ಪ್ರತಿಷ್ಠಿತ ವೇದಿಕೆಗೆ ನಗ್ನವಾಗಿ ಎಂಟ್ರಿ ಕೊಟ್ಟ ಮಾಡೆಲ್.. ‘ಗ್ರ್ಯಾಮಿ ಪ್ರಶಸ್ತಿ’ ಕಾರ್ಯಕ್ರಮದಲ್ಲಿ ಸಂಚಲನ

author-image
Ganesh
Updated On
ಗ್ರ್ಯಾಮಿ ವೇದಿಕೆಯಲ್ಲಿ ಮಾಡೆಲ್ ನಗ್ನ ಪೋಸ್; ಪತ್ನಿ ಮಾಡಿದ ತಪ್ಪಿನ ಬಗ್ಗೆ ಪತಿ ಅಚ್ಚರಿ ಹೇಳಿಕೆ
Advertisment
  • ದೊಡ್ಡ ವಿವಾದ ಸೃಷ್ಟಿಸಿದ ಸ್ಟಾರ್ ಱಪರ್​ ಪತ್ನಿ
  • ವಿವಾದ ಆಗ್ತಿದ್ದಂತೆಯೇ ಹೊರಗೆ ಕಳುಹಿಸಿದ ಆಯೋಜಕರು
  • ಯಾರು ಬಿಯಾಂಕಾ ಸೆನ್ಸೋರಿ? ವೇದಿಕೆಯಲ್ಲಿ ಆಗಿದ್ದೇನು?

ಅಮೆರಿಕದ ಪ್ರಸಿದ್ಧ ಱಪರ್ ಹಾಗೂ ರೆಕಾರ್ಡ್ ಪ್ರೊಡ್ಯೂಸರ್ ಕಾನ್ಯೆ ವೆಸ್ಟ್ (Kanye West) ಪತ್ನಿ ಬಿಯಾಂಕಾ ಸೆನ್ಸೋರಿ (Bianca Censori) 67ನೇ ಗ್ರ್ಯಾಮಿ ಪ್ರಶಸ್ತಿ ಕಾರ್ಯಕ್ರಮದಲ್ಲಿ (67th Grammys) ನಗ್ನವಾಗಿ ಕಾಣಿಸಿಕೊಂಡು ವಿವಾದ ಸೃಷ್ಟಿಸಿದ್ದಾರೆ.

ವೇದಿಕೆ ಮೇಲೆ ಬಿಯಾಂಕಾ ನಗ್ನವಾಗಿ ಕಾಣಿಸಿಕೊಂಡಿದ್ದು ನೆರೆದಿದ್ದವರನ್ನು ಇರಿಸು ಮುರಿಸಿಗೆ ತಳ್ಳಿತು. ಬಳಿಕ ಱಪರ್ ಕಾನ್ಯೆ ವೆಸ್ಟ್ ದಂಪತಿಯನ್ನು ಕಾರ್ಯಕ್ರಮದಿಂದ ಹೊರಗೆ ಕರೆದೊಯ್ಯಲಾಗಿದ್ದು ವಿವಾದಾತ್ಮಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರಿಂದಲೇ ಕಾರ್ಯಕ್ರಮದಿಂದ ಹೊರಗೆ ಹಾಕಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

ಯಾರು ಬಿಯಾಂಕಾ ಸೆನ್ಸೋರಿ..?

ಬಿಯಾಂಕಾ ಸೆನ್ಸೋರಿ ಅವರು ಆಸ್ಟ್ರೇಲಿಯಾದ ವಾಸ್ತುಶಿಲ್ಪಿ, ಮಾಡೆಲ್. 30 ವರ್ಷದ ಇವರು, ವಾಸ್ತುಶಿಲ್ಪ ಶಾಸ್ತ್ರ ವಿಭಾಗದಲ್ಲಿ ಬ್ಯಾಚುಲರ್ ಮತ್ತು ಮಾಸ್ಟರ್ ಡಿಗ್ರಿ ಪಡೆದುಕೊಂಡಿದ್ದಾರೆ. ಮೆಲ್ಬೋರ್ನ್​​ ವಿಶ್ವವಿದ್ಯಾಲಯದಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ. ಕಾನ್ಯೆ ವೆಸ್ಟ್ ಜೊತೆ ಡೇಟಿಂಗ್ ನಡೆಸ್ತಿದ್ದ ಬಿಯಾಂಕಾ ಜೋಡಿ ಜನವರಿ 2023ರಲ್ಲಿ ಖಾಸಗಿ ಸಮಾರಂಭದಲ್ಲಿ ಮದುವೆಯಾದರು. 2023, ಅಕ್ಟೋಬರ್​​ ವರೆಗೂ ಮದುವೆ ಆಗಿರುವ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಇನ್ನು ಕಾನೂನು ಪ್ರಕಾರ ಡಿಸೆಂಬರ್ 20, 2022ರಲ್ಲಿ ಈ ಜೋಡಿ ರಿಜಿಸ್ಟರ್ ಆಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಐಶು ಪುತ್ರಿ; ಆರಾಧ್ಯ ಈ ನಿರ್ಣಯಕ್ಕೆ ಕಾರಣವೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment