newsfirstkannada.com

ಉದ್ಯಾನನಗರಿಯಲ್ಲಿ ಕರಗ ಸಂಭ್ರಮ; ದ್ರೌಪದಮ್ಮನ ಉತ್ಸವ ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು

Share :

Published April 24, 2024 at 8:21am

    ಸಿಲಿಕಾನ್​ ಸಿಟಿಯಲ್ಲಿ 8 ಶತಮಾನದಿಂದ ಕರಗ ಉತ್ಸವ

    ಆದಿಶಕ್ತಿ ರೂಪದಲ್ಲಿ ದ್ರೌಪದಿ ಮರಳಿದ್ದ ಪ್ರತೀಕವೇ ಕರಗ

    ವಿಶ್ವವಿಖ್ಯಾತ ಕರಗದಿಂದ ಇಂದು ರಾಜಧಾನಿಗೆ ರಾಜಕಳೆ

ಬೆಂಗಳೂರು ಕರಗವೆಂದರೆ ಅದು ನಮ್ಮ ಕನ್ನಡದ ನಾಡಿನ ಸಾಂಸ್ಕೃತಿಕ ಪ್ರತೀಕಗಳಲ್ಲೊಂದು. ಚೈತ್ರ ಮಾಸದ ಶುದ್ಧ ಪೌರ್ಣಿಮೆಯ ಬೆಳದಿಂಗಳ ಬೆಳಕಲ್ಲಿ ಮೂರು ದಿನಗಳ ಕಾಲ ನಡೆಯುವ ಈ ಉತ್ಸವವು ಸಂಪನ್ನಗೊಂಡಿದೆ. ಲಕ್ಷಾಂತರ ಮಂದಿ ಭಕ್ತರು ಐತಿಹಾಸಿಕ ಎನಿಸಿದ ಹೂವಿನ ಕರಗವನ್ನು ವೀಕ್ಷಿಸಿ ಕಣ್ತುಂಬಿಕೊಂಡರು.

ಚೈತ್ರ ಮಾಸದ ಶುದ್ಧ ಪೌರ್ಣಿಮೆಯ ಬೆಳದಿಂಗಳ ಬೆಳಕಲ್ಲಿ ಮಲ್ಲಿಗೆಯ ಕಂಪು ಬೀರುತ್ತಾ ‘ಗೋವಿಂದ… ಗೋವಿಂದ…’ ಎಂಬ ನಾಮಸ್ಮರಣೆಯೊಂದಿಗೆ ಬೆಂಗಳೂರು ಕರಗ ಶಕ್ತ್ಯೋತ್ಸವವು ಅತ್ಯಂತ ಸಡಗರ, ಸಂಭ್ರಮದೊಂದಿಗೆ ಅದ್ಧೂರಿಯಾಗಿ ಜರುಗಿತು. ಲಕ್ಷಾಂತರ ಮಂದಿ ಐತಿಹಾಸಿಕ ಹೂವಿನ ಕರಗವನ್ನು ಕಣ್ತುಂಬಿಕೊಂಡರು. ಕರಗ ಶಕ್ತೋತ್ವಸ ಪ್ರಯುಕ್ತ ಧರ್ಮರಾಯಸ್ವಾಮಿ ದೇವಾಯಲ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು.

ಇದನ್ನೂ ಓದಿ: ರಾಜ್ಯದ 14 ಕ್ಷೇತ್ರಗಳಲ್ಲಿ ಇಂದು ಬಹಿರಂಗ ಮತಯಾಚನೆಗೆ ತೆರೆ, ಸ್ಪರ್ಧಾ ಕಣದಲ್ಲಿ ಎಷ್ಟು ಅಭ್ಯರ್ಥಿಗಳಿದ್ದಾರೆ ಗೊತ್ತಾ?

