ಕಪಿಲ್ ಶರ್ಮಾ ಕೇವಲ ಕಾಮಿಡಿಯನ್ ಅಷ್ಟೇ ಅಲ್ಲ.. ನೂರಾರು ಕೋಟಿ ರೂಪಾಯಿಗಳ ಒಡೆಯ!​

author-image
Bheemappa
Updated On
ಕಪಿಲ್ ಶರ್ಮಾ ಕೇವಲ ಕಾಮಿಡಿಯನ್ ಅಷ್ಟೇ ಅಲ್ಲ.. ನೂರಾರು ಕೋಟಿ ರೂಪಾಯಿಗಳ ಒಡೆಯ!​
Advertisment
  • ಕಾಮಿಡಿ ಶೋನಲ್ಲಿ ಎಲ್ಲರನ್ನ ನಗಿಸಿ ಕೋಟಿ ಕೋಟಿ ಸಂಪಾದನೆ
  • ಕಪಿಲ್ ಶರ್ಮಾ ಕೇವಲ ಒಂದು ಶೋಗೆ ಎಷ್ಟು ಚಾರ್ಜ್ ಮಾಡ್ತಾರೆ
  • ಅಮೃತಸರದಿಂದ ಮುಂಬೈ ಸಿಟಿವರೆಗೆ ಕಪಿಲ್ ಶರ್ಮಾ ಜೀವನ ಹೇಗಿದೆ?

ಬಾಲಿವುಡ್​ನಲ್ಲಿ ಕಿರುತೆರೆಯಲ್ಲಿ ಅತಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಶೋ ಎಂದರೆ ಅದು ಕಪಿಲ್ ಶರ್ಮಾ ಶೋ. ಸದ್ಯ ಕಪಿಲ್ ಶರ್ಮಾ ಶೋ ಸೀಸನ್​- 3 ಅದ್ಧೂರಿಯಾಗಿ ಆರಂಭವಾಗಿದ್ದು ಸಲ್ಮಾನ್​ ಖಾನ್ ಮೊದಲ ಎಪಿಸೋಡ್​ನಲ್ಲಿ ಮಿಂಚಿದ್ದರು. ಇದಾದ ಮೇಲೆ ಕಾಮಿಡಿಯನ್​ ಕಪಿಲ್ ಶರ್ಮಾ ಅವರ ಕೆನಡಾದಲ್ಲಿರುವ ಕೆಫೆ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ಎಲ್ಲವೂ ಈಗಿರುವಾಗ ಕಪಿಲ್ ಶರ್ಮಾ ಅವರ ಐಷಾರಾಮಿ, ಲಕ್ಸುರಿ ಲೈಫ್​ ಹೇಗೆಲ್ಲಾ ಇದೆ ಗೊತ್ತಾ?.

ಒಬ್ಬ ಸಾಮಾನ್ಯ ಕೆಲಸಗಾರನಾಗಿದ್ದ ಕಪಿಲ್ ಶರ್ಮಾ ಅವರ ಜೀವನ ಟರ್ನ್​ ಆಗಿದ್ದೇ ರೋಚಕ. ಪಂಜಾಬ್​ನ ಅಮೃತಸರದಲ್ಲಿ ಜನಿಸಿದ ಕಪಿಲ್ ಶರ್ಮಾ ಆರಂಭದಲ್ಲಿ ಹಣವಿಲ್ಲದೇ ಸಂಕಷ್ಟದಿಂದ ಇದ್ದರು. ಕುಟುಂಬ ಪೋಷಣೆಗೂ ಕಣ್ಣೀರು ಹಾಕುವ ಸ್ಥಿತಿ ಇತ್ತು. ಅಮೃತಸರದಿಂದ ಮುಂಬೈವರೆಗೆ ಸಾಕಷ್ಟು ಉದ್ಯೋಗಗಳನ್ನು ಮಾಡಿ ಬೇಸತ್ತಿದ್ದರು. ಆದರೆ ಕೊನೆಯಲ್ಲಿ ಇವರ ಕೈಹಿಡಿದಿದ್ದೇ ಸ್ಟ್ಯಾಂಡ್ ಅಪ್ ಕಾಮಿಡಿ. ಕಪಿಲ್ ಶರ್ಮಾ ಶೋಗೆ ಕಾರಣವಾಗಿದ್ದೇ ಈ ಸ್ಟ್ಯಾಂಡ್ ಅಪ್ ಕಾಮಿಡಿ. ಇದೇ ಅವರ ಜೀವನಕ್ಕೆ ಅತಿ ದೊಡ್ಡ ತಿರುವು ಕೊಟ್ಟು ಇಂದು ಸೆಲೆಬ್ರಿಟಿಯಾಗಿಸಿದೆ.

