಜೆಪಿ ನಿಲುವನ್ನ ಸ್ಪಷ್ಟಪಡಿಸಲಿ. ಜಾತಿ ಜನಗಣತಿ ವರದಿ ಮಂಡನೆಗೂ ಕಾಂಗ್ರೆಸ್ ಹೈಕಮಾಂಡ್ಗೂ ಸಂಬಂಧ ಇಲ್ಲ. ಇದು ರಾಜ್ಯ ಸರ್ಕಾರದ ತೀರ್ಮಾನ ಎಂದು ತಿರುಗೇಟು ನೀಡಿದ್ದಾರೆ.
ಇದು ಜಾತಿಗಣತಿ ಅಲ್ಲ
ವರದಿಯನ್ನು ಸರ್ಕಾರಕ್ಕೆ ಕೊಟ್ಟ ಬಳಿಕ ಟ್ರಜೊರಿಯಲ್ಲಿ ಇಟ್ಟಿದ್ದೇವು. ವರದಿ ಬಗ್ಗೆ ಪರ, ವಿರೋಧ ಚರ್ಚೆ ನಡೆಯುತ್ತಿದೆ ಎಂದು ಸಚಿವ ಶಿವರಾಜ್ ತಂಗಡಿಗಿ ಹೇಳಿದ್ದಾರೆ. ವರದಿ ಎಲ್ಲಿಯೂ ಬಹಿರಂಗ ಆಗಿಲ್ಲ. ಈಗ ಬರುತ್ತಿರುವ ಅಂಕಿ, ಸಂಖ್ಯೆ ಎಲ್ಲವೂ ಊಹಾಪೋಹ. ವರದಿಯಲ್ಲಿ ಏನಿದೆ ಅಂತ ಯಾರಿಗೂ ಗೊತ್ತಿಲ್ಲ. ಇದು ಜಾತಿಗಣತಿ ಅಲ್ಲ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ. ಇದಕ್ಕೆ ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ. ಜನರ ಸಮೀಕ್ಷೆ ಬಿಟ್ಟು ಜಾತಿ ಸಮೀಕ್ಷೆ ಅಲ್ಲ ಎಂದಿದ್ದಾರೆ.
ಜಾತಿಗಣತಿ ವರದಿ ನೋಡದೆ ಕಾಮೆಂಟ್ ಮಾಡೋದು ಸರಿಯಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಒಮ್ಮೆ ಮಂಡಣೆಯಾದ ಮೇಲೆ ಲೋಪದೋಷಗಳಿವೆ, ಸರಿಪಡಿಸಿ ಎಂದೂ ಹೇಳಬಹುದು. ಅದಕ್ಕೂ ಅವಕಾಶ ಇದೆ. 2015ರಲ್ಲಿ ವರದಿ ಮಾಡಲಾಗಿತ್ತು, ಜಾತಿ ಗಣತಿಗೆ ಅವಕಾಶ ನೀಡಿದ್ದೆ ನಮ್ಮ ಸರ್ಕಾರ ಎದು ಹೇಳಿದ್ದಾರೆ.
ಇದನ್ನೂ ಓದಿ: ಉಡುಪಿಯಲ್ಲಿ ಅಣ್ಣಾಮಲೈ ಮಾತು.. ಬಿಜೆಪಿ ರಾಜ್ಯಾಧ್ಯಕ್ಷ ವಿಚಾರದ ಬಗ್ಗೆ ಖಡಕ್ ಹೇಳಿಕೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