/newsfirstlive-kannada/media/post_attachments/wp-content/uploads/2025/02/Kanye-West.jpg)
ಅಮೆರಿಕದ ಪ್ರಸಿದ್ಧ ಱಪರ್ ಹಾಗೂ ರೆಕಾರ್ಡ್ ಪ್ರೊಡ್ಯೂಸರ್ ಕಾನ್ಯೆ ವೆಸ್ಟ್ (Kanye West) ಪತ್ನಿ ಬಿಯಾಂಕಾ ಸೆನ್ಸೋರಿ (Bianca Censori) 67ನೇ ಗ್ರ್ಯಾಮಿ ಪ್ರಶಸ್ತಿ ಕಾರ್ಯಕ್ರಮದಲ್ಲಿ (67th Grammys) ನಗ್ನವಾಗಿ ಕಾಣಿಸಿಕೊಂಡು ವಿವಾದ ಸೃಷ್ಟಿಸಿದ್ದಾರೆ. ವೇದಿಕೆ ಮೇಲೆ ಕಂಡುಬಂದ ಹಸಿಬಿಸಿ ದೃಶ್ಯಗಳು ಟೀಕೆಗೆ ಕಾರಣವಾಗಿದೆ. ಈ ಮಧ್ಯೆ ತಮ್ಮ ಪತ್ನಿಯ ನಡೆಯ ಬಗ್ಗೆ ಕಾನ್ಯೆ ವೆಸ್ಟ್ ಪ್ರತಿಕ್ರಿಯೆ ನೀಡಿದ್ದಾರೆ.
ಏನಂದ್ರು ಱಪರ್..?
ಇನ್ಸ್ಟಾಗ್ರಾಮ್ನಲ್ಲಿ ಕಾನ್ಯೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಒಂದು ಸ್ಟೋರಿಯಲ್ಲಿ ‘We beat the Grammys’ ಅಂತಾ ಬರೆದಿದ್ದಾರೆ. ಇನ್ನೊಂದು ಸ್ಟೋರಿನಲ್ಲಿ ಫೆಬ್ರವರಿ 4, 2025 ರಂದು ಈ ಭೂಮಿ ಮೇಲೆ ಗೂಗಲ್ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಪತ್ನಿ ಸೆನ್ಸೋರಿ ಕುರಿತ ಗೂಗಲ್ನಲ್ಲಿ ಹುಡುಕಿರೋದಕ್ಕೆ ಸಾಕ್ಷಿಯಾಗಿ ಕೆಲವು ಅನಾಲಿಟಕ್ಸ್ಗಳನ್ನು ಶೇರ್ ಮಾಡಿದ್ದರು. ಕೊನೆಗೆ ಅದನ್ನು ಡಿಲೀಟ್ ಮಾಡಿದ್ದಾರೆ.
ಇದನ್ನೂ ಓದಿ: ಪ್ರತಿಷ್ಠಿತ ವೇದಿಕೆಗೆ ನಗ್ನವಾಗಿ ಎಂಟ್ರಿ ಕೊಟ್ಟ ಮಾಡೆಲ್.. ‘ಗ್ರ್ಯಾಮಿ ಪ್ರಶಸ್ತಿ’ ಕಾರ್ಯಕ್ರಮದಲ್ಲಿ ಸಂಚಲನ
ಆಗಿದ್ದೇನು..?
Grammy ವೇದಿಕೆಗೆ ಱಪರ್ ಕಾನ್ಯೆ ಜೊತೆ ಬಿಯಾಂಕಾ ಸೆನ್ಸೋರಿ ಸೆನ್ಸೋರಿ ಉದ್ದನೆಯ ಕಪ್ಪು ಬಣ್ಣದ ಕೋಟ್ ಧರಿಸಿ ವೇದಿಕೆಗೆ ಎಂಟ್ರಿ ನೀಡಿದ್ದರು. ಎಂಟ್ರಿ ಆಗ್ತಿದ್ದಂತೆ ಸಭಿಕರಿಗೆ ಬೆನ್ನು ತೋರಿಸಿ ಸಂಪೂರ್ಣ ಬೆತ್ತಲಾದರು. ಕೊನೆಗೆ ಕ್ಯಾಮೆರಾಗೆ ಹಾಗೂ ಮಾಧ್ಯಮಗಳಿಗೆ ಪೋಸ್ ನೀಡಿದರು. ಇದು ನೆರೆದಿದ್ದವರನ್ನು ಇರಿಸು ಮುರಿಸಿಗೆ ತಳ್ಳಿತು. ಬಳಿಕ ಱಪರ್ ಕಾನ್ಯೆ ವೆಸ್ಟ್ ದಂಪತಿಯನ್ನು ಕಾರ್ಯಕ್ರಮದಿಂದ ಹೊರಗೆ ಕರೆದೊಯ್ಯಲಾಗಿದ್ದು ವಿವಾದಾತ್ಮಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರಿಂದಲೇ ಕಾರ್ಯಕ್ರಮದಿಂದ ಹೊರಗೆ ಹಾಕಲಾಗಿದೆ. ಡ್ರೆಸ್ಕೋಡ್ ಉಲ್ಲಂಘಿಸಿರುವ ಕಾರಣಕ್ಕೆ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ.
ಯಾರು ಬಿಯಾಂಕಾ ಸೆನ್ಸೋರಿ..?
ಬಿಯಾಂಕಾ ಸೆನ್ಸೋರಿ ಅವರು ಆಸ್ಟ್ರೇಲಿಯಾದ ವಾಸ್ತುಶಿಲ್ಪಿ, ಮಾಡೆಲ್. 30 ವರ್ಷದ ಇವರು, ವಾಸ್ತುಶಿಲ್ಪ ಶಾಸ್ತ್ರ ವಿಭಾಗದಲ್ಲಿ ಬ್ಯಾಚುಲರ್ ಮತ್ತು ಮಾಸ್ಟರ್ ಡಿಗ್ರಿ ಪಡೆದುಕೊಂಡಿದ್ದಾರೆ. ಮೆಲ್ಬೋರ್ನ್ ವಿಶ್ವವಿದ್ಯಾಲಯದಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ. ಕಾನ್ಯೆ ವೆಸ್ಟ್ ಜೊತೆ ಡೇಟಿಂಗ್ ನಡೆಸ್ತಿದ್ದ ಬಿಯಾಂಕಾ ಜೋಡಿ ಜನವರಿ 2023ರಲ್ಲಿ ಖಾಸಗಿ ಸಮಾರಂಭದಲ್ಲಿ ಮದುವೆಯಾದರು. 2023, ಅಕ್ಟೋಬರ್ ವರೆಗೂ ಮದುವೆ ಆಗಿರುವ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಇನ್ನು ಕಾನೂನು ಪ್ರಕಾರ ಡಿಸೆಂಬರ್ 20, 2022ರಲ್ಲಿ ಈ ಜೋಡಿ ರಿಜಿಸ್ಟರ್ ಆಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಕೈಕೊಟ್ಟ ಸಂಜು ಸ್ಯಾಮ್ಸನ್.. ಹೊಸ ನಾಯಕನ ಹುಡುಕಾಟದಲ್ಲಿ ರಾಜಸ್ಥಾನ್ ರಾಯಲ್ಸ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್