publive-image

ಸದ್ಯ ಬಾಲಿವುಡ್​ ಹೀರೋಗಳಂತೆ ಕಪಿಲ್ ಶರ್ಮಾ ಲಕ್ಸುರಿ ಲೈಫ್​ಸ್ಟೈಲ್​ ನಡೆಸುತ್ತಿದ್ದು ಆಸ್ತಿ ಕೂಡ ದೊಡ್ಡ ಮಟ್ಟದಲ್ಲೇ ಹೊಂದಿದ್ದಾರೆ. ಮುಂಬೈನಲ್ಲಿ ಸೆಲೆಬ್ರಿಟಿಗಳೇ ವಾಸಿಸುವ ಅಂಧೇರಿ ವೆಸ್ಟ್​ ಪ್ರದೇಶದಲ್ಲಿ 15 ಕೋಟಿ ರೂಪಾಯಿ ಮೌಲ್ಯದ ಅಪಾರ್ಟ್​ಮೆಂಟ್​ ಹೊಂದಿದ್ದಾರೆ. ಇದು ದುಬಾರಿ ವೆಚ್ಚದ ಬಿಳಿ ಬಣ್ಣದ ಇಂಟಿರಿಯರ್​ನಿಂದ ಡಿಸೈನ್ ಮಾಡಲಾಗಿದೆ. ಅದ್ಭುತವಾಗಿ ಈ ಅಪರ್ಟ್​ಮೆಂಟ್ ಇದೆ.

ಇದಿಷ್ಟೇ ಅಲ್ಲ, ಕಪಿಲ್ ಶರ್ಮಾ ಅವರು ತಮ್ಮ ಹುಟ್ಟೂರು ಪಂಜಾಬ್​ನಲ್ಲಿ 25 ಕೋಟಿ ಮೌಲ್ಯದ ಫಾರ್ಮ್​ಹೌಸ್ ಹೊಂದಿದ್ದಾರೆ. ಫಾರ್ಮ್​ಹೌಸ್​ ಹಸಿರಿನ ಹುಲ್ಲಿನಿಂದ ಕೂಡಿದ್ದು ಸ್ಮಿಮ್ಮಿಂಗ್ ಪೂಲ್ ಇದೆ. ನಗರ ಜೀವನದಿಂದ ಬೇಸತ್ತು ವಿಶ್ರಾಂತಿ ಪಡೆಯಲು ಈ ತೋಟದ ಮನೆಗೆ ಕಪಿಲ್ ಆಗಾಗ ಹೋಗುತ್ತಿರುತ್ತಾರೆ ಎನ್ನಲಾಗುತ್ತಿದೆ.