ದೇವಾಲಯದಲ್ಲಿ ಪರಿವಾರ ಸಹಿತ ಧರ್ಮರಾಯಸ್ವಾಮಿಗೆ ಪೂಜೆ ಸಲ್ಲಿಸಿದ ಬಳಿಕ ಕುಂಭದಲ್ಲಿ ದುರ್ಗೆ ಅಂದ್ರೆ, ದ್ರೌಪದಿ ದೇವಿಯನ್ನು ಆಹ್ವಾನಿಸಿ, ಪೂಜಿಸಿ ಹೂವಿನಿಂದ ಅಲಂಕಾರ ಮಾಡಲಾಯಿತು. ಈ ವೇಳೆ ಹಳದಿ ಸೀರೆಯುಟ್ಟು, ಬಳೆ ತೊಟ್ಟಿದ್ದ ಧರ್ಮರಾಯ ದೇವಸ್ಥಾನದ ಅರ್ಚಕ ಜ್ಞಾನೇಂದ್ರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಮಧ್ಯರಾತ್ರಿ ಸುಮಾರು ಎರಡು ಗಂಟೆ ಹೊತ್ತಿಗೆ ಮಲ್ಲಿಗೆ ಹೂವಿನಿಂದ ಅಲಂಕೃತಗೊಂಡಿದ್ದ ಹೂವಿನ ಕರಗ ಹೊತ್ತು ಅರ್ಚಕ ಜ್ಞಾನೇಂದ್ರ ದೇವಾಲಯದಿಂದ ಹೊರ ಬಂದರು.

ಈ ವೇಳೆ ನೆರೆದಿದ್ದ ಭಕ್ತರು ‘ಗೋವಿಂದ ಗೋವಿಂದ’ ನಾಮಸ್ಮರಣೆ ಮಾಡುತ್ತಾ ಕರಗದ ಮೇಲೆ ಹೂ ಮಳೆಗೆರೆದರು. ಹೂವಿನ ಕರಗ ಹೊತ್ತು ಅರ್ಚಕ ಜ್ಞಾನೇಂದ್ರ ದೇವಸ್ಥಾನಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದ್ರು. ಬಳಿಕ ನೂರಾರು ವೀರ ಕುಮಾರರು ಹಾಗೂ ಸಹಸ್ರಾರು ಭಕ್ತರ ನಡುವೆ ನಗರ ಪ್ರದಕ್ಷಿಣೆ ಹೊರಟರು. ವೀರಕುಮಾರರು ಕೈಯಲ್ಲಿ ಕತ್ತಿ ಹಿಡಿದು ಕರಗ ರಕ್ಷಣೆ ಮಾಡುತ್ತಾ ಹಿಂದೆಯೇ ಸಾಗಿದರು. ಶಕ್ತಿ ಗಣಪತಿ ಮತ್ತು ಮುತ್ಯಾಲಮ್ಮದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಪ್ರತಿವರ್ಷದಂತೆ ಈ ವರ್ಷವೂ ದ್ರೌಪದಮ್ಮನ ಕರಗಕ್ಕೆ ಮಸ್ತಾನ್​ ಸಾಬ್​ ದರ್ಗಾದಲ್ಲಿ ಅರತಿ ಮಾಡಲಾಯ್ತು. ಬಳಿಕ ಅಣ್ಣಮ್ಮ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಧರ್ಮರಾಯಸ್ವಾಮಿ ದೇಗುಲಕ್ಕೆ ವಾಪಸ್​ ಆಗಲಿದೆ.

ಐತಿಹಾಸಿಕ ಕರಗ ಶಕ್ತೋತ್ಸವ ಹಿನ್ನೆಲೆ ಯಾವುದೇ ಅಹಿತರಕ ಘಟನೆಗಳು ನಡೆಯದಂತೆ ಬಿಗಿ ಬಂದೋಬಸ್ತ್​ ಕೈಗೊಳ್ಳಲಾಗಿತ್ತು. ಸಿಎಂ ಸಿದ್ದರಾಮಯ್ಯ, ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಗಳಾದ ಸೌಮ್ಯಾರೆಡ್ಡಿ ಮತ್ತು ತೇಜಸ್ವಿ ಸೂರ್ಯ ಧರ್ಮರಾಯಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ರು. ಒಟ್ಟಾರೆಯಾಗಿ ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಐತಿಹಾಸಿಕ ಕರಗ ಶಕ್ತೋತ್ಸವ ಅದ್ಧೂರಿಯಾಗಿ ಸಂಪ್ರದಾಯದಂತೆ ನೆರವೇರಿತು. ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿದ್ದ ಭಕ್ತರು ದ್ರೌಪದಮ್ಮನ ಕರಗವನ್ನು ಕಣ್ತುಂಬಿಕೊಂಡು ಪುನೀತರಾದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉದ್ಯಾನನಗರಿಯಲ್ಲಿ ಕರಗ ಸಂಭ್ರಮ; ದ್ರೌಪದಮ್ಮನ ಉತ್ಸವ ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು

https://newsfirstlive.com/wp-content/uploads/2024/04/bng-karaga-2.jpg

Load More