newsfirstkannada.com

ಪ್ರಿಯಾ ಜೊತೆ ರೊಮ್ಯಾನ್ಸ್ ಮಾಡಿದ ಶಿವರಾಜ್ ಕುಮಾರ್.. ‘ಮೀಟದೇನೆ ವೀಣೆ’ ಸಾಂಗ್‌ ವಿಶೇಷ ಏನು?

Share :

Published February 24, 2024 at 3:47pm

  ಬಿಡುಗಡೆಗೆ ರೆಡಿಯಾಗಿರುವ ಬಹು ನಿರೀಕ್ಷಿತ ಕರಟಕ ದಮನಕ

  ಶಿವರಾಜ್​ಕುಮಾರ್​ಗೆ ಸ್ಟೆಪ್ಸ್​ ಹೇಳಿ ಕೊಟ್ಟ ನಟ ಪ್ರಭುದೇವ

  ಯೋಗರಾಜ್​ ಭಟ್​ ಲಿರಿಕ್ಸ್​ಗೆ ಧ್ವನಿಗೂಡಿಸಿದ ರಾಜೇಶ್​ ಕೃಷ್ಣ

ಕರಟಕ ದಮನಕ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಸೆಂಚುರಿ ಸ್ಟಾರ್ ಶಿವರಾಜ್‌ ಕುಮಾರ್, ಇಂಡಿಯಾದ ಮೈಕಲ್ ಜಾಕ್ಸನ್​ ಪ್ರಭುದೇವ ಸೇರಿ ಒಟ್ಟಿಗೆ ಅಭಿನಯಿಸಿದ್ದಾರೆ. ಈಗಾಗಲೇ ಈ ಸಿನಿಮಾದ ಸಾಂಗ್ಸ್​ ಫುಲ್ ಹಿಟ್ ಆಗಿದ್ದು ಇದರ ಜೊತೆಗೆ ಚಿತ್ರತಂಡ ಇನ್ನೊಂದು ರೊಮ್ಯಾಂಟಿಕ್​ ಸಾಂಗ್ ಅನ್ನು ರಿಲೀಸ್ ಮಾಡಿದೆ. ಶಿವಣ್ಣ ಇನ್ನು ಫುಲ್ ಯಂಗ್ ಆಗಿ ಪ್ರಿಯಾ ಆನಂದ್ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ.

ಸದ್ಯ ಕರಟಕ ದಮನಕ ಸಿನಿಮಾದ ‘ಮೀಟದೇನೆ ವೀಣೆ’ ಎನ್ನುವ ಲಿರಿಕ್ಸ್ ಸಾಂಗ್ ಅನ್ನು ರಿಲೀಸ್ ಮಾಡಲಾಗಿದೆ. ಹಾಡಿನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್​ ಕುಮಾರ್ ಹಾಗೂ ನಟಿ ಪ್ರಿಯಾ ಆನಂದ್ ಬೊಂಬಾಟ್​ ಆಗಿ ಡ್ಯಾನ್ಸ್ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ಇನ್ನು ಹಾಡಿಗೆ ಪ್ರಭುದೇವ್ ಅವರು ಕೋರಿಯಾಗ್ರಾಫ್ ಮಾಡಿರುವುದು ಮನಮೋಹಕವಾಗಿದೆ.

ಈ ಹಾಡಿನ ಸಾಹಿತ್ಯವನ್ನು ಯೋಗರಾಜ್​ ಭಟ್​ ಬರೆದಿದ್ದು, ಗಾಯಕ ರಾಜೇಶ್​ ಕೃಷ್ಣ ಅವರು ಸುಮಧುರವಾಗಿ ಹಾಡಿದ್ದಾರೆ. ಇದರ ಜೊತೆಗೆ ವಿ.ಹರಿಕೃಷ್ಣ ಅವರು ಅಷ್ಟೇ ಸೊಗಸಾಗಿ ಮ್ಯೂಸಿಕ್ ನೀಡಿದ್ದರಿಂದ ಅದ್ಭುತವಾಗಿ ಹಾಡು ಹಿಂಪಾಗಿ ಮೂಡಿ ಬಂದಿದೆ. ರಾಕ್‌ಲೈನ್ ವೆಂಕಟೇಶ್ ಅವರು ಈ ಮೂವಿಗೆ ಬಂಡವಾಳ ಹೂಡಿದ್ದು ಚಿತ್ರವು ಪಂಚತಂತ್ರದ ಪ್ರಮುಖ ಪಾತ್ರಗಳಾದ ಕರಟಕ ದಮನಕದಿಂದ ಸ್ಫೂರ್ತಿ ಪಡೆದಿದೆ ಎನ್ನಲಾಗಿದೆ. ಇನ್ನೇನು ಮಾರ್ಚ್ 8ಕ್ಕೆ ‘ಕರಟಕ ದಮನಕ’ ಬಿಡುಗಡೆ ಆಗಲಿದೆ. ಯೋಗರಾಜ್ ಭಟ್ ನಿರ್ದೇಶನದ ಈ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಿಯಾ ಜೊತೆ ರೊಮ್ಯಾನ್ಸ್ ಮಾಡಿದ ಶಿವರಾಜ್ ಕುಮಾರ್.. ‘ಮೀಟದೇನೆ ವೀಣೆ’ ಸಾಂಗ್‌ ವಿಶೇಷ ಏನು?

https://newsfirstlive.com/wp-content/uploads/2024/02/SHIVARAJ_KUMAR_PRIYA.jpg

Load More