ತಮ್ಮ ಬ್ಯುಸಿನೆಸ್​ ಅನ್ನು ಇನ್ನಷ್ಟು ವಿಸ್ತರಿಸಲು ಕಪಿಲ್ ಶರ್ಮಾ ಅವರ ಪತ್ನಿ ಗಿನ್ನಿ ಚತ್ರಾತ್ ಅವರು ಇತ್ತಿಚೆಗಷ್ಟೇ ಕೆನಡಾದ ಸರ್ರೆ ನಗರದಲ್ಲಿ ಕಾಪ್ಸ್​ ಕೆಫೆ ಓಪನ್ ಮಾಡಿದ್ದಾರೆ. ಇಲ್ಲಿ ಭಾರತದ ಪ್ರಸಿದ್ಧ ಘರ್ ವಾಲಿ ಚಹಾ ಫೇಮಸ್ ಆಗಿದೆಯಂತೆ. ಇದರ ಜೊತೆಗೆ ವಿಧ ವಿಧವಾದ ಕಾಫಿ, ಟೀ, ಸ್ನ್ಯಾಕ್ಸ್​ ಈ ಕೆಫೆಯಲ್ಲಿ ಲಭ್ಯ ಇವೆಯಂತೆ.

ಇದನ್ನೂ ಓದಿ:ಖ್ಯಾತ ಕಾಮಿಡಿಯನ್ ಕಪಿಲ್ ಶರ್ಮಾ ಅವರ ಹೊಸ ಕೆಫೆ ಮೇಲೆ ಗುಂಡಿನ ದಾಳಿ.. ಸ್ಥಳದಲ್ಲಿ ಆತಂಕ!

publive-image

ಇವುಗಳಷ್ಟೇ ಅಲ್ಲದೇ ಲಕ್ಸುರಿ ಕಾರು, ಬೈಕ್​ಗಳನ್ನು ಕಪಿಲ್ ಶರ್ಮಾ ಅವರ ಬಳಿ ಇವೆ. ಇವುಗಳಿಗೂ ಕೋಟ್ಯಂತರ ರೂಪಾಯಿ ವ್ಯಯ ಮಾಡಲಾಗಿದೆ ಎನ್ನಲಾಗಿದೆ. ಇದರಲ್ಲಿ ಮರ್ಸಿಡಿಸ್-ಬೆನ್ಜ್ S350, ರೇಂಜ್ ರೋವರ್ ಇವೊಕ್, ವೋಲ್ವೋ XC90 SUV ಹಾಗೂ 5.5 ಕೋಟಿ ರೂಪಾಯಿ ಮೌಲ್ಯದ ಕಸ್ಟಮ್-ವಿನ್ಯಾಸಗೊಳಿಸಿದ ವ್ಯಾನಿಟಿ ವ್ಯಾನ್ ಕೂಡ ಇರುವುದು ಮತ್ತೊಂದು ವಿಶೇಷ ಎನಿಸಿದೆ.

ಕಪಿಲ್ ಶರ್ಮಾ ಒಂದು ಶೋಗೆ ಪಡೆಯುವ ಸಂಭಾವನೆ ಕೇಳಿದರೆ ನೀವು ಶಾಕ್ ಆಗೋದು ಪಕ್ಕಾ. ಕಾಮಿಡಿಯನ್ ಆದರೂ ಸದ್ಯ ಕಪಿಲ್ ಶರ್ಮಾ ಬಳಿ 280 ಕೋಟಿ ರೂಪಾಯಿ ಇದೆ ಎನ್ನಲಾಗುತ್ತಿದೆ. ಅಲ್ಲದೇ ಪ್ರತಿ ಎಪಿಸೋಡ್​ ಕಾಮಿಡಿ ಶೋಗೆ ಬರೋಬ್ಬರಿ 5 ಕೋಟಿ ರೂಪಾಯಿಗಳ ಚಾರ್ಜ್​ ಮಾಡುತ್ತಾರಂತೆ. ಒಮ್ಮೆ ಉದ್ಯೋಗಕ್ಕಾಗಿ ಅಮೃತಸರದಿಂದ ಮುಂಬೈಗೆ ಹೋದ ಕಪಿಲ್ ಶರ್ಮಾ ಈಗ ಕೋಟ್ಯಾಧಿಪತಿ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment